ಹುಳಿಯಾರು : ಹೋಬಳಿ ದಸೂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾಗಿ ಅವಿರೋಧ ಆಯ್ಕೆ ಭಾನುವಾರ ನಡೆಯಿತು.
ಗ್ರಾಮದ ಮುಖಂಡ ಹಾಗೂ ಮಾಜಿ ತಾಲ್ಲೂಕ್ ಬೋರ್ಡ್ ಸದಸ್ಯ ಆರ್.ರಂಗಸ್ವಾಮಿ ಅವರ ನೇತೃತ್ವದಲ್ಲಿ ಆಯ್ಕೆ ನಡೆದಿದ್ದು, ಮುಖಂಡರು ಒಟ್ಟಾಗಿ ಸೇರಿ ಸಭೆ ನಡೆಸಿ ವೃಥಾ ಚುನಾವಣೆಗೆ ಹಣ ಖರ್ಚು ಮಾಡುವ ಬದಲು ಅವಿರೋಧ ಆಯ್ಕೆ ಮಾಡಿದರು. ಸಾಮಾನ್ಯ ಕ್ಷೇತ್ರದಿಂದ ಡಿ.ಟಿ.ಅಶ್ವಥನಾರಾಯಣಶೆಟ್ಟಿ. ಎಂ.ಕೆ.ಕಾರಪ್ಪ, ಜಯರಾಮಯ್ಯ, ಡಿ.ಬಿ.ಶ್ರೀನಿವಾಸ್, ಹಿಂದುಳಿದ ವರ್ಗದಿಂದ ಎಸ್.ಚಿತ್ತಯ್ಯ ಉರುಫ್ ಹೊನ್ನಪ್ಪ, ಚಿತ್ತಯ್ಯ, ಮಹಿಳಾ ಕ್ಷೇತ್ರದಿಂದ ಲಕ್ಷ್ಮಕ್ಕ, ನಿಂಗಮ್ಮ, ಪರಿಶಿಷ್ಟ ಜಾತಿ ಮತ್ತು ವರ್ಗದಿಂದ ಜಯಣ್ಣ ಹಾಗೂ ಸಾಲ ಪಡೆಯದ ಕ್ಷೇತ್ರದಿಂದ ಚಿತ್ರಲಿಂಗಯ್ಯ ಅವರುಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು. ಶಿಕ್ಷಕ ರಾಜಣ್ಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ