ಹುಳಿಯಾರು ಪಟ್ಟಣದ ಆರ್ಯವೈಶ್ಯ ಮಂಡಳಿವತಿಯಿಂದ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರದಂದು ಲೋಕಕಲ್ಯಾಣಾರ್ಥ ಅಯೋಜಿಸಿದ್ದ ಗಿರಿಜಾಕಲ್ಯಾಣೋತ್ಸವ ಸಮುದಾಯದವರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.
ಹುಳಿಯಾರಿನ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಗಿರಿಜಾಕಲ್ಯಾಣೋತ್ಸವದ ಅಂಗವಾಗಿ ಮುತೈದೆಯರಿಂದ ಒನಕೆಯಲ್ಲಿ ಭತ್ತ ಕುಟ್ಟುವ ಶಾಸ್ತ್ರ ನಡೆಯಿತು. |
ಅರ್ಚಕ ರಾಮಚಂದ್ರ ಭಟ್ರ ಪೌರೋಹಿತ್ಯದಲ್ಲಿ ಮುಂಜಾನೆಯೇ ಪಂಚಲೋಹದ ಪಾರ್ವತಿ ಪರಮೇಶ್ವರ ಮೂರ್ತಿಗಳನ್ನು ಸಿದ್ಧಗೊಳಿಸಿ ವಿಶೇಷ ವಸ್ತ್ರಾಭರಣಗಳಿಂದ ಅಲಂಕಾರ ಮಾಡಲಾಗಿತ್ತು ಪ್ರತಿಷ್ಠಾಪನೆ ನಂತರ ಗೋಪೂಜೆ, ನಾಂದಿ, ಕಳಸ ಪ್ರತಿಷ್ಠಾಪನೆ , ಅಷ್ಟಾವಾಧಾನ ಸೇವೆ, ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಕಾರ್ಯಗಳು ನಡೆಯಿತು. ವಿವಾಹ ಸಂದರ್ಭದಲ್ಲಿ ನಡೆಯುವ ನಿಶ್ಚಿತಾರ್ಥ, ವರಪೂಜೆ ನಡೆದ ನಂತರ ಧನುಸ್ಸು ಲಗ್ನದಲ್ಲಿ ಧಾರೆಕಾರ್ಯ ನಡೆಯಿತು. ಹೆಣ್ಣು ಗಂಡಿನ ಕಡೆಯವರಾಗಿ ಗಾಯತ್ರಿ ನಾಗರಾಜು, ಆರತಿಕೃಷ್ಣಮೂರ್ತಿ, ಜ್ಯೋತಿ ನಾಗರಾಜು, ವೀಣಾ ನಾಗಭೂಷಣ್ ದಂಪತಿಗಳು ಸೇರಿ ಪೂಜೆ ನಡೆಸಿದರು.
ಧಾರೆ ಕಾರ್ಯದ ನಂತರ ಮಹಿಳಾ ಭಜನಾ ಮಂಡಳಿಯವರು ಭಜನಾ ಕಾರ್ಯ ನಡೆಸಿಕೊಟ್ಟರು. ಈ ವೇಳೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಂ.ಎಸ್.ನಟರಾಜ ಗುಪ್ತ, ಟಿ.ಆರ್.ರಂಗನಾಥ್, ರಾಮನಾಥ್, ಬಿ.ವಿ. ಶ್ರೀನಿವಾಸ್,ಟಿ.ಜಿ. ರಮಾಕಾಂತ್, ಟಿ.ಆರ್.ರಾಮಮೂರ್ತಿ ಸೇರಿದಂತೆ ಆರ್ಯವೈಶ್ಯ ಯುವಕ ಮಂಡಳಿ, ಆರ್ಯವೈಶ್ಯ ಮಹಿಳಾ ಮಂಡಳಿ, ವಾಸವಿ ವಿದ್ಯಾಸಂಸ್ಥೆಯವರು ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದು ಗಿರಿಜಾ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ