ಅಭಿವೃದ್ದಿಯ ನಿಟ್ಟಿನಲ್ಲಿ ಜನರ ಹತ್ತುಹಲವಾರು ಭರವಸೆಗಳನ್ನು ಈಡೇರಿಸುವ ಅಂಶಗಳನ್ನೊಳಗೊಂಡಂತೆ ಮೋದಿ ಸಾರಥ್ಯದ ಎನ್ ಡಿಎ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರದಂದು ಕೇಂದ್ರದ ಬಜೆಟ್ ಮಂಡಿಸಿದ್ದು , ಬಜೆಟ್ ಬಗ್ಗೆ ಹುಳಿಯಾರಿನಲ್ಲಿ ಜನರಲ್ಲಿ ವ್ಯಕ್ತವಾದ ಪ್ರತಿಕ್ರಿಯೆ
ವ್ಯಕ್ತವಾದ ಪ್ರತಿಕ್ರಿಯೆಗಳು:
 |
ಬಿಪಿಎಲ್ ಕಾರ್ಡ್ ಹೊಂದಿದ ವಯೋವೃದ್ದರಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದಾಗಿರುವುದು ಸ್ವಾಗತಾರ್ಹ ವಿಷಯ. ದೇಶಾದ್ಯಂತ ಈಗಾಗಲೇ ಸ್ವಚ್ಚ ಭಾರತ್ ಹೆಸರಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದಾಗ್ಯೂ ಸಹ ಮತ್ತೆ ೬ ಕೋಟಿ ಶೌಚಾಲಯ ನಿರ್ಮಾಣ ಗುರಿಹೊಂದಿರುವುದು ಯಶಸ್ವಿಯಾಗುತ್ತದೆಯೇ :
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಟಾಛಲಪತಿ ಶೆಟ್ರು.
|
 |
| ದೇಶಾದ್ಯಂತ ಹಾಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು , ಅನೇಕ ಶಾಲೆಗಳು ಮುಚ್ಚಿವೆ ಹೀಗಿದ್ದರೂ ಸಹ ಬಜೆಟ್ ನಲ್ಲಿ ಪ್ರತಿ ೫ ಕಿ.ಮೀ ಗೆ ಶಾಲೆ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯೇ? : ಸ್ಟುಡಿಯೋ ಸುದರ್ಶನ್ |
 |
| ಜನಸಾಮಾನ್ಯರಿಗೆ ನಿತ್ಯ ಅವಶ್ಯಕವಾಗಿರುವ ವಸ್ತುಗಳ ಬೆಲೆ ಹೆಚ್ಚಿಸಿರುವುದಲ್ಲದೆ, ಶಿಕ್ಷಣ ಶುಲ್ಕ, ಹೋಟೆಲ್ ಆಹಾರ , ವಾಟರ್ ಬಿಲ್ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆಮಾಡಿರುವುದು ಜನ ಸಾಮಾನ್ಯರ ಆದಾಯದ ಮೇಲೆ ಹೊರೆ ಹೇರಿದಂತಾಗಿದೆ : ಏಜೆಂಟರ್ ಸಂಘದ ಅಧ್ಯಕ್ಷ ಲೋಕೇಶಣ್ಣ. |
 |
| ಸಾಕಷ್ಟು ಜನ ಉಪಯೋಗಿಸುವ ಕಂಪ್ಯೂಟರ್, ಲ್ಯಾಪ್ ಟಾಪ್, ವೈಫೈ ಇನ್ನಿತರ ಸೇವೆಗಳ ಬೆಲೆಯನ್ನು ಏರಿಕೆ ಮಾಡಿ, ಕಡಿಮೆ ಜನ ಬಳಸುವಂತಹ ಚಿನ್ನ, ಎಲ್ ಇಡಿ ಹಾಗೂ ಎಲ್ ಸಿ ಡಿ ಟಿವಿಗಳ ಬೆಲೆಯನ್ನು ಕಡಿಮೆ ಮಾಡಿರುವುದು ಸಮರ್ಪಕವೇ : ಎಸ್.ಎಲ್.ಆರ್ ಬಸ್ ಮಾಲೀಕ ಪ್ರದೀಪ್ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ