ಹುಳಿಯಾರು ಹೋಬಳಿ ಬೆಳ್ಳಾರ,ಲಕ್ಕೇನಹಳ್ಳಿ ಹಾಗೂ ಹೊಯ್ಸಳಕಟ್ಟೆಗೆ ಹೊಂದಿಕೊಂಡಿರುವ ಶ್ರೀಸಂಗಮೇಶ್ವರಸ್ವಾಮಿ ಭೂಕ್ಷೇತ್ರದಲ್ಲಿ ೨ನೇವರ್ಷದ ಮಹಾಶಿವರಾತ್ರಿಯ ಜಾಗರಣೆ ಹಾಗೂ ಪೂಜಾಮಹೋತ್ಸವ ತಾ.೧೭ರ ಮಂಗಳವಾರ ಮತ್ತು ತಾ.೧೮ರ ಬುಧವಾರ ನಡೆಯಲಿದೆ.
ಹುಳಿಯಾರು -ಶಿರಾ ಮಾರ್ಗದ ಬೆಳ್ಳಾರ,ಲಕ್ಕೇನಹಳ್ಳಿ ಹಾಗೂ ಹೊಯ್ಸಳಕಟ್ಟೆಗೆ ನಡುವಿನ ಸುವರ್ಣಮುಖಿ ನದಿ ತಟದಲ್ಲಿರುವ ಈ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ನಡೆಸಿಕೊಂಡು ಬರುತ್ತಿದ್ದು, ತಾ.೧೭ರ ಮಂಗಳವಾರ ಬೆಳಿಗ್ಗೆ ವೀರಣ್ಣವರ ಸೇವಾರ್ಥದಲ್ಲಿ ಸ್ವಾಮಿಗೆ ಗಂಗಾಪೂಜೆ,ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆದರೆ, ಜಾನಕಲ್ ಶಿವಣ್ಣ ಸಂಗಡಿಗರಿಂದ ಬಸವ ವಚನ ಗಾಯನ ಹಾಗೂ ಭಜನೆ ಕಾರ್ಯ ರಾತ್ರಿಯಿಡಿ ನಡೆಯಲಿದೆ. ತಾ.೧೮ರ ಬುಧವಾರ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳು ನಡೆದು ಮಹಾಮಂಗಳಾರತಿಯ ನಂತರ ಅನ್ನಸಂತರ್ಪಣೆ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ