ಶ್ರೀ ಶಿರಡಿ ಸಾಯಿಬಾಬ ನಮ್ಮ ಪರಂಪರೆಯಲ್ಲಿನ ಸಾಧು ಸಂತರಲ್ಲಿ ಶ್ರೇಷ್ಠ ಹಾಗೂ ಮೊದಲಿಗರೆಂದು ಹಿರಿಯನಟ ಡಾ.ರಾಜೇಶ್ ಅಭಿಮತ ವ್ಯಕ್ತಪಡಿಸಿದರು.
ಹುಳಿಯಾರು ಹೋಬಳಿ ಬೋರನಕಣಿವೆಯ ಸೇವಾಚೇತನದಲ್ಲಿ ನೂತನ ಸಾಯಿಮಂದಿರ ಹಾಗೂ ಶಿರಡಿಸಾಯಿಬಾಬ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ನ್ಯಾಯಮೂರ್ತಿ ಪವನ್ ಕುಮಾರ್ ಭಜಂತ್ರಿ ಉದ್ಘಾಟಿಸಿದರು. |
ಹುಳಿಯಾರು ಹೋಬಳಿ ಬೋರನಕಣಿವೆಯ ಸೇವಾಚೇತನದಲ್ಲಿ ಶ್ರೀಶಿರಡಿ ಸಾಯಿಬಾಬ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ವತಿಯಿಂದ ಭಾನುವಾರದಂದು ನೂತನ ಸಾಯಿಮಂದಿರ ಹಾಗೂ ಶಿರಡಿಸಾಯಿಬಾಬ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಯಿಬಾಬ ಅವರ ಪವಾಡಗಳು ಹಾಗೂ ನಡೆನುಡಿಯಿಂದಾಗಿ ಇಂದು ಭಾರತದಲ್ಲಷ್ಟೆ ಅಲ್ಲ ವಿದೇಶದಲ್ಲೂ ಭಕ್ತರಿದ್ದು ಅಲ್ಲೂ ಸಹ ಬಾಬಾ ಮಂದಿರಗಳನ್ನು ಕಾಣಬಹುದಾಗಿದೆ ಎಂದರು. ಪತ್ರಿ ಎಂಬ ಕುಗ್ರಾಮದ ಹಿಂದೂಕುಟುಂಬದಲ್ಲಿ ಜನಿಸಿದ ಬಾಬರವರು ಮುಸ್ಲಿಂ ಸಮುದಾಯದಲ್ಲಿ ಬೆಳೆದರೂ ಸಹ ಅವರು ತಮ್ಮ ಧರ್ಮ ಇಂತಹದ್ದೇ ಎಂದು ಎಲ್ಲೂ ಹೇಳದೆ ನಾನು ಒಬ್ಬ ಮಾನವ ಎಂದು ಹೇಳುತ್ತಾ ಸಮಾಜದ ಜನರ ಅಭ್ಯುದಯಕ್ಕೆ ತನ್ನದೇ ಆದ ಸಂದೇಶಗಳನ್ನು ನೀಡಿದ್ದಾರೆ ಎಂದರು. ಇಂತಹ ಮಹಾನ್ ಸಂತನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದು ಮುಂದಿನ ದಿನಗಳಲ್ಲಿ ಈ ಕ್ಷೇತ್ರ ತನ್ನದೇ ಹೆಸರನ್ನು ಗಳಿಸಲಿದೆ ಎಂದು ತಿಳಿಸಿದರು. ಬಾಬ ಅವರನ್ನು ಆಧ್ಯಾತ್ಮಿಕ ಹಾಗೂ ಭೌತಿಕ ಜಗತ್ತಿನ ಮೂಲ ಪುರುಷ ಎಂದು ತಿಳಿಸುತ್ತಾರೆ. ಅದು ಅಕ್ಷರಸಹ ಸತ್ಯವಾದದ್ದು, ಬಾಬಾನ ಸ್ಮರಣೆಯಿಂದ ನಮ್ಮ ಜೀವನದಲ್ಲಿ ಶಾಂತಿ,ಸಂತೋಷ ಪ್ರಾಪ್ತಿಯಾಗಲಿದೆ ಎಂದರು.
ನೊಣವಿನಕೆರೆ ಶ್ರೀಕಾಡಸಿದ್ದೇಶ್ವರಮಠದ ಕರಿವೃಷಭ ಶಿವಯೋಗೀಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದು, ಹೈಕೋರ್ಟಿನ ನ್ಯಾಯಮೂರ್ತಿ ಪವನ್ ಕುಮಾರ್ ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ನ ಶಾಂತಮ್ಮ ಮಾತಾಜಿ, ಪಂಚಲಿಂಗೇಗೌಡ, ಕುಮಾರಸ್ವಾಮಿ, ರಮೇಶ್ ಗೌಡ, ಟ್ರಸ್ಟ್ ನ ಸಂಚಾಲಕ ವಿಠಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ