ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ತಾವು ಅಕ್ಷರ ಕಲಿತ ಶಾಲೆಯನ್ನು ಮರೆಯದೆ ತಮ್ಮಿಂದಾಗುವ ಸಹಕಾರವನ್ನು ಶಾಲೆಗೆ ನೀಡಿ ಶಾಲೆಯ ಬೆಳವಣಿಗೆಗೆ ನೆರವಾಗಿ ಎಂದು ಕೇಶವ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಜಯಣ್ಣ ತಿಳಿಸಿದರು.
ಹುಳಿಯಾರಿನ ಕೇಶವ ವಿದ್ಯಾಮಂದಿರದ ಶಾಲಾವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಜಯಣ್ಣ ಮಾತನಾಡಿದರು. |
ಹುಳಿಯಾರಿನ ಕೇಶವ ವಿದ್ಯಾಮಂದಿರದಲ್ಲಿ ಬುಧವಾರ ಸಂಜೆ ನಡೆದ ೨೦೧೪-೧೫ ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕೇಶವ ಶಾಲೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲಿದ್ದಾರಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿರುವುದು ನಮ್ಮ ಶಾಲೆಗೆ ಹೆಮ್ಮೆ ತರುವಂತಹದ್ದು ಎಂದರು. ಮಕ್ಕಳು ಓದಿ ಸಮಯದಲ್ಲಿ ಇನ್ನಿತರ ಚಟುವಟಿಕೆಗಳತ್ತ ಗಮನಗೊಡದೆ ಓದನ್ನೇ ಮುಖ್ಯವಾಗಿಟ್ಟುಕೊಂಡು ಅಭ್ಯಾಸಿಸುವುದರಿಂದ ಯಶಸ್ಸು ಸಿಗುತ್ತದೆ ಎಂದರು. ಪೋಷಕರು ನಿತ್ಯ ತಮ್ಮ ಮಕ್ಕಳು ಶಾಲೆಯಲ್ಲಿ ಏನನ್ನು ಕಲಿಯುತ್ತಿದ್ದಾರೆ ಎಂಬುದರ ಬಗ್ಗೆ ಕೆಲ ಸಮಯ ವಿಚಾರ ಮಾಡುವಂತೆ ತಿಳಿಸಿದರು.
ಗ್ರಾ.ಪಂ.ಸದಸ್ಯ ಅಶೋಕ್ ಬಾಬು ಮಾತನಾಡಿ, ಪಟ್ಟಣದಲ್ಲಿ ಅನೇಕ ಶಾಲೆಗಳಿದ್ದರೂ ಸಹ ಕೇಶವ ಶಾಲೆ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದ್ದು ಇನ್ನಿತರ ಶಾಲೆಗಳಿಗೆ ಪೈಪೋಟಿ ನೀಡುತ್ತಾ ಬಂದಿದೆ ಹಾಗೂ ಉತ್ತಮ ಫಲಿತಾಂಶ ಸಹ ಶಾಲೆಯಲ್ಲಿ ಬರುತ್ತಿದೆ ಎಂದರು.
ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಸಮಾರಂಭ ಉದ್ಘಾಟಿಸಿದರು.ಬಾಲಕಿಯರ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಜಿ.ಕೆ.ಹೊನ್ನಯ್ಯ, ಸಂಸ್ಥೆಯ ಸಂಸ್ಥಾಪಕರಾದ ಹು.ಲ.ವೆಂಕಟೇಶ್, ಎಸ್.ಆರ್.ಎಸ್. ದಯಾನಂದ್, ಮುಖ್ಯಶಿಕ್ಷಕ ರವಿಶಂಕರ್ , ಗ್ರಾ.ಪಂ.ಸದಸ್ಯೆ ಗೀತಾಬಾಬು ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ