ಗ್ರಾಮಪಂಚಾಯತಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಶೇ.೨೨ ರ ಅನುದಾನದ ಅಡಿಯಲ್ಲಿ ಪಟ್ಟಣದ ವಿವಿಧ ಬ್ಲಾಕ್ ನಲ್ಲಿ ಗ್ರಾ.ಪಂ.ಸದಸ್ಯರು ಪರಿಶಿಷ್ಟ ಜಾತಿ/ಪಂಗಡದ ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಉಚಿತ ಸೋಲಾರ್ ಲೈಟ್ ಗಳನ್ನು ವಿತರಿಸಿದರು.
ಹುಳಿಯಾರು ಗ್ರಾ.ಪಂ.ವತಿಯಿಂದ ಪಟ್ಟಣದ ಪರಿಶಿಷ್ಟ ಜಾತಿ/ಪಂಗಡದ ಅರ್ಹ ಫಲಾನುಭವಿಗಳಿಗೆ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಸದಸ್ಯರಾದ ಅಶೋಕ್ ಬಾಬು,ಗೀತಾ ಬಾಬು, ಅಬೀಬ್ ಉನ್ನಿಸಾ ಉಚಿತ ಸೋಲಾರ್ ದೀಪ ವಿತರಿಸಲಾಯಿತು. |
೫ ನೇ ಬ್ಲಾಕ್ ನಲ್ಲಿ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಸದಸ್ಯರಾದ ಅಶೋಕ್ ಬಾಬು, ಗೀತಾಬಾಬು, ಜಹೀರ್ ಸಾಬ್ ಸೋಲಾರ್ ದೀಪಗಳನ್ನು ವಿತರಿಸಿದರೆ, ೮ ನೇ ಬ್ಲಾಕ್ ನಲ್ಲಿ ಸದಸ್ಯರಾದ ಏಜೆಂಟ್ ಗಂಗಣ್ಣ, ಬಡ್ಡಿಪುಟ್ಟರಾಜ್, ಪುಟ್ಟಿಬಾಯಿ ಸೋಲಾರ್ ಲೈಟ್ ವಿತರಿಸಿದರು. ಉಳಿದ ಬ್ಲಾಕ್ ಗಳಲ್ಲೂ ಸಹ ಅಯಾಯ ಬ್ಲಾಕ್ ನ ಸದಸ್ಯರುಗಳು ತಲಾ ೧೦ ಸೋಲಾರ್ ದೀಪಗಳನ್ನು ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ