ಹುಳಿಯಾರು ಹೋಬಳಿ ದಸೂಡಿ ಸಮೀಪದ ರಾಮನಗರದ ತೋಟವೊಂದರಲ್ಲಿ ನಿರಂತರ ಜ್ಯೋತಿ ವಿದ್ಯುತ್ ಲೈನ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ಘಟಿಸಿದೆ.
ರಾಜಲಕ್ಷ್ಮಿ ಕೋಂ ಮಲ್ಲಿಕಾರ್ಜುನಯ್ಯ ಹಾಗೂ ಕ್ಯಾತಪ್ಪ ಎಂಬುವರಿಗೆ ಸೇರಿದ್ದ ತೋಟದಲ್ಲಿ ಒಟ್ಟು ೧೫ ತೆಂಗು, ೭೫ ಅಡಿಕೆ ಮರ, ೨ ಹಲಸು, ೩ ಮಾವಿನ ಮರಗಳಿಗೆ ಬೆಂಕಿತಗುಲಿ ಸುಟ್ಟಿವೆ. ಸ್ಥಳೀಯರು ಸೇರಿ ಬೆಂಕಿ ಆರಿಸಿದ್ದು ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ