ಹುಳಿಯಾರು ಪಟ್ಟಣದ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿವತಿಯಿಂದ (ತಾ.೧೩) ಶುಕ್ರವಾರ ಬೆಳಿಗ್ಗೆ ಗಿರಿಜಾಕಲ್ಯಾಣೋತ್ಸವ ಕಾರ್ಯ ಏರ್ಪಡಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ೯.೩೦ರಿಂದ ೧೦.೩೦ರ ಶುಭ ಧನುಸ್ಸು ಲಗ್ನದಲ್ಲಿ ಪಾರ್ವತಿ ಪರಮೇಶ್ವರರ ಕಲ್ಯಾಣೋತ್ಸವ ನಡೆಯಲಿದ್ದು, ಇದರ ಅಂಗವಾಗಿ ಮುಂಜಾನೆ ನಾಂದಿ, ವರಪೂಜೆ, ನಿಶ್ಚಿತಾರ್ಥ ಕಾರ್ಯಗಳು ನಡೆಯಲಿವೆ. ಪ್ರತಿಯೊಬ್ಬ ಸಮಾಜ ಬಾಂಧವರು ತಪ್ಪದೇ ಹಾಜರಾಗಬೇಕೆಂದು ಸಮಿತಿಯ ಅಧ್ಯಕ್ಷ ಎಂ.ಎಸ್.ನಟರಾಜ್ ಗುಪ್ತ ಕೋರಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ