ಹುಳಿಯಾರು ಪಟ್ಟಣದ ಇತಿಹಾಸ ಪ್ರಸಿದ್ದ ಅನಂತಶಯನ ಶ್ರೀರಂಗನಾಥಸ್ವಾಮಿಗೆ ತಾ.೧೮ರ ಬುಧವಾರದಂದು ಅಮವಾಸ್ಯೆ ಅಂಗವಾಗಿ ವಿಶೇಷ ಪೂಜೆ ಹಾಗೂ ದ್ರಾಕ್ಷಿ,ಗೋಡುಂಬೆ, ಬಾದಾಮಿ ಮುಂತಾದ ಹಣ್ಣುಗಳಿಂದ ವಿಶೇಷ ಅಲಂಕಾರ ನಡೆಯಲಿದೆ.
ಅಮವಾಸ್ಯೆಯ ಅಂಗವಾಗಿ ಗ್ರಾ.ಪಂ.ಸದಸ್ಯ ಹೆಚ್.ಆರ್.ಧನುಷ್ ರಂಗನಾಥ್ ಹಾಗೂ ಹೆಚ್.ಆರ್.ವೆಂಕಟೇಶ್, ಮುರುಳಿ ಅವರುಗಳ ಸೇವಾರ್ಥದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಮುಖ್ಯಪ್ರಾಣ ಭಜನಾ ತಂಡದಿಂದ ಭಜನಾ ಕಾರ್ಯ ನಡೆದು ನಂತರ ಪ್ರಸಾದವಿನಿಯೋಗ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆಯುವಂತೆ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ