ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ದೇವಾಲಯಗಳಲ್ಲಿ ಮಂಗಳವಾರ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ,ಅಭಿಷೇಕ,ಅಲಂಕಾರ ಹಾಗೂ ಜಾಗರಣೆ ಕಾರ್ಯ ಶ್ರದ್ದಾಭಕ್ತಿಯಿಂದ ನಡೆಯುವ ಮೂಲಕ ಎಲ್ಲೆಲ್ಲೂ ಶಿವ ಸ್ಮರಣೆ ಮಾಡುತ್ತಿದ್ದು ಕಂಡುಬಂತು.
ಹುಳಿಯಾರಿನ ಮಲ್ಲೇಶ್ವರಸ್ವಾಮಿಗೆ ಶಿವರಾತ್ರಿ ಅಂಗವಾಗಿ ಮಾಡಿರುವ ವಿಶೇಷ ಅಲಂಕಾರ. |
ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ಮಲ್ಲಿಕಾರ್ಜುನಯ್ಯ ಮತ್ತು ವಿರೇಶ್ ಅವರ ಪೌರೋಹಿತ್ಯದಲ್ಲಿ ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ,ಸಹಸ್ರನಾಮಾರ್ಚನೆ,ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳನ್ನು ನಡೆಸಿದ್ದಲ್ಲದೆ, ಮಹಾರುದ್ರಾಭಿಷೇಕ ಹಾಗೂ ಭಜನಾ ಕಾರ್ಯ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ವಾಮಿಯ ದರ್ಶನಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿದ್ದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನವರು ಆಗಮಿಸಿ ಸ್ವಾಮಿಯ ದರ್ಶನಪಡೆದರು. ಗಣಪತಿದೇವಾಲಯದಲ್ಲಿ ಹಬ್ಬ ಅಂಗವಾಗಿ ವಿನಾಯಕನಿಗೆ ವಿಶೇಷ ಪೂಜೆ ಹಾಗೂ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
ಹುಳಿಯಾರಿನ ಶ್ರೀಗಣಪತಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿನಾಯಕನಿಗೆ ಮಾಡಿದ್ದ ವಿಶೇಷ ಬೆಣ್ಣೆ ಅಲಂಕಾರ . |
ಗಾಂಧಿಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯಮಂಡಳಿಯಿಂದ ನಗರೇಶ್ವರಸ್ವಾಮಿಗೆ ಅರ್ಚನೆ, ಅಭಿಷೇಕ ನಡೆಯಿತು.
ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ರೈತಸಂಘದ ನಾಗಣ್ಣ ಅವರ ಸೇವಾರ್ಥದಲ್ಲಿ ಅಭಿಷೇಕ,ಅರ್ಚನೆ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಇದೇ ಗ್ರಾಮದ ಈಶ್ವರನ ದೇವಾಲಯದಲ್ಲೂ ಸಹ ಅಭಿಷೇಕ,ಅರ್ಚನೆ ನಡೆಯಿತು.
ಜೋಡಿತಿರುಮಲಾಪುರದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ನಡೆದವು.
ಶಿವರಾತ್ರಿ ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಲ್ಲಿಗೆ ಆಗಮಿಸಿದ್ದು ಶಿವ ದೇವಾಲಯಗಳ ತುಂಬೆಲ್ಲಾ ಜನಸ್ತೋಮ ಕಂಡುಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ