ಹುಳಿಯಾರು : ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಪ್ರೌಢಶಾಲೆಯಲ್ಲಿ ೨೦೧೪-೧೫ನೇ ಸಾಲಿನ ೮ ನೇತರಗತಿ ಮಕ್ಕಳಿಗೆ ಜಿ.ಪಂ.ಸದಸ್ಯೆ ಮಂಜುಳಾ ಹಾಗೂ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಬುಧವಾರ ಉಚಿತ ಸೈಕಲ್ ವಿತರಿಸಿದರು.
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಪ್ರೌಢಶಾಲೆಯಲ್ಲಿ ೮ ನೇತರಗತಿ ಮಕ್ಕಳಿಗೆ ಜಿ.ಪಂ.ಸದಸ್ಯೆ ಮಂಜುಳಾ ಹಾಗೂ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಸೇರಿದಂತೆ ಸಂಸ್ಥೆಯವರು ಸೇರಿ ಉಚಿತ ಸೈಕಲ್ ವಿತರಿಸಲಾಯಿತು. |
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಪ್ರೌಢಶಾಲೆಯಲ್ಲಿ ನಡೆದ ಉಚಿತ ಸೈಕಲ್ ವಿತರಣಾ ಸಮಾರಂಭದಲ್ಲಿ ಶಾಲೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಮಕ್ಕಳಿಗೆ ಸೈಕಲ್ ಬಳಕೆಯ ಬಗ್ಗೆ ತಿಳಿಸಿದರು.
|
ಜಿ.ಪಂ.ಸದಸ್ಯೆ ಮಂಜುಳಾಗವಿರಂಗಯ್ಯ ಈ ವೇಳೆ ಮಾತನಾಡಿ ಮಕ್ಕಳನ್ನು ಶಾಲೆಯತ್ತ ಸೆಳೆಯುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಪ್ರೌಢಶಾಲಾ ಮಕ್ಕಳಿಗೆ ಉಚಿತ ಸೈಕಲ್ ನೀಡುವುದು ಸಹ ಒಂದಾಗಿದೆ ಎಂದರು. ಮಕ್ಕಳು ತಾವು ಪಡೆದ ಸೈಕಲನ್ನು ಪ್ರೌಢಶಾಲಾ ಹಂತ ಮುಗಿಯುವವರೆಗೂ ಉತ್ತಮರೀತಿಯಲ್ಲಿ ಇಟ್ಟುಕೊಂಡು ನಿತ್ಯ ಸೈಕಲ್ ನಲ್ಲೇ ಶಾಲೆಗೆ ಬರುವಂತೆ ತಿಳಿಸಿದರು.
ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಮಾತನಾಡಿ, ಪ್ರಸ್ತುತದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗಾಗಿ ಸರ್ಕಾರ ಹತ್ತಾರೂ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದು, ಎಲ್ಲಾ ಯೋಜನೆಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸರ್ಕಾರದಿಂದ ಮಕ್ಕಳಿಗೆ ನೀಡುತ್ತಿರುವ ಸೈಕಲನ್ನು ಪೋಷಕರು ತಮ್ಮ ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳುವುದು ತಪ್ಪಾಗುತ್ತದೆ. ದೂರದ ಹಳ್ಳಿಗಳಿಂದ ಬರುವ ಮಕ್ಕಳಿಗೆ ಅನುಕೂಲವಾಗಲೆಂದು ಸೈಕಲ್ ನೀಡುತ್ತಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು. ಮಕ್ಕಳು ರಸ್ತೆ ನಿಯಮಕ್ಕೆ ಬದ್ದರಾಗಿ ಸೈಕಲ್ ಚಲಾಯಿಸಿ, ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಚಲಾಯಿಸಬೇಡಿ ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರಾಮನಾಥ್ ಅಧ್ಯಕ್ಷತೆವಹಿಸಿದ್ದು, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಬೆಸ್ಕಾಂ ಎಸ್.ಓ ಗವಿರಂಗಯ್ಯ, ಟಿ.ಆರ್.ಎಸ್.ಆರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ್,ವಾಸವಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಮಹೇಶ್, ದೈಹಿಕಶಿಕ್ಷಕ ಮಂಜುನಾಥ್, ಶಿಕ್ಷಕರಾದ ಗಂಗಾಧರಯ್ಯ,ನಟರಾಜ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಸೈಕಲ್ ವಿತರಣೆವೇಳೆ ಮಕ್ಕಳ ಪೋಷಕರನ್ನು ಕರೆಸಿ ಅವರಿಂದ ಸೈಕಲನ್ನು ಯಾವುದೇ ಸ್ವಂತ ಕಾರ್ಯಕ್ಕೆ ಬಳಸದೆ, ಮಾರದೆ , ತನ್ನ ಮಗುವನ್ನು ಶಾಲೆ ಬಿಡಿಸದೆ ಶಾಲೆಗೆ ಕಳುಹಿಸುತ್ತೇನೆಂದು ನಮೂದಾಗಿದ್ದ ಮುಚ್ಚಳಿಕೆ ಪತ್ರಕ್ಕೆ ಸಹಿಹಾಕಿಸಿಕೊಂಡು ಸೈಕಲ್ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ