ಇಲ್ಲಿನ ಗ್ರಾಮದೇವತೆ ಶ್ರೀಹುಳಿಯಾರಮ್ಮದೇವಿಯ ಜಾತ್ರಾಮಹೋತ್ಸವ ಶನಿವಾರದಂದು ಮಡಲಕ್ಕಿ ಸೇವೆಯೊಂದಿಗೆ ಚಾಲನೆಗೊಂಡಿದ್ದು (ತಾ.೩) ಮಂಗಳವಾರ ಆರತಿಬಾನ ಹಾಗೂ ಎಡೆಸೇವೆ ಕಾರ್ಯ ನಡೆಯಲಿದೆ.
ಹುಳಿಯಾರು ಗ್ರಾಮದೇವತೆ ಹುಳಿಯಾರಮ್ಮನ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಮಡಲಕ್ಕಿ ಸೇವೆಗೆ ಅಮ್ಮನವರನ್ನು ಭಕ್ತರ ಮನೆಗಳಿಗೆ ಕರೆದೊಯ್ಯುಲಾಯಿತು. |
ಶನಿವಾರದಂದು ಕೋಡಿಪಾಳ್ಯ,ಲಿಂಗಪ್ಪನಪಾಳ್ಯದ ಭಕ್ತಾಧಿಗಳಿಂದ ಹಾಗೂ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯದ ಭಕ್ತಾಧಿಗಳಿಂದ ಮಡಲಕ್ಕಿ ಸೇವೆ ನಡೆದು, ಸೋಮವಾರ ಬೆಳಿಗ್ಗೆ ಧ್ವಜಾರೋಹಣ ಮತ್ತು ಅಂಕುಕಾರ್ಪಣೆ ಹಾಗೂ ಪಟೇಲ್ ರಾಜ್ ಕುಮಾರ್ ಅವರ ನಿವಾಸದಲ್ಲಿ ಗ್ರಾಮಸ್ಥರ ಹಾಗೂ ಸಮಿತಿಯವರ ಸೇವಾರ್ಥದಲ್ಲಿ ಮದುವಣಗಿತ್ತಿಕಾರ್ಯ ನಡೆಯಿತು. ಮಂಗಳವಾರ ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಭಕ್ತರು ಅಮ್ಮನವರಿಗೆ ಆರತಿ ಹಾಗೂ ಎಡೆಸೇವೆ ನಡೆಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ