ಸಮಾಜದಲ್ಲಿ ಅಂತ:ಕಲಹ , ಕ್ರೌರ್ಯ ತಾಂಡವವಾಡುತ್ತಿದ್ದು ನಾಡಿಗೆ ಭಾವೈಕ್ಯತೆ ಸಾರುವ ಚಿತ್ರದ ಅವಶ್ಯಕತೆಯಿದ್ದು ಉತ್ತಮ ಸಂದೇಶ ನೀಡುವಂತಹ ಚಿತ್ರ ನಿರ್ಮಾಣ ಮಾಡಲು ಮುಂದಾಗಿ ಎಂದು ಈಶ್ವರಾನಂದಪುರಿ ಸ್ವಾಮೀಜಿ ಅಶೀರ್ವಚನ ನೀಡಿದರು.
ಹುಳಿಯಾರು ಹೋಬಳಿ ನಂದಿಹಳ್ಳಿ ನಡೆದ ಜೈತುಳುನಾಡ್ ಚಿತ್ರದ ಮೂಹೂರ್ತ ಕಾರ್ಯದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮಿಜಿ ಅಶೀರ್ವಚನ ನೀಡಿದರು.ಈಶ್ವರಾನಂದಪುರಿ ಸ್ವಾಮೀಜಿ , ಸಹನಿರ್ಮಾಪಕರಾದ ನಂದಿಹಳ್ಳಿಶಿವಣ್ಣ ,ಫ್ರಾಂಕ್ ಫರ್ನಾಂಡಿಸ್ ಹಾಗೂ ಇತರರು. |
ಹುಳಿಯಾರು ಹೋಬಳಿ ನಂದಿಹಳ್ಳಿಯಲ್ಲಿ ಶುಕ್ರವಾರ ನಡೆದ ಜೈತುಳುನಾಡ್ ಚಿತ್ರದ ಮೂಹೂರ್ತ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಇದುವರೆಗೂ ಚಿತ್ರಗಳ ಮೂಹೂರ್ತಕ್ಕೆ ಸ್ವಾಮೀಜಿಗಳನ್ನು ಯಾರು ಕರೆದ ಉದಾಹರಣೆಗಳಿಲ್ಲ ನಮ್ಮ ಭಕ್ತರೊಬ್ಬರ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಶುಭವಾಗಲಿ ಎಂದು ತಾವು ಆಗಮಿಸಿದ್ದು ಎಲ್ಲರೂ ನೋಡೂವಂತ ಸದಭಿರುಚಿ ಚಿತ್ರ ನಿರ್ಮಾಣ ಮಾಡಲಿ ಎಂದರು.
ಪುರುಷೋತ್ತಮಾನಂದಪುರಿ ಸ್ವಾಮಿಜಿ ಮಾತನಾಡಿ, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಉತ್ತಮ ಸಂದೇಶ ಸಾರುವಂತಹ ಮಾಧ್ಯಮಗಳು ಅವಶ್ಯಕವಾಗಿದ್ದು ಸಂದೇಶ ಸಾರುವ ಜೊತೆಗೆ ಮನರಂಜನೆ ಹಾಗೂ ಸ್ಪೂರ್ತಿ ನೀಡುವಂತಹ ಚಿತ್ರ ನಿರ್ಮಾಣ ಮಾಡಿ ಎಂದರು. ಒಂದು ಸಿನಿಮಾ ನಿರ್ಮಿಸಲು ಸಾಕಷ್ಟು ಮಂದಿಯ ಪರಿಶ್ರಮವಿರುತ್ತದೆ. ಈ ತಂಡದಲ್ಲಿರುವ ನಿರ್ಮಾಪಕ, ನಿರ್ದೇಶಕರು ಉತ್ತಮ ಕಥೆಯೊಂದಿಗೆ ಉತ್ತಮ ಚಿತ್ರ ನಿರ್ಮಾಣ ಮಾಡಲಿ ಎಂದರು.
ಜಿ.ಪಂ.ಅಧ್ಯಕ್ಷ ಹುಚ್ಚಯ್ಯ ಮಾತನಾಡಿ ,ಕಲೆ ಹಾಗೂ ಸಂಸ್ಕೃತಿ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಚಲನಚಿತ್ರಗಳು ಮನುಷ್ಯನ ಬದುಕಿಗೆ ಪೂರಕ ವಾತಾವರ್ಣ ನಿರ್ಮಿಸಲಿ ಎಂದರು.
ನಿರ್ಮಾಪಕ ಫ್ರಾಂಕ್ ಫರ್ನಾಂಡಿಸ್ ಮಾತನಾಡಿ , ಇಲ್ಲಿ ಎಲ್ಲ ಧರ್ಮೀಯರು ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದು ಚಿತ್ರದ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು. ಸಹನಿರ್ಮಾಪಕ ನಂದಿಹಳ್ಳಿ ಶಿವಣ್ಣ ಉತ್ತಮ ಸಂಘಟಕನಾಗಿದ್ದು ಅವರನ್ನು ಶಾಸಕರನ್ನಾಗಿ ಮಾಡಲು ನೀವುಗಳು ಮುಂದಾಗಿ ಎಂದರು.
ಕಾರ್ಯಕ್ರಮದಲ್ಲಿ ಸಹನಿರ್ಮಾಪಕರಾದ ನಂದಿಹಳ್ಳಿಶಿವಣ್ಣ, ಆಲಿ ನಿಜಾನ್ ಅಹಮದ್, ಚಿತ್ರನಟಿ ಭವ್ಯ, ಜಿ.ಪಂ.ಸದಸ್ಯೆ ಮಂಜುಳಾಗವಿರಂಯ್ಯ, ತಾ.ಪಂ.ಸದಸ್ಯರಾದ ಜಯಣ್ಣ,ಬೀಬೀ ಫಾತೀಮಾ, ತಿಮ್ಲಾಪುರ ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ಜಬೀಉಲ್ಲಾ,ಜಲಾಲ್ ಸಾಬ್, ಸೀಮೆಣ್ಣೆ ಕೃಷ್ಣಯ್ಯ ಸೇರಿದಂತೆ ಚಿತ್ರತಂಡದವರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ