ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿದ್ದು ,ಶಾಲಾ ವಾರ್ಷಿಕೋತ್ಸವ ,ಕ್ರೀಡೆ,ಪ್ರತಿಭಕಾರಂಜಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಛಾಯಾಗ್ರಾಹಕ ಈಶ್ವರ್ ತಿಳಿಸಿದರು.
ಹುಳಿಯಾರಿನ ಎಂಜಿಎಂ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಛಾಯಾಗ್ರಾಹಕ ಈಶ್ವರ್ ಉದ್ಘಾಟಿಸಿದರು. |
ಹುಳಿಯಾರಿನ ವಿಜಯನಗರ ಬಡಾವಣೆಯ ಎಂಜಿಎಂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ೨೦೧೪-೧೫ ನೇ ಸಾಲಿನ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಿಗೆ ಹೊಲಿಸಿದರೆ ಖಾಸಗಿ ಶಾಲೆಗಳ ನಡುವೆ ಹೆಚ್ಚು ಪೈಪೋಟಿ ನಡೆಯುತ್ತಿದ್ದು ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲೂ ಸಹ ವಿನೂತನ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು. ಈ ವೇಳೆ ಮುಖ್ಯ ಶಿಕ್ಷಕಿ ಜಯಮ್ಮ, ಶಿರಾ ಹೆಚ್.ಪಿ.ಎಸ್.ಶಾಲೆಯ ಸಹ ಶಿಕ್ಷಕ ಗಿರೀಶ್, ಪೊಲೀಸ್ ರಂಗಸ್ವಾಮಿ, ಚರ್ಚ್ ನ ಫಾದರ್ ಕುಮಾರ್, ನಂದೀಶ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ