ಗ್ರಾಮಕ್ಕೆ ಕುಡಿಯುವ ನೀರು ಸರಿಯಾಗಿ ಸರಬರಾಜು ಮಾಡುತ್ತಿಲ್ಲವೆಂದು ರೊಚ್ಚಿಗೆದ್ದ ಕೆಲವರು ಗ್ರಾ.ಪಂ ಕಛೇರಿಗೆ ಬೀಗ ಜಡಿಯುವ ಮೂಲಕ ಪ್ರತಿಭಟಿಸಿದ ಘಟನೆ ಹೋಬಳಿಯ ದೊಡ್ಡಬಿದರೆಯಲ್ಲಿ ಶುಕ್ರವಾರ ಜರುಗಿದೆ.
ಗ್ರಾಮಕ್ಕೆ ಒಂದು ಓವರ್ ಹೆಡ್ ಟ್ಯಾಂಕ್ ಹಾಗೂ 5 ಸಿಸ್ಟನ್ ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿತ್ತು.ಮಿನಿಟ್ಯಾಂಕ್‌ಗೆ ನೀರು ಪೂರೈಸುತ್ತಿದ್ದ ಮೋಟರ್ ಅನ್ನು ಹೊಸಹಟ್ಟಿಗೆ ಅಳವಡಿಸಿರುವುದರಿಂದ ನೀರಿನ ಸಮಸ್ಯೆ ಸೃಷ್ಠಿಯಾಗಿದ್ದು ಕೂಡಲೇ ಹೊಸ ಮೋಟರ್ ಅಳವಡಿಸಿ ಅಲ್ಲಿಯವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಒತ್ತಾಯಿಸಿದರು.ಕಳೆದ ಹದಿನೈದು ದಿನಗಳಿಂದ ನೀರಿನ ಸಮಸ್ಯೆ ತಲೆದೂರಿದ್ದು ಈ ಬಗ್ಗೆ ಸದಸ್ಯರು ಹಾಗೂ ಪಂಚಾಯ್ತಿ ಕಾರ್ಯದರ್ಶಿ ಗಮನಹರಿಸಿಲ್ಲವೆಂದು ಆರೋಪಿಸಿದರು. ನೀರಿನ ಸಮಸ್ಯೆ ಬಗ್ಗೆ ಯಾರೊಬ್ಬರು ಗಮನಕ್ಕೆ ತಂದಿಲ್ಲವೆಂದ ಪ್ರಭಾರ ಪಿಡಿಓ ಗೌರಮ್ಮ ಗ್ರಾಮಕ್ಕೆ ನೀರು ಪೂರೈಸಲು ಮೋಟರ್ ಹಾಗೂ ಪೈಪ್ ಲೈನ್ ಮಾಡಿಸುವ ಭರವಸೆ ಮೂಲಕ ಧರಣಿಗೆ ಅಂತ್ಯ ಹಾಡಿದರು. ಪ್ರತಿಭಟನೆಯಲ್ಲಿ ಯೋಗೀಶ್, ಮುನಿಯಮ್ಮ, ರಾಮಣ್ಣ, ವಸಂತಯ್ಯ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ