ವಿದ್ಯಾರ್ಥಿಗಳು ತಮ್ಮನ್ನು ತಾವು ಅರಿತುಕೊಂಡು ಪಠ್ಯದ ಜೊತೆ ಜೊತೆಗೆ ತಮ್ಮದೇ ಆದ ಉತ್ತಮಕೌಶಲ್ಯವನ್ನು ಮೈಗೂಡಿಸಿಕೊಳ್ಳುವಂತೆ ಪ್ರಾಚಾರ್ಯ ಹಾಗೂ ಸಾಹಿತಿಯೂ ಆದ ಬಿಳಿಗೆರೆ ಕೃಷ್ಣಮೂರ್ತಿ ಕಿವಿಮಾತು ಹೇಳಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ನಡೆದ ನೈಪುಣ್ಯ ನಿಧಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಂದಿನಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಗ್ಲೋಬರನ್ ಸಂಸ್ಥೆಯ ಸಹಯೋಗದಲ್ಲಿ ಪದವಿ ಹಂತದ ಪ್ರಥಮ ಬಿ.ಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಅಯೋಜಿಸಿದ್ದ ನೈಪುಣ್ಯ ನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ನಡೆದ ನೈಪುಣ್ಯನಿಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದ್ದ ನಂದಿನಿ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. |
ಪ್ರಸ್ತುತದಲ್ಲಿ ನಮ್ಮ ಸರ್ಕಾರದವರು ಹೇಳುವುದೊಂದು ಮಾಡುವುದು ಮತ್ತೊಂದು ಎಂಬಂತೆ ಪದವಿ ಹಂತದ ವಿದ್ಯಾರ್ಥಿಗಳು ಆಂಗ್ಲಭಾಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಹೇಳುತ್ತಾರೆ ಹೊರತು ಅದಕ್ಕೆ ತಕ್ಕಂತೆ ಬೋಧಕರನ್ನು ಮಾತ್ರ ನಿಯೋಜನೆ ಮಾಡುವುದಿಲ್ಲ, ಸದರಿ ಕಾಲೇಜಿನಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಓರ್ವ ಮಾತ್ರ ಆಂಗ್ಲ ಉಪನ್ಯಾಸಕರಿದ್ದಾರೆ. ಇಂತಹ ಹಲವು ಸಮಸ್ಯೆಗಳು ಪದವಿ ಹಂತದ ಕಾಲೇಜುಗಳಲ್ಲಿವೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ತಿಪಟೂರಿನ ನಂದಿನಿ ಅವರು ಪದವಿ ಹಂತದ ವಿದ್ಯಾರ್ಥಿಗಳಲ್ಲಿ ಹೊಸಹುರುಪನ್ನು ತರುವನಿಟ್ಟಿನಲ್ಲಿ ಈ ಕಾರ್ಯಕ್ರಮ ಅಯೋಜಿಸಿದ್ದು, ವಿದ್ಯಾರ್ಥಿಗಳು ಯಾವರೀತಿ ಅಭ್ಯಾಸಿಸಬೇಕು ಹಾಗೂ ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರಲ್ಲದೆ, ಇಂಗ್ಲಿಷ್ ಕಲಿಯಲ್ಲಿ ಉಂಟಾಗುವ ತೊಡಕುಗಳ ನಿವಾರಣೆ ಕುರಿತು ತಿಳಿಸಿದರು. ಸ್ಪೋಕನ್ ಇಂಗ್ಲಿಷ್ ಗೆ ನೆರವಾಗುವನಿಟ್ಟಿನಲ್ಲಿ ದೃಶ್ಯ ಮಾಧ್ಯಮದ ಮೂಲಕ ವಿಚಾರಗಳನ್ನು ತಿಳಿಸಿದರು.
ಈ ವೇಳೆ ಆಂಗ್ಲ ಉಪನ್ಯಾಸಕ ಶ್ರೀನಿವಾಸಪ್ಪ, ಕಾರ್ಯಕ್ರಮ ಸಂಯೋಜಕ ಹನುಮಂತಪ್ಪ, ಉಪನ್ಯಾಸಕರಾದ ಚಂದ್ರಮೌಳಿ, ದೈಹಿಕ ಶಿಕ್ಷಣ ಸಂಯೋಜಕ ಶಿವಯ್ಯ, ಗ್ರಂಥಪಾಲಕ ಲೋಕೇಶ್ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ