ಕುತೂಹಲ ಕೆರಳಿಸಿದ್ದ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೧೫ ರಿಂದ ೨೦೨೦ನೇ ಸಾಲಿನ ೫ ವರ್ಷದ ಅವಧಿಯ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ೧೦ ಮಂದಿ ನಿರ್ದೇಶಕರ ಆಯ್ಕೆ ನಡೆಯಿತು.
ಹುಳಿಯಾರಿನ ಅಂದಾನಪ್ಪನ ಸೊಸೈಟಿಯ ಚುನಾವಣೆಯಲ್ಲಿ ಸಾಲಪಡೆಯದವರ ಕ್ಷೇತ್ರದಿಂದ ಆಯ್ಕೆಯಾದ ಧನುಷ್ ರಂಗನಾಥ್ ಅವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು. |
ಸಾಲಪಡೆದವರ ಕ್ಷೇತ್ರದಲ್ಲಿ ೯ ಸ್ಥಾನಗಳಿಗೆ ಸಾಮಾನ್ಯ ವರ್ಗದಿಂದ ಹೊಸಹಳ್ಳಿ ಟಿ.ಜೆ.ಜಗದೀಶ್ (೨೫೪ ಮತ), ಹೊಸಹಳ್ಳಿ ಜಯಣ್ಣ (೨೨೪ ಮತ), ಕಲ್ಲಹಳ್ಳಿ ನಾಗರಾಜು (೨೧೭ಮತ), ನಂದಿಹಳ್ಳಿ ಬೋರಲಿಂಗಯ್ಯ (೨೨೭ಮತ) ಪಡೆದರೆ ಹಿಂದುಳಿದ ವರ್ಗ ಬಳ್ಳೆಕಟ್ಟೆ ರಾಮಯ್ಯ (೨೭೭ಮತ), ಹೊಸಹಳ್ಳಿ ಎಚ್.ಆರ್.ರಾಜಣ್ಣ (೨೭೧ ಮತ), ಮಹಿಳಾ ಮೀಸಲು ಕ್ಷೇತ್ರದಿಂದ ಹುಳಿಯಾರಿನ ಕೆಂಚಮ್ಮ( ೨೦೮ ಮತ), ಕಲ್ಲಳ್ಳಿ ಇಂದ್ರಮ್ಮ (೩೧೩ಮತ), ಪರಿಶಿಷ್ಟ ಜಾತಿ/ಪಂಗಡದಿಂದ ಅವಳಗೆರೆ ಎ.ಟಿ.ಗುರುವಯ್ಯ (೧೬೩ಮತ) ಆಯ್ಕೆಯಾಗಿದ್ದಾರೆ,
ಸಾಲಪಡೆಯದ ಕ್ಷೇತ್ರದ ಒಂದು ಸ್ಥಾನಕ್ಕಾಗಿ ೫ ಮಂದಿ ಸ್ಪರ್ಧಿಸಿದ್ದರು. ಎಚ್.ಆರ್.ರಂಗನಾಥ್(ಧನುಷ್) ೨೦೪ ಮತಗಳನ್ನು ಗಳಿಸುವ ಮೂಲಕ ಆಯ್ಕೆಯಾಗಿದ್ದು ಉಳಿದ ಅಭ್ಯರ್ಥಿಗಳಾದ ರಂಗಸ್ವಾಮಿ ೧೨೮ಮತ, ಕುಮಾರ್ ೧೭೦ ಮತ, ವರದಯ್ಯ ೪೬ ಮತ, ತಿಮ್ಮಯ್ಯ ೧೬ ಮತಗಳನ್ನು ಪಡೆದಿದ್ದಾರೆ.
ಸಂಘದ ಒಟ್ಟು ೧೨೬೦ ಷೇರುದಾರ ಪೈಕಿ ಸಾಲಗಾರರ ಕ್ಷೇತ್ರದಲ್ಲಿನ ೫೪೦ ಷೇರುದಾರರಲ್ಲಿ ೫೨೪ ಜನ ಮತಚಲಾಯಿಸಿದರೆ, ಸಾಲರಹಿತ ಕ್ಷೇತ್ರದಲ್ಲಿನ ೭೨೦ ಮತದಾರರಲ್ಲಿ ೫೮೦ಜನ ಮತಚಲಾಯಿಸಿದ್ದು, ಶೇ.೮೭ ರಷ್ಟು ಮತದಾನವಾಗಿದೆ. ಚುನಾವಾಣಾಧಿಕಾರಿಯಾಗಿ ಮಹೇಶಾಚಾರ್ ಕಾರ್ಯನಿರ್ವಹಿಸಿದ್ದು, ಸೊಸೈಟಿಯ ಸಿಇಓ ಶಿವಣ್ಣ ಚುನಾವಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ