ಹುಳಿಯಾರು ಪಟ್ಟಣದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಆಯ್ಕೆಗಾಗಿ ಶನಿವಾರ ನಿರ್ದೇಶಕರ ಸಭೆ ನಡೆದಿದ್ದು, ನಿರ್ದೇಶಕರ ಸಹಮತದೊಂದಿಗೆ ಮತ್ತೊಮ್ಮೆ ಬಳ್ಳೆಕಟ್ಟೆ ರಾಮಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಬಳ್ಳೆಕಟ್ಟೆ ರಾಮಣ್ಣ. |
ಈ ಬಾರಿಯ ಸೊಸೈಟಿಯ ಚುನಾವಣೆ ರಂಗುಪಡೆದಿದ್ದು ಗ್ರಾ.ಪಂ.,ಯ ಚುನಾವಣೆಗಳಂತೆ ಈ ಚುನಾವಣೆಯೂ ನಡೆಯಿತು. ೧೦ ನಿರ್ದೇಶಕರ ಆಯ್ಕೆಗೆ ೨೧ ಮಂದಿ ಸ್ಪರ್ಧಿಸಿದ್ದು ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ನಡೆದಿದ್ದಿತ್ತು.ಇದನ್ನು ಕಂಡ ಮತದಾರರು ಹಾಗೂ ಸಾರ್ವಜನಿಕರಲ್ಲಿ ಯಾರು ಗೆಲುತ್ತಾರೆಂಬ ಕುತೂಹಲವನ್ನುಂಟುಮಾಡಿತ್ತು. ಆ ಪೈಕಿ ಸಾಲಪಡೆದವರ ಕ್ಷೇತ್ರದಿಂದ ಆಯ್ಕೆಯಾದ ಬಳ್ಳೆಕಟ್ಟೆ ರಾಮಣ್ಣ ಕಳೆದ ಬಾರಿ ಬಾರಿಯೂ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಈ ಬಾರಿಯ ಅಧ್ಯಕ್ಷ ಗಾಧಿ ಅವರಿಗೆ ಒಲಿದು ಬಂದಿದೆ. ಉಪಾಧ್ಯಕ್ಷರಾಗಿ ಕಲ್ಲಳ್ಳಿಯ ಎಂ.ನಾಗರಾಜು ಆಯ್ಕೆಯಾಗಿದ್ದಾರೆ ಎಂದು ಸೊಸೈಟಿಯ ಕಾರ್ಯನಿರ್ವಾಹಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ. ೨ ನೇ ಬಾರಿಯೂ ಅಧ್ಯಕ್ಷರಾಗಿ ಆಯ್ಕೆಯಾದ ರಾಮಣ್ಣ ಅವರ ಬೆಂಬಲಿಗರು ರಾಮಣ್ಣಅವರಿಗೆ ಹಾರಹಾಕಿ, ಪಟಾಕಿಸಿಡಿಸಿ ,ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ