ಹುಳಿಯಾರು ಹೋಬಳಿ ಕಾರೇಹಳ್ಳಿಯ ಪುರಾಣಪ್ರಸಿದ್ದ ಶ್ರೀಕಾರೇಹಳ್ಳಿರಂಗನಾಥಸ್ವಾಮಿಯ ಜಾತ್ರಾಮಹೋತ್ಸವ ಹಾಗೂ ಬಾರಿ ದನಗಳ ಜಾತ್ರೆ ತಾ.೨೮ರ ಶನಿವಾರದಿಂದ ಮಾ.೧೦ರ ಮಂಗಳವಾರದವರೆಗೆ ಹತ್ತುದಿನಗಳ ಕಾಲ ನಡೆಯಲಿದೆ.
ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ. |
ತಾ.೨೮ರ ಶನಿವಾರ ಮಾರುಹೊಳೆ ಗ್ರಾಮಸ್ಥರಿಂದ ಸ್ವಾಮಿಯ ಕಂಕಣ ಸೇವೆ,ಅಂಕುರಾರ್ಪಣೆ,ಧ್ವಜಾರೋಹಣ, ಉಯ್ಯಾಲೋತ್ಸವ, ತಾ.೧ರ ಭಾನುವಾರ ಗಾಣಧಾಳು ಗ್ರಾಮಸ್ಥರಿಂದ ಗಜಾರೋಹಣಕಾರ್ಯ, ತಾ.೨ರ ಸೋಮವಾರ ತಿಮ್ಮನಹಳ್ಳಿ ಗ್ರಾಮಸ್ಥರಿಂದ ಗರುಡವಾಹನೋತ್ಸವ ನಡೆಯಲಿದೆ. ತಾ.೩ರ ಮಂಗಳವಾರ ದಸೂಡಿಯ ಕೊಟ್ಟಿಗೆ ರಂಗೇಗೌಡರು ಹಾಗೂ ಸಮಿತಿವತಿಯಿಂದ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ.ಇದೇ ದಿನ ವಸಂತ ಬ್ರಾಹ್ಮಣರಿಗೆ ಹಾಗೂ ಆರ್ಯವೈಶ್ಯ ಮಂಡಳಿಯವರಿಗೆ ಅನ್ನಸಂತರ್ಪಣೆ ನಡೆಯಲಿದೆ,.
ತಾ.೪ರ ಬುಧವಾರ ಅಡ್ಡಪಲ್ಲಕ್ಕಿ ಉತ್ಸವ, ತಾ.೫ರ ಗುರುವಾರ ಓಕಳಿ, ಮಂಗಳಸ್ನಾನ, ಶಯನೋತ್ಸವ, ತಾ.೬ರ ಶುಕ್ರವಾರ ಸರ್ಪವಾಹನೋತ್ಸವ,ತಾ.೭ರ ಶನಿವಾರ ಚಂದ್ರಮಂಡಲೋತ್ಸವ, ತಾ.೮ರ ಭಾನುವಾರ ಪುಷ್ಪವಾಹನೋತ್ಸವ,ತಾ.೯ರ ಸೋಮವಾರ ಸೂರ್ಯಮಂಡಲೋತ್ಸವ, ತಾ.೧೦ರ ಮಂಗಳವಾರ ಸ್ವಾಮಿಗೆ ಪಂಚಾಮೃತಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯುವ ಮೂಲಕ ಜಾತ್ರೆಗೆ ತೆರೆ ಬೀಳಲಿದ್ದು ಹುಳಿಯಾರು ಹಾಗೂ ಸುತ್ತಮುತ್ತಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ