ಕಳೆದ ಮೂರು ತಿಂಗಳಿಂದ ಮುಂದೂಡುತಲೆ ಬಂದಿದ್ದ ಪಟ್ಟಣದ ಬಸ್ ನಿಲ್ದಾಣದ ಕೆರೆ ಜಾಗದಲ್ಲಿನ ಅಂಗಡಿ ತೆರವು ವಿವಾದದ ನಡುವೆಯೂ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ತೆರವು ಮಾಡಲಾಯಿತು. ಸುಪ್ರಿಂಕೋರ್ಟ್ ಆದೇಶದನ್ವಯ ತಾಲ್ಲೂಕ್ ಆಡಳಿತದಿಂದ ಕೈಗೊಳ್ಳಲಾಗಿದ್ದ ಒತ್ತುವರಿ ಕಾರ್ಯಕ್ರಮ ಒತ್ತಡದ ನಡುವೆ ಸಾಕಷ್ಟು ಕಾಲಾವಾಕಾಶ ನೀಡಿದ ನಂತರ ಸೋಮವಾರ ಅಂತಿಮವಾಗಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ಸಮಕ್ಷಮದಲ್ಲಿ ನಡೆಯಿತು.
ಕಳೆದ ಮೂರು ತಿಂಗಳಿನಿಂದಲೂ ರಾಜಕೀಯ ಒತ್ತಡದಿಂದ ಮುಂದೂಡತ್ತಲೆ ಬಂದಿದ್ದ ತೆರವು ಇಂದು ಯಾವುದೇ ಕಾರಣದಿಂದಲೂ ನಿಲ್ಲುವುದಿಲ್ಲ ಎಂದು ಅರಿತ ಅಂಗಡಿದಾರರು ಸ್ವಯಂಪ್ರೇರಿತರಾಗಿ ತಮ್ಮತಮ್ಮ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಮುಂದಾಗಿದ್ದರು. ಆದರೆ ಅಧಿಕಾರಿಗಳು ಈ ಹಿಂದೆ ಅಳತೆಯಲ್ಲಿ ಮಾಡಿದ ಎಡವಟ್ಟಿನಿಂದ ಸಮಸ್ಯೆತಲೆದೂರಿ ವಿಕೋಪಕ್ಕೆ ತಿರುಗಿ ಪ್ರತಿಭಟನೆಯೂ ಸಹ ನಡೆಯುವಂತೆ ಮಾಡಿತು. ಹಿಂದಿನ ಪಟ್ಟಿಯಲ್ಲಿದ್ದ ಅಂಗಡಿಯಾತನೊಬ್ಬನನ್ನು ಕೈಬಿಟ್ಟು ಉಳಿದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದೆ ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು.ಕೆರೆಒತ್ತುವರಿ ತೆರವುಗೊಳಿಸಿದ ತಹಸೀಲ್ದಾರ್ ಕಾಮಾಕ್ಷಮ್ಮ |
ಲಕ್ಷ್ಮಿಹಾರ್ಡ್ ವೇರ್ಅಂಗಡಿಯನ್ನು ಕೈಬಿಟ್ಟಿದ್ದಾರೆಂದು ಆರೋಪಿಸಿ ಅಂಗಡಿದಾರರು ಪ್ರತಿಭಟನೆ ನಡೆಸಿದರು. |
ಸಮಸ್ಯೆ ಏನು: ಸೋಮವಾರ ಬೆಳಿಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಯ ಗಡಿ ಗುರ್ತಿಸಲು ಬಂದಾಗ ಕಳೆದ ಬಾರಿ ಮಾಡಿ ಸರ್ವೆ ಮಾಡಿ ಗುರ್ತಿಸಿದ್ದ ಕರೆಯ ಗಡಿಯೂ ಸದ್ಯ ತೋರಿಸುತ್ತಿರುವ ಗಡಿಯೂ ಸಾಕಷ್ಟು ವ್ಯತ್ಯಾಸ ಕಂಡುಬಂತು. ಕಳೆದ ಬಾರಿ ಶಂಕರಪುರ ಬಡಾವಣೆ ಕಡೆಯಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ಸೇರಿದಂತೆ ಮೂರ್ನಾಲ್ಕು ಅಂಗಡಿಗಳು ಕೆರೆ ಒತ್ತುವರಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಕೆರಳಿದ ಸಾರ್ವಜನಿಕರು ಕಳೆದ ಬಾರಿ ಸರ್ವೆ ಮಾಡಿದಾಗ ಲಕ್ಷ್ಮಿ ಹಾರ್ಡ್ ವೇರ್ ನ ಅಂಗಡಿಯ ಪಕ್ಕದ ಸುಮಾರು ಹತ್ತನಡೆರಡು ಅಡಿಯಷ್ಟು ಜಾಗ ಕೆರೆಗೆ ಸೇರುತ್ತದೆ ಎಂದು ಹೇಳಿ ಇದೀಗ ಇಲ್ಲ ಎಂದು ಹೇಳುತ್ತಿದ್ದಿರಾ ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮುಕಿಗೆ ಮುಂದಾದರು.
ಎಲ್ಲರ ಒತ್ತಡಕ್ಕೆ ಮಣಿದ ತಹಸೀಲ್ದಾರ್ ಕಾಮಾಕ್ಷಮ್ಮ ಸರ್ವೆಯರ್ ರೊಂದಿಗೆ ಎಲ್ಲರ ಎದುರೆ ಮತ್ತೊಮ್ಮೆ ಆಳತೆ ಮಾಡಿಸಿದರು ಸಹ ಒಪ್ಪದ ಜನ ನೀವು ಈಹಿಂದೆ ಕೆರೆಬಾವಿಯಿಂದ ಅಳತೆ ಮಾಡಿದ್ದು, ಈಗ ಅಲ್ಲಿಂದ ೫೦೦ ಅಡಿ ದೂರವಿರುವ ಕೆರೆಯ ತೂಬಿನ ಬಳಿಯಿಂದ ಅಳತೆ ಮಾಡಿಸುತ್ತಿರುವುದು ತಪ್ಪೆಂದು ವಾಗ್ವಾದ ನಡೆಸಿದರು. ಕೇವಲ ಅಂಗಡಿಯೊಬ್ಬಾತನನ್ನು ಉಳಿಸುವ ನೆಪದಲ್ಲಿ ಬೇರೆ ಪಾಯಿಂಟ್ ನಿಂದ ಸರ್ವೆ ಮಾಡುತ್ತಿದ್ದು ನಿಮ್ಮ ಅಳತೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಗಾದೆ ತೆಗೆದರು.
ಧಿಕ್ಕಾರ: ಇವರ ಮನವಿಯನ್ನು ಪುರಸ್ಕರಿಸದ ತಹಸೀಲ್ದಾರ್ ವಿರುದ್ದ ಧಿಕ್ಕಾರ ಕೂಗಿದ ಅಂಗಡಿದಾರರು ಕಂದಾಯ ಇಲಾಖೆ ಅಧಿಕಾರಿಗಳು ೨೫ ಲಕ್ಷರೂಪಾಯಿ ಹಣಪಡೆದು ಅಳತೆಯಲ್ಲಿ ವ್ಯತ್ಯಾಸ ತೋರಿಸುತ್ತಿದ್ದಾರೆಂದು ಕೆಲ ಸಮಯ ಉರಿಬಿಸಿಲಲ್ಲಿ ಲಕ್ಷ್ಮಿ ಹಾರ್ಡ್ ವೇರ್ ಮುಂದೆ ಪ್ರತಿಭಟನೆ ಕುಳಿತರು. ಇದು ಬಡಜನರಿಗೆ ಮಾಡುತ್ತಿರುವ ಅನ್ಯಾಯ ಇದರಿಂದ ಸಾವಿರಾರು ಬಡಪಾಯಿಗಳ ಬದುಕು ಬೀದಿಗೆ ಬಂದಿದೆ ಎಂದು ಅಲವತ್ತು ಕೊಂಡರು.
ಸಮಸ್ಯೆಯನ್ನು ಅವಲೋಕಿಸಿದ ತಹಸೀಲ್ದಾರ್ ಸಂಜೆಯವರೆಗೂ ತಟಸ್ಥವಾಗಿದ್ದು ನಂತರ ಹುಳಿಯಾರು ಪೊಲೀಸ್ ಸೇರಿದಂತೆ ಹಂದನಕೆರೆ, ಚಿಕ್ಕನಾಯಕನಹಳ್ಳಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ತರಿಸಿ ಸಂಜೆ ೫ ಗಂಟೆ ವೇಳೆಗೆ ೨ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದರು.
ಮುಂಜಾನೆಯೇ ಅಂಗಡಿಯನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸಿದ್ದ ಪ್ರತಿಭಟನೆಕಾರರು ಅಳತೆ ನೆಪದಲ್ಲಿ ಈಗ ಬಿಟ್ಟಿರುವ ಲಕ್ಷ್ಮಿಹಾರ್ಡ್ ವೇರ್ ಅಂಗಡಿಯ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ತೆರವುಗೊಳಿಸಿಯೇ ಸಿದ್ದ ಎಂದು ಹೆಚ್ಚಿನ ಸಮಸ್ಯೆವೊಡ್ಡದೆ ಸುಮ್ಮನಾದರು.
ಸರ್ವೆಕಾರ್ಯದಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ, ಸಿಪಿಐ ಜಯಕುಮಾರ್ , ಹುಳಿಯಾರು ಪಿಎಸೈ ಪ್ರವೀಣ್ ಕುಮಾರ್, ಹಂದನಕೆರೆ ಪಿಎಸೈ ಸುನಿಲ್ ಕುಮಾರ್, ಚಿ.ನಾ.ಹಳ್ಳಿ ಪಿಎಸೈ ಮಹಾಲಕ್ಷ್ಮಿ ,ತಾಲ್ಲೂಕ್ ಸರ್ವೆಯರ್ ಬಸವರಾಜ್, ಲಕ್ಷ್ಮಿನರಸಿಂಹಯ್ಯ, ಸರ್ವೆ ಸೂಪರ್ ವೈಸರ್ ಮಹೇಶ್, ಡಿಟಿ ಸತ್ಯನಾರಾಯಣ್, ಆರ್ ಐ ಹನುಮಂತನಾಯಕ್, ಗ್ರಾಮಖ್ಖಿಗರಾದ ಶ್ರೀನಿವಾಸ್,ಸುಬ್ಬರಾಯಪ್ಪ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ