ಹುಳಿಯಾರು ಪಟ್ಟಣದಲ್ಲಿ ಶಾಖೆ ಹೊಂದಿರುವ ದಿ ಟೌನ್ ಕೋ ಅಪರೇಟೀವ್ ಬ್ಯಾಂಕ್ ಶಿರಾ ನಿರ್ದೇಶಕರ ಮಂಡಳಿಯ ಚುನಾವಣೆ ತಾ.೧೫ರ ಭಾನುವಾರದಂದು ನಡೆಯಲಿದ್ದು, ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಹಾಲಿ ಅಧ್ಯಕ್ಷರಾದ ಎಸ್.ಆರ್.ಶಿವಕುಮಾರಸ್ವಾಮಿ ಬಣ ಹಾಗೂ ಪ್ರೋ. ಡಿ.ಹೊನ್ನೇಶ್ ಅವರ ತಂಡಕ್ಕೆ ತೀವ್ರ ಪೈಪೋಟಿ ಎದುರಾಗಿದೆ. ಶತಮಾನ ಹಿನ್ನಲೆಯುಳ್ಳ ಬ್ಯಾಂಕಿನ ಗತ ವೈಭವದ ದಿನಗಳನ್ನು ಮರು ಸ್ಥಾಪಿಸುವುದಾಗಿ ಹೊನ್ನೇಶ್ ತಂಡ ಹಾಗೂ ಸದ್ಯ ಬ್ಯಾಂಕನ್ನು ಸರ್ವಾಂಗೀಣ ಅಭಿವೃದ್ದಿ ಹಾದಿಯಲ್ಲಿ ಸಾಗಿಸಿರುವ ತಮ್ಮ ಸಾಧನೆಯನ್ನು ಗಮನಿಸಿ ಶಿವಕುಮಾರ್ ಸ್ವಾಮಿ ತಂಡ ತಮ್ಮ ಬೆಂಬಲಿಗರೊಂದಿಗೆ ದಿನಂಪ್ರತಿ ಮತಯಾಚಿಸುತ್ತಿದ್ದಾರೆ.
ಎರಡು ಗುಂಪುಗಳು ಗೆಲುವಿಗಾಗಿ ಜಿದ್ದಾಜಿದ್ದಿ ನಡೆಸಿದ್ದು ಒಟ್ಟು ೧೯ ಜನ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ. ಬಿ.ಎಂ.ಕಾವಲ್ಲಿಗೌಡ ಚುನಾವಣಾಧಿಕಾರಿ ಕಾರ್ಯನಿರ್ವಹಿಸಲಿದ್ದು, ಚುನಾವಣೆ ಬೆಳಿಗ್ಗೆ ೯ ರಿಂದ ಸಂಜೆ ೪ ರವರೆಗೆ ಶಿರಾದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ. ಮತದಾನ ಮುಗಿದ ನಂತರ ಅಲ್ಲಿಯೇ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ