ಹುಳಿಯಾರು ಹೋಬಳಿ ಭಟ್ಟರಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಇಲ್ಲಿನ ಹಲವಾರು ಜನ ಜ್ವರದಿಂದ ಬಳಲುತ್ತಿದ್ದು ಮೂವರು ಸಾವನಪ್ಪಿದ್ದು ಇದಕ್ಕೆ ಡೆಂಗ್ಯೂ ಕಾರಣವೆಂದು ಗ್ರಾಮಸ್ಥರಲ್ಲಿ ಭೀತಿಯುಂಟಾಗಿದ್ದು. ಆರೋಗ್ಯ ಇಲಾಖೆಯವರಾಗಲಿ ಸ್ಥಳೀಯ ಆಡಳಿತದವರಾಗಲಿ ಯಾವುದೇ ಕ್ರಮಕೈಗೊಳ್ಳದೆ ಪ್ರೇಕ್ಷಕರಂತೆ ನೋಡುತ್ತಿದ್ದಾರೆ.
ಡೆಂಗ್ಯೂ ನಿಂದ ಸಾವನಪ್ಪಿದೆ ಎಂದು ಹೇಳಲಾದ ಮಲ್ಲಿಕಾರ್ಜುನಯ್ಯ ಹಾಗೂ ದೇವಿರಮ್ಮ. |
ಜನರಿಯಿಂದ ಈಚೆಗೆ ಜ್ವರದಿಂದ ಬಳಲುತ್ತಿದ್ದ ಇದೇ ಗ್ರಾಮದ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದ ಗೌಡರಾದ ಬಿ.ಎಸ್.ಕಾಂತರಾಜು(೪೮) , ಗ್ರಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನಯ್ಯ(೩೨) ಹಾಗೂ ಮೂರುದಿನ ಹಿಂದಷ್ಟೆ ದೇವಿರಮ್ಮ(೪೫) ಎಂಬುವರು ಸಾವನ್ನಪ್ಪಿದ್ದು , ಇವರುಗಳ ಮೆಡಿಕಲ್ ರಿಪೋರ್ಟ್ ನಲ್ಲಿ ಡೈಂಗ್ಯೂಜ್ವರದ ಕಾರಣ ನೀಡಲಾಗಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಆರೋಗ್ಯ ಇಲಾಖೆಯವರಿಗೆ ಹಾಗೂ ಸ್ಥಳೀಯ ಗ್ರಾ.ಪಂ.ಯವರಿಗೆ ತಿಳಿಸಿದರೂ ಸಹ ಉಪಯೋಗವಾಗಿಲ್ಲ. .ಅಲ್ಲದೆ ಈಗ ಗ್ರಾಮದಲ್ಲಿ ಜ್ವರಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಏಳು ಜನ ಹುಳಿಯಾರಿನ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಟ್ಟರಹಳ್ಳಿಗೆ ಸಮೀಪವೆ ಇರುವ ಯಳನಡು ಆಸ್ಪತ್ರೆಯಲ್ಲಿ ಸೂಕ್ತಚಿಕಿತ್ಸೆ ಸಿಗುತ್ತಿಲ್ಲ ಹಾಗೂ ಜೌಷಧಿಗಳು ದೊರೆಯದೆ ಜನ ಪರದಾಡುವಂತಾಗಿದೆ.
ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದು ಗ್ರಾಮ ಪಂಚಾಯ್ತಿಯವರು ಸ್ವಚ್ಚತೆ ಬಗ್ಗೆ ಗಮನಹರಿಸಿಲ್ಲ ಅಲ್ಲದೆ ನಮ್ಮ ಗ್ರಾಮದಲ್ಲಿ ಹಲವರು ಜ್ವರದಿಂದ ಬಳಲುತ್ತಿದ್ದಾರೆ ಒಮ್ಮೆ ಬಂದು ಪರಿಶೀಲಿಸಿ ಎಂದು ತಾಲ್ಲೂಕ್ ವೈದ್ಯಾಧಿಕಾರಿಗಳಿಗೆ ಪೋನ್ ಮೂಲಕ ಕೇಳಿಕೊಂಡರೂ ಸಹ ಅವರು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮದ ದಿನೇಶ್ ತಿಳಿಸುತ್ತಾರೆ.
ಗ್ರಾಮದಲ್ಲಿ ದಿನೇ ದಿನೇ ಜ್ವರಪೀಡಿತರ ಸಂಖ್ಯೆ ದ್ವಿಗುಣವಾಗುತ್ತಿದ್ದು ಶೀಘ್ರವೇ ಸೂಕ್ತ ಚಿಕಿತ್ಸಾಕ್ರಮ ಕೈಗೊಳ್ಳದೇ ಹೋದರೆ ಮತ್ತಷ್ಟು ಜನ ಸಾವಿಗೀಡಾಗುತ್ತಾರೆ ಇದಕ್ಕೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದವರೇ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ