ಕೆನರಾ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೈ.ಜಿ.ಲಕ್ಷ್ಮಿನಾರಾಯಣಶೆಟ್ಟಿ ಹಾಗೂ ಎಸ್.ಟಿ.ರಾಮಣ್ಣ ಅವರಿಗೆ ಬ್ಯಾಂಕ್ ಸಿಬ್ಬಂದಿಯರು ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು.
ಹುಳಿಯಾರಿನ ಕೆನರಾಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೈ.ಜಿ.ಲಕ್ಷ್ಮಿನಾರಾಯಣಶೆಟ್ಟಿ ಹಾಗೂ ಎಸ್.ಟಿ.ರಾಮಣ್ಣ ಅವರನ್ನು ಬ್ಯಾಂಕ್ ಸಿಬ್ಬಂದಿ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು. |
ಹುಳಿಯಾರು ಶಾಖೆಯ ಮ್ಯಾನೇಜರ್ ವಿಜಯ್ ಕುಮಾರ್ ಮಾತನಾಡಿ, ವೈ.ಜೆ.ಎಲ್ ಹಾಗೂ ರಾಮಣ್ಣನವರು ಕೆನರಾ ಬ್ಯಾಂಕ್ ಗೆ ತಮ್ಮದೇ ಆದ ಸೇವೆ ನೀಡಿದ್ದು, ಈಗ ನಿವೃತ್ತಿ ಹೊಂದಿದ್ದಾರೆ. ಇಂತಹ ವ್ಯಕ್ತಿಗಳ ಸೇವೆ ನಮ್ಮ ಬ್ಯಾಂಕ್ ಗೆ ಬೇಕಿದೆ. ಇವರ ಮುಂದಿನ ಜೀವನ ಹರ್ಷದಾಯಕವಾಗಿರಲಿ ಎಂದು ಹಾರೈಸಿದರು. ಈ ವೇಳೆ ಬ್ಯಾಂಕ್ ಸಿಬ್ಬಂದಿಗಳಾದ ಜಯಶಂಕರ್, ರೂಪ್ ರಾಮ್ ಯಾದವ್,ಅಕ್ಷಯ್,ಅನಿಲ್,ಶಿವಣ್ಣ,ಬಸವರಾಜು ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ