ಐ.ಎ.ಎಸ್ ಹಾಗೂ ಕೆ.ಎ.ಎಸ್ ಸೇರಿದಂತೆ ಇನ್ನಿತರ ಉನ್ನತ ಪರೀಕ್ಷೆಗಳನ್ನು ಬರೆಯುವಂತೆ ಪರೀಕ್ಷಾರ್ಥಿಗಳು ಉತ್ತಮ ಆರೋಗ್ಯ ಸ್ವಾಸ್ಥ್ಯವನ್ನು ಹೊಂದಿದ್ದಾಗ ಮಾತ್ರ ಹೆಚ್ಚಿನ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ವೈದ್ಯರ ಸಂಘದ ಸಿದ್ದಶ್ರೀಕ್ಲಿನಿಕ್ ನ ವೈದ್ಯ ಸಿದ್ದರಾಮಯ್ಯ ತಿಳಿಸಿದರು.
ಹುಳಿಯಾರು ಹೋಬಳಿ ವೀರಶೈವ ಸಮಾಜದವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ಅಯೋಜಿಸಿದ್ದ ಉಚಿತ ಮಾರ್ಗದರ್ಶನ ಶಿಬಿರವನ್ನು ವೈದ್ಯ ಸಿದ್ದರಾಮಯ್ಯ ಉದ್ಘಾಟಿಸಿದರು. |
ಹುಳಿಯಾರು ಹೋಬಳಿ ವೀರಶೈವ ಸಮಾಜ, ಬಸವಸಮಿತಿ, ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ಶಿವ ವಿವಿದೋದ್ದೇಶ ಸಹಕಾರ ಸಂಘದವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ಬಸವಭವನದಲ್ಲಿ ಭಾನುವಾರ ಅಯೋಜಿಸಿದ್ದ ಉಚಿತ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ನಮ್ಮ ಸಂಸ್ಕೃತಿ ವಿನಾಶದತ್ತ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಕಣ್ಮರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಷಾಧಿಸಿದರು. ಯಾರು ಸಮಾಧಾನ, ಕ್ಷಮಾಗುಣ, ತಾಳ್ಮೆ ಹಾಗೂ ವಿನಮ್ರತೆಯನ್ನು ಮೈಗೂಡಿಸಿಕೊಂಡು ನಡೆಯುತ್ತಾರೋ ಅಂತಹವರು ಮಾತ್ರ ತಮ್ಮ ಗುರಿಯನ್ನು ತಲುಪುತ್ತಾರೆ ಎಂದರು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ವೇಳೆ ಹಾಗೂ ಪರೀಕ್ಷೆಗಳಿಗೆ ತಯಾರಿ ನಡೆಸುವ ಮೊದಲು ಅದಕ್ಕೆ ತಕ್ಕಂತೆ ಯೋಜನೆಯ ಜೊತೆಗೆ ಪೂರಕ ಪಠ್ಯವನ್ನು ಸಿದ್ದಮಾಡಿಕೊಂಡು ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಬಹುದು ಎಂದು ಕಿವಿಮಾತು ಹೇಳಿದರು.
ಆರ್ಯವೇದ ವೈದ್ಯ ಬಳ್ಳಾರಿಯ ಕೆ.ಶರಣಬಸವ ಅವರು ಅರ್ಯುವೇದ ಬಗ್ಗೆ ಹಾಗೂ ಉಪನ್ಯಾಸಕ ಕೆ.ಎಂ.ಈಶ್ವರಪ್ಪ ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ವೀರಶೈವ ಸಮಾಜದ ಗೌರವಾಧ್ಯಕ್ಷ ಕೆ.ಪಿ.ರಾಜಶೇಖರ್, ಕಾರ್ಯಕ್ರಮ ಅಯೋಜಕರಾದ ಹೆಚ್.ಸಿ.ಬಸವರಾಜು, ಕೆ.ಎಂ.ಗಂಗಾಧರಯ್ಯ, ಸಿದ್ರಾಮಯ್ಯ, ಕೆಂಕೆರೆ ರುದ್ರಪ್ಪ, ಗುಬ್ಬಿ ಸಿಐಟಿಯ ವಿಜಯ್ ಪ್ರಕಾಶ್, ನಿವೃತ್ತ ಶಿಕ್ಷಕರಾದ ಚನ್ನಬಸವಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ