ಹುಳಿಯಾರು ಪಟ್ಟಣದ ಇಂದಿರಾನಗರದಲ್ಲಿ ಕೆಲ ದಿನಗಳ ಹಿಂದೆ ಆಟೋ ಸಿಲಿಂಡರ್ ಸ್ಫೋಟದಿಂದ ತೀವ್ರ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ನೀಡುತ್ತಿದ್ದ ಚಿಕಿತ್ಸೆಯಲ್ಲಿ ಸಂಪೂರ್ಣವಾಗಿ ಗುಣಮುಖವಾಗದಿದ್ದರೂ ಸಹ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
ಹುಳಿಯಾರಿನಲ್ಲಿ ನಡೆದ ಆಟೋ ಸಿಲಿಂಡರ್ ಸ್ಪೋಟದಿಂದ ಗಾಯಗೊಂಡ ಮಕ್ಕಳು ಸಂಪೂರ್ಣ ಗುಣಮುಖರಾಗದಿದ್ದರೂ ನಮ್ಮನ್ನು ಮನೆಗೆ ಕಳುಹಿಸಿದ್ದು ಸಾವಿರಾರೂ ನ ಅಯಿನ್ ಮೆಂಟ್ ಬರೆದಿರುವ ಚೀಟಿಯನ್ನು ತೋರಿಸುತ್ತಿರುವ ಪೋಷಕರು. |
ಪ್ರಕರಣ ನಡೆದು ಜಿಲ್ಲಾಸ್ಪತ್ರೆಗೆ ದಾಖಾಲಾಗಿದ್ದಾಗ ಆಗಮಿಸಿದ್ದ ಸಚಿವೆ ಉಮಾಶ್ರೀ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಮಕ್ಕಳಿಗೆ ಸಂಪೂರ್ಣ ಚಿಕಿತ್ಸೆ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಈಗ ನಮ್ಮ ಮಕ್ಕಳು ಸಂಪೂರ್ಣ ಗುಣಮುಖವಾಗದಿದ್ದರೂ ಸಹ ನಮಗೆ ತಿಳಿಯದ ಏನೋ ಸಬೂಬು ಹೇಳಿ ಮಕ್ಕಳನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಈ ಬಗ್ಗೆ ಸಚಿವರು, ಶಾಸಕರು ಕ್ರಮಕೈಗೊಳ್ಳಬೇಕು ಎಂದು ಮಕ್ಕಳ ಪೋಷಕರು ಮನವಿ ಮಾಡಿದರು.
ತೀವ್ರಗಾಯದ ನೋವಿನಿಂದ ಬಳತ್ತಿರುವ ಮಕ್ಕಳೊಂದಿಗೆ ಪೋಷಕರು. |
ಚೈತ್ರ, ಮುಸೀಫ್ ಪಾಷ, ಅಯಿಶ್ ಸಿಮ್ರಾನ್, ಮಹೀಮೂರ್,ಉಮೇರ್ ಷಿಫಾ, ತುಳಸಿ, ರೆಹಾನ್, ಹೇಮಾ, ಲಕ್ಷ್ಮಿ ಮಕ್ಕಳು ಸಂಪೂರ್ಣ ಗುಣಮುಖವಾಗದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಬಂದಿದ್ದು, ನಿತ್ಯ ನೋವಿನಿಂದ ನರಳುತ್ತಿದ್ದಾರೆ. ಅಲ್ಲದೆ ಮಕ್ಕಳ ಗಾಯಗಳಿಗೆ ಹಚ್ಚಲು ಸುಮಾರು ೧೫೦೦ ರಿಂದ ೨೫೦೦ರೂ ವರೆಗಿನ ಆಯಿಂಟ್ ಮೆಂಟ್ ಬರೆದುಕೊಟ್ಟಿದ್ದು ನಮಗೆ ಕೊಳ್ಳಲು ದುಬಾರಿಯಾಗಿದೆ.ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದನ್ನು ಬಿಟ್ಟರೆ ಮಕ್ಕಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆಯೇ ಇಲ್ಲವೆ ಎಂಬುದರ ಬಗ್ಗೆ ಒಂದು ದಿನವೂ ಗಮನ ಮಾಡಿಲ್ಲ. ಅಲ್ಲದೆ ಆಸ್ಪತ್ರೆಯಲ್ಲಿ ಮಾತ್ರೆ, ಇಂಜಕ್ಷನ್ ಟ್ಯೂಬ್, ಅಯಿನ್ ಮೆಂಟ್ ತರುವಂತೆ ಚೀಟಿ ಬರೆದುಕೊಟ್ಟು ನಮ್ಮಿಂದಲ್ಲೇ ತರಿಸಿದ್ದಾರೆ ಎಂದು ಚೈತ್ರ ಮಗುವಿನ ತಂದೆ ರಘು ತಿಳಿಸಿದರು.
ಗಾಯಗೊಂಡಿರುವ ಪೋಷಕರು ದಿನನಿತ್ಯ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ .ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮೇಲೆ ಸಾಲ ಮಾಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಇದುವರೆಗೂ ಒಬ್ಬೊಬ್ಬ ಮಗುವಿಗೂ ಕಡಿಮೆ ಎಂದರೆ ಹತ್ತು ಸಾವಿರದವರೆಗೆ ಖರ್ಚಾಗಿದೆ .ಅಲ್ಲದೆ ನಾವು ಹುಳಿಯಾರಿನಿಂದ ಬೆಂಗಳೂರಿನ ಆಸ್ಪತ್ರೆಹೋಗಿ ಬಂದಿದ್ದು ಸೇರಿದಂತೆ ಸಾವಿರಾರು ರೂಪಾಯಿ ಖರ್ಚಾಗಿದೆ ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸುವಂತೆ ಮಹೀನೂರ್ ಮಗುವಿನ ತಂದೆ ಮನ್ಸೂರ್ ಪಾಷ ತಿಳಿಸಿದರು.
ಮಕ್ಕಳನ್ನು ಡಿಸ್ಚಾರ್ಜ್ ಮಾಡಿದ್ದರ ಬಗ್ಗೆ ಆಸ್ಪತ್ರೆಯವರನ್ನು ಕೇಳಿದರೆ ಮಕ್ಕಳು ಗುಣಮುಖರಾಗಿದ್ದಾರೆ ದಿನಾಲೂ ಆಯಿಂಟ್ ಮೆಂಟ್ ಹಚ್ಚಿ ಸರಿಯೋಗುತ್ತದೆ ಹಾಗೂ ವಾರಕ್ಕೆ ಮೂರು ಬಾರಿ ಬಂದು ತೋರಿಸಿಕೊಂಡು ಹೋಗಿ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸಿ ಕಳುಹಿಸಿದ್ದಾರೆ. ಅಲ್ಲದೆ ಘಟನೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿ ಮೈಕೈ ಸುಟ್ಟುಕೊಂಡವರಲ್ಲಿ ಹೆಚ್ಚು ಹೆಣ್ಣು ಮಕ್ಕಳೇ ಇದ್ದು ಅವರ ಮುಖ, ಕೈಕಾಲು ,ಹೊಟ್ಟೆ ಭಾಗ ಸುಟ್ಟಿದ್ದು ಮಕ್ಕಳ ರೂಪವೇ ಬದಲಾಗಿದೆ ಹೀಗಿರುವಾಗ ಮಕ್ಕಳ ಮುಂದಿನ ಭವಿಷ್ಯವೇನು, ಸಮಾಜದಲ್ಲಿ ಅವರು ಬಾಳುವುದೇಗೆ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಗಾಯಗೊಂಡ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ನಮ್ಮ ಮಕ್ಕಳ ಈ ನೋವಿಗೆ ಶೀಘ್ರದಲ್ಲೇ ಸ್ಪಂದಿಸುವಂತೆ ಸಚಿವರಿಗೆ, ಶಾಸಕರಿಗೆ ಹಾಗೂ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸುತ್ತೇವೆ ಆ ಪತ್ರಕ್ಕೆ ಅವರು ಸಮ್ಮತಿ ನೀಡಿ ಸೂಕ್ತ ಕ್ರಮಕೈಗೊಳ್ಳದೆ ಹೋದರೆ ಮುಂದಿನ ದಿನದಲ್ಲಿ ಉಗ್ರಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ