ತುಮಕೂರು ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕ್ಷತ್ರಿಯ ಮರಾಠ ಜನಾಂಗದ ಸಹೋಗದಲ್ಲಿ ನಾಳೆ(ತಾ.೧೯) ಗುರುವಾರ ತುಮಕೂರಿನ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಛತ್ರಪತಿ ಶಿವಾಜಿಯ ೩೮೮ನೇ ಶಿವಾಜಿ ಜಯಂತ್ಯೋತ್ಸವ ನಡೆಯಲಿದ್ದು ಹುಳಿಯಾರು ಹಾಗೂ ಸುತ್ತಮುತ್ತಲಿನ ಮರಾಠ ಸಮುದಾಯದವರು ಆಗಮಿಸುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ತಾಲ್ಲೂಕು ಅಧ್ಯಕ್ಷ ಗಂಗಾಧರರಾವ್ ಕರ್ಮೊರೆ ತಿಳಿಸಿದ್ದಾರೆ.
ಜಯಂತ್ಯೋತ್ಸವದ ಅಂಗವಾಗಿ ಜಾನಪದ ಕಲಾತಂಡಗಳ ಜೊತೆ ಶಿವಾಜಿಯ ಭಾವಚಿತ್ರದ ವೈಭವಯುತ ಮೆರವಣಿಗೆ ನಡೆಯಲಿದ್ದು ಚಿಕ್ಕನಾಯಕನಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಹೋಬಳಿಯ ವಳಗೇರಹಳ್ಳಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಿದ್ದು , ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ