ಹುಳಿಯಾರು ಪಟ್ಟಣದ ಸುತ್ತಮುತ್ತ ಎಲ್ಲಾದರೂ ಹಾವುಗಳು ಕಂಡುಬಂದತೆ ಅಲ್ಲಿ ಈತ ಹಾಜರಿದ್ದು ಅಲ್ಲಿ ಎಂತಹ ಹಾವಾಗಿದ್ದರೂ ಸಹ ಆ ಹಾವನ್ನು ಸುರಕ್ಷಿತವಾಗಿ ಹಿಡಿಯುವುದಲ್ಲದೆ ಸುರಕ್ಷಿತ ಸ್ಥಳಗಳಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ ಹುಳಿಯಾರಿನ ಯತೀಶ್ ಸ್ಟುಡಿಯೋದ ಯತೀಶ್.
ಹಾವುಡಿಯುವುದನ್ನು ಹವ್ಯಾಸವಾಗಿಸಿಕೊಂಡಿರುವ ಹುಳಿಯಾರಿನ ಯತೀಶ್ ಸ್ಟುಡಿಯೋದ ಯತೀಶ್ ಹಾವೊಂದನ್ನು ಹಿಡಿದಿರುವುದು. |
ಈತ ಕಳೆದ ಕೆಲ ವರ್ಷದಿಂದ ಈ ಹವ್ಯಾಸದಲ್ಲಿ ತೊಡಗಿದ್ದು ಎಂತಹ ಹಾವಾದರೂ ಸರಿ ಹೆದರದೆ ತನ್ನ ಚಾಣಾಕ್ಷತನದಿಂದ ಹಾವನ್ನು ಹಿಡಿದು ಕಾಡಿಗೆ ಬಿಡುವ ಕಾರ್ಯ ಮಾಡುತ್ತಿದ್ದಾನೆ. ಕೆಲ ಜನರು ಹಾವನ್ನು ಕಂಡರೆ ಹೆದರಿದರೆ ಮತ್ತೆ ಕೆಲವರು ಅದನ್ನು ಹೊಡೆದು ಬಡಿದು ಸಾಯಿಸುತ್ತಾರೆ. ಹಾವು ಎಂದೂ ಯಾರಿಗೆ ತೊಂದರೆಕೊಡುವುದಿಲ್ಲ ನಾವು ಅದಕ್ಕೆ ತೊಂದರೆಕೊಟ್ಟಾಗ ಮಾತ್ರ ಅದು ನಮ್ಮನ್ನು ಕಚ್ಚುತ್ತದೆ ವಿನ: ತನ್ನಷ್ಟಕ್ಕೆ ಎಂದೂ ಕಚ್ಚುವುದಿಲ್ಲ. ದೇವರೆಂದು ಪೂಜಿಸುವ ಹಾವನ್ನು ಹೊಡೆದು ಸಾಯಿಸುವುದಕ್ಕಿಂತ ಅದನ್ನು ಹಿಡಿದು ಕಾಡಿಗೆ ಬಿಡುವುದು ಒಂದು ಉತ್ತಮ ಕಾರ್ಯವೆಂದು ತಾನು ನಂಬಿದ್ದು ಆ ನಿಟ್ಟಿ ಹಾವು ಹಿಡಿಯುವ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಈತ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಎಲ್ಲಿಯಾದರೂ ಸರಿ ಹಾವುಹಿಡಿಯಲು ಹೋಗುತ್ತಾರೆ. ಎಲ್ಲಾದರೂ ಹಾವುಗಳು ಕಂಡುಬಂದಲ್ಲಿ ಸಂಖ್ಯೆ ೯೯೮೬೫೯೪೭೧೮ ಗೆ ಕರೆ ಮಾಡಿ ತಿಳಿಸಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ