ಹುಳಿಯಾರು ಪಟ್ಟಣದ ಸುವರ್ಣಮುಖಿ ಕ್ಯಾಂಪಸ್ ನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಎಂಟನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ "ವಿಐಎಸ್ ಫ್ಲೈರ್ -೨೦೧೫" ಕಾರ್ಯಕ್ರಮ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಂಭ್ರಮದಿಂದ ಎರಡು ದಿನಗಳ ಕಾಲ ನಡೆಯಿತು.
ದಂಡಿನಶಿವರದ ಉಪನ್ಯಾಸಕ ಡಾ.ನವೀನ್ ಹಳಮನೆ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿ, ಪೋಷಕರುಗಳು ತಮ್ಮ ಮಕ್ಕಳುಗಳನ್ನು ಹೆಚ್ಚಿನ ಅಂಕಗಳಿಸುವಂತೆ ಒತ್ತಡ ಹಾಕದೆ ಅವರ ಆಸೆ ಆಕಾಂಕ್ಷೆಗಳಿಗೂ ಒತ್ತುಕೊಟ್ಟು ಸರ್ವಾಂಗೀಣ ಪ್ರಗತಿಯತ್ತ ಗಮನಹರಿಸುವಂತೆ ಕಿವಿಮಾತು ಹೇಳಿದರು. ಇಂಜಿನಿಯರ್ ಹಾಗೂ ಡಾಕ್ಟರ್ ಆಗಲೇಬೇಕೆಂಬ ತಮ್ಮ ಹಂಬಲವನ್ನು ಮಕ್ಕಳ ಮೇಲೆ ಹಾಕದೆ ಅವರು ಬಯಸಿದ ಕ್ಷೇತ್ರದಲ್ಲಿ ಓದಿಸುವಂತೆ ಸಲಹೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಪ್ರಾಚಾರ್ಯ ರವಿ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ನೃತ್ಯರೂಪಕಗಳು,ನಾಟಕಗಳು ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮ ವೀಕ್ಷಿಸಲು ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದು ಮಕ್ಕಳ ಅಭಿನಯವನ್ನು ಕಣ್ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ