ಹುಳಿಯಾರು ಪಟ್ಟಣದಲ್ಲಿ ಮಂಗಳವಾರದ ಶಿವರಾತ್ರಿ ಹಬ್ಬದ ಅಂಗವಾಗಿ ಸೋಮವಾರ ಹಬ್ಬ ಸಂತೆ ನಡೆಯಿತು. ಹೋಬಳಿಯ ಸುತ್ತಮುತ್ತಲ ಹಳ್ಳಿಗರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದು ಸಾಮಾನ್ಯವಾಗಿತ್ತು.
ಹುಳಿಯಾರಿನಲ್ಲಿ ಸಂತೆ ಮುಗಿಸಿ ವಾಪಸ್ಸ್ ಹೋಗುತ್ತಿರುವುದು. |
ಶಿವರಾತ್ರಿ ಹಬ್ಬದ ವಿಶೇಷ ಅಡುಗೆ ಎಂದು ಬಿಂಬಿತವಾಗಿರುವ ಹುರಿಗಡಲೆ ಹಿಟ್ಟಿನ ತಮಟ(ತಂಬಿಟ್ಟು) ಮಾಡಲು ಬೇಕಾದ ಕಡಲೆ ಹಾಗೂ ಬೆಲ್ಲಕೊಂಡುಕೊಳ್ಳುವಲ್ಲಿ ಜನ ದಿನಸಿ ಅಂಗಡಿ ತುಂಬಿಲ್ಲಾ ತುಂಬಿದ್ದರು. ಶಿವ ಪೂಜೆಗೆ ಬೇಕಾದ ಮಡಿವಸ್ತ್ರಕೊಳ್ಳುವಲ್ಲಿ ಬಟ್ಟೆಅಂಗಡಿಗಳಲ್ಲಿ ಜನ ಕಂಡುಬಂದರೂ, ಸಂತೆಯಲ್ಲೂ ಸಹ ಶಿವರಾತ್ರಿಯ ವಸ್ತ್ರ ಎಂದು ಕೂಗುತ್ತಾ ಮಾರಾಟ ಮಾಡುತ್ತಿದ್ದರು. ಕಡ್ಲೆ ಬೆಲ್ಲದ ಬೆಲೆ ತುಸು ಹೆಚ್ಚಿದ್ದರೂ ಸಹ ಹಬ್ಬದ ಹಿನ್ನಲೆಯಲ್ಲಿ ಕೊಳ್ಳುತ್ತಿದ್ದರು.
ಸಂತೆಯ ಹಿನ್ನಲೆಯಲ್ಲಿ ಅಕ್ಕಪಕ್ಕದ ಹಳ್ಳಿಗಳಿಂದ ಜನ ಆಗಮಿಸಿದ್ದರಿಂದ ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ ಹಾಗೂ ರಾಂಗೋಪಾಲ್ ಸರ್ಕನ್ ನಲ್ಲಿ ಹೆಚ್ಚು ಜನದಟ್ಟಣೆ ಕಂಡುಬಂತು ಹಾಗೂ ಸಂಜೆಯಾಗುತ್ತಲೇ ಜನ ವಾಪಸ್ಸ್ ತಮ್ಮ ಹಳ್ಳಿಗಳತ್ತ ಹೊರಟಿದ್ದರಿಂದ ಬಸ್ ಗಳು ಜನರಿಂದ ತುಂಬಿದ್ದವು. ಒಟ್ಟಾರೆ ಈ ಬಾರಿ ಉತ್ತಮ ಮಳೆಯಾಗಿದ್ದರ ಪರಿಣಾಮ ಫಸಲು ಸಹ ಉತ್ತಮವಾಗಿ ಬೆಳೆದು ರೈತರ ಕೈಹತ್ತಿದ್ದು ಶಿವರಾತ್ರಿ ಹಬ್ಬವನ್ನು ಕಳೆಗಟ್ಟುವಂತೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ