ಹುಳಿಯಾರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಆಂದಾನಪ್ಪನ ಸೊಸೈಟಿ) ೨೦೧೫ ರಿಂದ ೨೦೨೦ನೇ ಸಾಲಿನ ೫ ವರ್ಷದ ಅವಧಿಗೆ ೧೦ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆ ಬಿರುಸಿನಿಂದ ಕೂಡಿದ್ದು ಹೆಚ್ಚಿನ ಷೇರುದಾರರು ಮತಚಲಾಯಿಸಿದರು.
ಹುಳಿಯಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಸೇರಿದ ಅಪಾರ ಜನಸ್ತೋಮ. |
ಸಾಲಗಾರರ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದ ೪ ಸ್ಥಾನ, ಹಿಂದುಳಿದವರ್ಗದಿಂದ ೨ ಸ್ಥಾನ, ಪರಿಶಿಷ್ಟಜಾತಿ ಮತ್ತು ಪಂಗಡದಿಂದ ೧ ಸ್ಥಾನ ಹಾಗೂ ಮಹಿಳೆ ಮೀಸಲು ೨ ಸ್ಥಾನ ಸೇರಿ ೯ ನಿರ್ದೇಶಕರು ಆಯ್ಕೆಯಾಗಬೇಕಿದ್ದು ೨೧ ಮಂದಿ ಕಣದಲ್ಲಿದ್ದರೆ, ಸಾಲಪಡೆಯದವರ ಕ್ಷೇತ್ರಕ್ಕೆ ಒಬ್ಬ ನಿರ್ದೇಶಕನ ಆಯ್ಕೆ ನಡೆಯಬೇಕಿದ್ದು ೫ ಮಂದಿ ಕಣದಲ್ಲಿದ್ದರು.
ಹುಳಿಯಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಮತಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವ ಷೇರು ದಾರರು. |
ಈ ಹಿಂದಿನ ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆ ಹೆಚ್ಚು ಕಾವುಪಡೆದಿದ್ದು ಸಂಘದ ಕಛೇರಿಯ ಮುಂದಿನ ರಸ್ತೆಯ ತುಂಬ ಹೆಚ್ಚು ಜನಸ್ತೋಮ ಕಂಡುಬಂತು. ಸೊಸೈಟಿಯ ಒಟ್ಟು ೧೨೬೦ ಷೇರುದಾರರಲ್ಲಿ ಸಾಲಪಡೆದವರ ಕ್ಷೇತ್ರಕ್ಕೆ ೫೪೦ ಮಂದಿ ಹಾಗೂ ಸಾಪಪಡೆಯದವರ ಕ್ಷೇತ್ರಕ್ಕೆ ೭೨೦ ಮಂದಿ ಮತ ಚಲಾಯಿಸಬೇಕಿತ್ತು. ಈ ಬಾರಿ ೧೦ ಮಂದಿ ನಿರ್ದೇಶಕರ ಆಯ್ಕೆಗಾಗಿ ಒಟ್ಟು ೨೬ ಜನ ಕಣದಲ್ಲಿದ್ದರು. ಆ ಪೈಕಿ ಸಾಲಪಡೆದವರ ಕ್ಷೇತದ ೯ ನಿರ್ದೇಶಕರಿಗೆ ೨೧ ಮಂದಿ ಆಕಾಂಕ್ಷಿಗಳು ಕಣದಲ್ಲಿದ್ದರೆ, ಸಾಲರಹಿತ ಕ್ಷೇತ್ರದ ಒಬ್ಬ ನಿರ್ದೇಶಕನ ಆಯ್ಕೆಗೆ ೫ ಮಂದಿ ಚುನಾವಣಾ ಕಣದಲ್ಲಿದ್ದರು. ಸಾಲಪಡೆದ ಕ್ಷೇತ್ರದ ಷೇರುದಾರರು ೯ ಮತ ಹಾಗೂ ಸಾಲರಹಿತ ಕ್ಷೇತ್ರದ ಷೇರುದಾರರು ತಲಾ ಒಂದು ಮತ ಹಾಕಬೇಕಿತ್ತು.
ಭಾನುವಾರ ಬೆಳಿಗ್ಗೆ ಆರಂಭವಾದ ಚುನಾವಣೆ ಪ್ರಕ್ರಿಯೆ ಸಂಜೆ೪ರ ವರೆಗೆ ನಡೆಯಿತು. ಅಭ್ಯರ್ಥಿಗಳು ಕಛೇರಿಯ ಅನತಿ ದೂರದಲ್ಲಿ ನಿಂತು ಷೇರುದಾರರಿಗೆ ತಮ್ಮ ಗುರುತಿರುವ ಬ್ಯಾಲೆಟ್ ಪತ್ರವನ್ನು ನೀಡಿ ತಮಗೆ ಮತಹಾಕುವಂತೆ ಕೇಳಿಕೊಳ್ಳುತ್ತಿದ್ದು ಸಾಮಾನ್ಯವಾಗಿತ್ತು. ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ರಾಜ್ ಕುಮಾರ್ ರಸ್ತೆ ತುಂಬಾ ಜನಸ್ತೋಮ ಕಂಡುಬಂದು ಸಾರ್ವಜನಿಕರು ಸೊಸೈಟಿ ಎಲೆಕ್ಷನ್ನೂ ಎಂ.ಎಲ್.ಎ ಚುನಾವಣೆ ತರ ನಡೆಯುತ್ತಿದೆಯಲ್ಲಾ ಎಂದು ನಿಬ್ಬರರಾಗಿ ಮಾತಾಡುತ್ತಿದ್ದು ಸಹ ಕೇಳಿಬಂತು.
ಯಾವ ವರ್ಷವೂ ಸಹ ಈ ರೀತಿಯ ಬಿರುಸಿನ ಚುನಾವಣೆ ಈ ಸೊಸೈಟಿಯಲ್ಲಿ ನಡೆದಿರಲಿಲ್ಲ. ಈ ಸಂಖ್ಯೆಯ ಷೇರುದಾರರು ಹಿಂದೆದೂ ಮತದಾನ ಮಾಡಿರಲಿಲ್ಲ ಈ ಬಾರಿ ಸೊಸೈಟಿ ಚುನಾವಣೆಗೆ ಗ್ರಾ.ಪಂ.ಸದಸ್ಯರುಗಳು ಸ್ಪರ್ಧಿಸಿ ರಾಜಕೀಯದ ಗಾಳಿ ತಟ್ಟಿದ್ದು ಹೆಚ್ಚು ರಂಗು ಬರಲು ಕಾರಣವಾಗಿದೆ. ಸಾಲಗಾರರಲ್ಲದ ಕ್ಷೇತ್ರದಲ್ಲಿನ ಚುನಾವಣೆ ಹೆಚ್ಚಿನ ಕಾವು ಪಡೆದಿತ್ತು. ಎಲ್ಲಾ ಷೇರುದಾರರನ್ನು ಕರೆತಂದು ಮತದಾನ ಮಾಡಿಸಿದ್ದರಿಂದ ಕೆಲ ಸಮಯ ಸರದಿಯಲ್ಲಿ ನಿಂತು ಮತಚಲಾಯಿಸುವಂತಾಯಿತು. ಮಹೇಶಾಚಾರ್ ಚುನಾವಣಾಧಿಕಾರಿಯಾಗಿ ಆಗಮಿಸಿದ್ದು ಮತದಾನ ಮುಗಿದ ನಂತರ ಮತ ಎಣಿಕೆಗೆ ತೊಡಗಿದ್ದರು. ಪಿಎಸೈ ಪ್ರವೀಣ್ ಕುಮಾರ್ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ