ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ತ.ಶಿ.ಬಸವಮೂರ್ತಿ ಅವರು ಶಿವಶರಣರ ಸಂದೇಶ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಮೀಪದ ಕೋಡಿಹಳ್ಳಿ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಕೆ.ಎಸ್.ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಅವರು ಉಪನ್ಯಾಸ ನೀಡಿದರು.
ಸತ್ಯಶುದ್ದ ಕಾಯಕ,ದಾಸೋಹ,ಸರ್ವಸಮಾನತೆ,ಸ್ತ್ರೀ ಸ್ವಾತಂತ್ರ್ಯ,,ಮೂಡನಂಬಿಕೆಗಳ ತಿರಸ್ಕಾರ ಮತ್ತು ಏಕ ದೇವತೋಪಾಸನೆ ಮುಂತಾದ ವಿಷಯಗಳ ಕುರಿತಾಗಿ ಶಿವಶರಣರು ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದರು. ತಮ್ಮ ವಚನಗಳ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡುವ ಕಾರ್ಯಮಾಡಲು ಮುಂದಾದವರು ಶಿವಶರಣರೇ ಆಗಿದ್ದಾರೆ ಎಂದರು.
ಬೆಂಗಳೂರಿನ ನೊಳಂಬವಾಣಿ ತ್ರೈಮಾಸಿಕ ಪತ್ರಿಕೆಯ ಸಂಪಾದಕ ವೈ.ಆರ್.ಚನ್ನಬಸವಯ್ಯ ಮಾತನಾಡಿ, ಶಿವಶರಣರ ಅನುಭವಾಮೃತ ಕುರಿತು ತಿಳಿಸಿದರಲ್ಲದೆ, ಹೋಬಳಿ ಕಸಾಪ ನಡೆಸಿಕೊಂಡುಬರುತ್ತಿರುವ ಈ ಕಾರ್ಯಕ್ರಮಕ್ಕೆ ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸಿದರು. ಗೋಷ್ಠಿಯಲ್ಲಿ ಹೇಮಾ ಪ್ರಾರ್ಥಿಸಿ, ನಿವೃತ್ತಶಿಕ್ಷಕ ಚಂದ್ರಪ್ಪ ಸ್ವಾಗತಿಸಿ, ಉಪನ್ಯಾಸಕ ಶ್ರೀಕಂಠಮೂರ್ತಿ ನಿರೂಪಿಸಿ, ಮುಖ್ಯಶಿಕ್ಷಕ ಜಯಣ್ಣ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ