ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುನ್ಸೂಚನೆಯಿಲ್ಲದೆ ನೀಡಿದ ನೋಟೀಸ್ ನಿಂದ ಗೊಂದಲ

ಹುಳಿಯಾರು : ಪಟ್ಟಣದ ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿನ ಅಂಗಡಿದಾರರಿಗೆ ಅಂಗಡಿ ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು ಒಂದೆಡೆಯಾದರೆ , ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಶ್ರೀಅನಂತಶಯನ ರಂಗನಾಥಸ್ವಾಮಿ ದೇವಾಲಯದ ಹತ್ತಿರದ ಅಂಗಡಿಗಳಿಗೂ ಸಹ ನೋಟೀಸ್ ನೀಡಿ ಫೆ.೧ರ ಒಳಗಾಗಿ ತೆರವುಗೊಳಿಸುವಂತೆ ತಿಳಿಸಿರುವುದು ಗೊಂದಲಕ್ಕೆಡೆ ಮಾಡಿದೆ. ರಂಗನಾಥಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಅಂಗಡಿಗಳು. ಕಳೆದೆರಡು ಮೂರು ತಿಂಗಳಿನಿಂದ ಕೆರೆ ಒತ್ತುವರಿ ಸಂಬಂಧಿಸಿದಂತೆ ಮನೆಗಳು ಹಾಗೂ ಅಂಗಡಿಗಳ ಪಟ್ಟಿ ಮಾಡಿ ತೆರವುಗೊಳಿಸಲು ಸೂಚಿಸಲಾಗಿತ್ತು. ನಿವಾಸಿಗಳು ಹಾಗೂ ಅಂಗಡಿದಾರರು ಸಂಸದರು ಹಾಗೂ ಸಚಿವರ ಮೂಲಕ ಒತ್ತಡ ತಂದ ಪರಿಣಾಮ ಜನವರಿ ೩೧ಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಕೆರೆಗೆ ಹೊಂದಿಕೊಂಡಂತೆ ಇರುವ ಅಂಗಡಿದಾರರ ಪಟ್ಟಿ ಮಾಡಿದಂತೆ ಅವರುಗಳಿಗೆ ನೋಟೀಸ್ ನೀಡುವ ಕಾರ್ಯ ಗುರುವಾರ ಜರುಗಿತು. ಕೆರೆ ಒತ್ತುವರಿ ಮಾಡಿರುವ ಅಂಗಡಿಯವರಿಗೆ ಮಾತ್ರ ನೋಟೀಸ್ ಜಾರಿ ಮಾಡಬೇಕಾಗಿದ್ದ ಅಧಿಕಾರಿಗಳು ಇದೀಗ ಹೊಸ ನೆಪವೊಡ್ಡಿ ಇದರೊಂದಿಗೆ ಪಟ್ಟಣದ ಮುಜುರಾಯಿ ಇಲಾಖೆಗೆ ಸೇರಿದ ರಂಗನಾಥಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತಿರುವ ಅಂಗಡಿದಾರರಿಗೂ ನೋಟೀಸ್ ಜಾರಿ ಮಾಡಿದ್ದಾರೆ. ದೇವಾಲಯದ ಬಳಿ ಇರುವ ಪೆಟ್ಟಿಗೆ ಅಂಗಡಿದಾರರಿಗೆ ಫೆ.೧ರ ಒಳಗಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು ಈ ಅಂಗಡಿದಾರರಲ್ಲಿ

ಆಕ್ರಮ ಸಿಲಿಂಡರ್ ರೀಫಿಲ್ಲಿಂಗ್ ತಡೆಯುವಂತೆ ಮನವಿ

ಹುಳಿಯಾರು : ಪಟ್ಟಣಲ್ಲಿ ನಡೆದ ಆಟೋ ಸಿಲಿಂಡ್ ಸ್ಪೋಟದಿಂದ ಅಂಗನವಾಡಿ ಮಕ್ಕಳು ಗಾಯಗೊಂಡು ಓರ್ವ ವ್ಯಕ್ತಿ ಬಲಿಯಾಗಿದ್ದು ಈ ಘಟನೆಗೆ ಸಿಲಿಂಡರ್ ಡಂಪಿಂಗ್ ಕಾರಣವಾಗಿದ್ದು, ಈ ಡಂಪಿಂಗ್ ಕಾರ್ಯ ಪಟ್ಟಣದಲ್ಲಿ ಎಲ್ಲೆಡೆ ನಡೆಯುತ್ತಿದ್ದು ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಆಕ್ರಮ ಸಿಲಿಂಡರ್ ರೀಫಿಲಿಂಗ್ ಮಾಡುವುದನ್ನು ತಡೆಯುವಂತೆ ಒತ್ತಾಯಿಸಿ ಪಟ್ಟಣದ ವಿವಿಧ ಸಂಘಸಂಸ್ಥೆಯವರು ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ತಹಸೀಲ್ದಾರ್ ಕಾಮಾಕ್ಷಮ್ಮ ಅವರಿಗೆ ಮನವಿ ಸಲ್ಲಿಸಿದರು. ಹುಳಿಯಾರಿನಲ್ಲಿ ನಡೆಯುತ್ತಿರುವ ಸಿಲಿಂಡರ್ ಡಂಪಿಂಗ್ ಕಾರ್ಯವನ್ನು ತಡೆಗಟ್ಟುವಂತೆ ಒತ್ತಾಯಿಸಿ ವಿವಿಧ ಸಂಘಸಂಸ್ಥೆಯವರು ಶಾಸಕರು ಹಾಗೂ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಪಟ್ಟಣದಲ್ಲಿನ ಸುಮಾರು ಆಟೋದವರು ಇಂದಿಗೂ ಗ್ಯಾಸ್ ಕಿಟ್ ಬಳಸಿ ಆಟೋ ಚಲಾಯಿಸುತ್ತಿದ್ದಾರೆ ಇದರಲ್ಲಿ ಹಲವರು ಪರವಾನಿಗೆ ಪಡೆಯದೆಯೇ ಸಿಲಿಂಡರ್ ಹಾಕಿಕೊಂಡು ಆಟೋ ಚಲಾಯಿಸುತ್ತಿದ್ದಾರೆ. ಅಲ್ಲದೆ ಈ ಆಟೋದವರು ಸಿಲಿಂಡರ್ ರೀಫಿಲ್ಲಿಂಗ್ ಮಾಡಿಸಲು ಯಾವುದೇ ಗ್ಯಾಸ್ ಬಂಕ್ ಗಳಿಗೆ ಹೋಗದೆ ತಾವುಗಳೇ ಸ್ವತ: ಡಂಪಿಂಗ್ ಕಾರ್ಯ ಮಾಡುತ್ತಾರೆ.ಇದಕ್ಕಾಗಿ ಗೃಹ ಬಳಕೆಯ ಸಿಲಿಂಡರ್ ನಿಂದ ಆಟೋದ ಸಿಲಿಂಡರ್ ಗೆ ಡಂಪಿಂಗ್ ಮಾಡಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಅವಘಡಗಳು ಸಂಭವಿಸುವ ಅವಕಾಶ ಹೆಚ್ಚಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ತನಿಖೆ ನಡೆಸಿ ಆಕ್ರಮವ

ಬೋರನಕಣಿವೆಯಲ್ಲಿ ಸಾಯಿ ಮಂದಿರ ಉದ್ಘಾಟನೆ

ಹುಳಿಯಾರು  ಹೋಬಳಿ ಬೋರನಕಣಿವೆಯ ಸೇವಾಚೇತನದಲ್ಲಿ ಶ್ರೀಶಿರಡಿ ಸಾಯಿಬಾಬ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ವತಿಯಿಂದ ಫೆ.೧ರ ಭಾನುವಾರದಂದು ನೂತನ ಸಾಯಿಮಂದಿರ ಹಾಗೂ ಶಿರಡಿಸಾಯಿಬಾಬ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ತಾ.೩೦ರ ಶುಕ್ರವಾರದಿಂದ ತಾ.೧ರ ಭಾನುವಾರದವರೆಗೆ ಮೂರು ದಿನಗಳ ಕಾಲ ನೂತನ ದೇವಾಲಯದ ಪ್ರಾರಂಭೋತ್ಸವದ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ. ತಾ.೧ರ ಭಾನುವಾರ ಸಾಯಿಮಂದಿರದ ಉದ್ಘಾಟನೆಯನ್ನು ಸಚಿವ ಟಿ.ಬಿ.ಜಯಚಂದ್ರ ನೆರವೇರಿಸಲಿದ್ದಾರೆ. ದ್ವಾರಕಮಾಯಿಯ ಉದ್ಘಾಟನೆಯನ್ನು ಟ್ರಸ್ಟ್ ನ ಸಂಸ್ಥಾಪಕರಾದ ಕೆ.ವಿ.ರಮಣಿ ನೆರವೇರಿಸುವರು. ನೊಣವಿನಕೆರೆ ಶ್ರೀಕಾಡಸಿದ್ದೇಶ್ವರಮಠದ ಕರಿವೃಷಭ ಶಿವಯೋಗೀಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದು, ಕವಿ ಹಾಗೂ ಬೋರನಕಣಿವೆ ಸೇವಾಚೇತನದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆವಹಿಸುವರು. ನ್ಯಾಯಮೂರ್ತಿ ಪವನ್ ಕುಮಾರ್ ಭಜಂತ್ರಿ, ಸಂಸಸ ಮುದ್ದಹನುಮೇಗೌಡರು,ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರಾದ ಕಿರಣ್ ಕುಮಾರ್, ಮಾಧುಸ್ವಾಮಿ, ಟ್ರಸ್ಟ್ ನ ಶಾಂತಮ್ಮ ಮಾತಾಜಿ, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ, ನಟ ಡಾ||ರಾಜೇಶ್,ಬೆಂಗಳೂರಿನ ಬಿ.ಕೃಷ್ಣಪ್ಪ ಟ್ರಸ್ಟ್ ನ ಅಧ್ಯಕ್ಷ ರುದ್ರಪ್ಪ ಹನಗವಾಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಅಂಗಡಿತೆರವಿಗೆ ಅಂತಿಮ ನೋಟೀಸ್ : ಇಂದೇ(ತಾ.೩೦) ಕಡೆ ದಿನ

ಕೆರೆ ಒತ್ತುವರಿ ಜಾಗದಲ್ಲಿರುವ ಅಂಗಡಿಗಳ ತೆರವಿಗೆ ಸುಪ್ರಿಂಕೋರ್ಟ್ ಆದೇಶದನ್ವಯ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಅಂಗಡಿಗಳ ತೆರವಿಗೆ ಕಂದಾಯ ಇಲಾಖೆಯಿಂದ ಗುರುವಾರದಂದು ಅಂತಿಮ ನೋಟೀಸ್ ನೀಡಿದ್ದು ಇಂದೇ(ತಾ.೩೦) ಕಡೆಯ ದಿನವಾಗಿದೆ. ಹುಳಿಯಾರಿನ್ ಬಸ್ ನಿಲ್ದಾಣದ ಅಂಗಡಿದಾರಿಗೆ ಅಂಗಡಿ ತೆರವುಗೊಳಿಸುವಂತೆ ನೀಡಿರುವ ಅಂತಿಮ ನೋಟೀಸ್. ಕಳೆದ ಡಿಸೆಂಬರ್ ನಲ್ಲಿ ಹುಳಿಯಾರು ಕೆರೆ ಒತ್ತುವರಿ ಜಾಗದ ತೆರವು ಕಾರ್ಯಾಚರಣೆ ನಡೆದಿತ್ತಾದರೂ ಸಹ ಬಸ್ ನಿಲ್ದಾಣದ ಅಂಗಡಿಯವರು ಇದಕ್ಕೆ ವಿರೋಧವೊಡ್ಡಿದ್ದರು. ಏಕಾಏಕಿ ಅಂಗಡಿಗಳನ್ನು ತೆಗೆಯಿರಿ ಎಂಡರೆ ಹೇಗೆ ತೆಗೆಯುವುದು ನಾವು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಅಂಗಡಿದಾರರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರಲ್ಲದೆ ಸಂಸದರೊಂದಿಗೆ ಡಿಸೆಂಬರ್೨೫ರಂದು ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಪತ್ರಸಲ್ಲಿಸಿ ಆರು ತಿಂಗಳ ಕಾಲಾವಾಕಾಶ ಕೋರಿದ್ದರು. ಜಿಲ್ಲಾಧಿಕಾರಿಗಳು ಅಂಗಡಿದಾರರ ಅಹವಾಲು ಸ್ವೀಕರಿಸಿ ಒಂದು ತಿಂಗಳ(ಜನವರಿ೩೦) ಕಾಲಾವಕಾಶ ನೀಡಿದ್ದರು. ಇದರಿಂದ ಅಂಗಡಿದಾರರು ಸ್ವಲ್ಪ ನಿರಾಳರಾಗಿದ್ದರು. ಜಿಲ್ಲಾಧಿಕಾರಿಗಳು ನೀಡಿದ್ದ ಅಂತಿಮ ಗಡುವು ಮುಗಿದಿದ್ದು ಇದೀಗ ಬಸ್ ನಿಲ್ದಾಣದ ಅಂಗಡಿಗಳಿಗೆ ಸುಮಾರು ೭೦ ಅಂಗಡಿಗಳಿಗೆ ಗ್ರಾಮ ಲೆಖ್ಖಿಗ ಶ್ರೀನಿವಾಸ್ ಗುರುವಾರ ಬೆಳಿಗ್ಗೆ ತಿಳುವಳಿಕೆ ನೋಟೀಸ್ ನೀಡಿದ್ದಾರೆ. ಈ ನೋ

ಶಾಲಾ ವಾರ್ಷಿಕೋತ್ಸವ

ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಚಲನಚಿತ್ರ ಸಹನಿರ್ಮಾಪಕ ನಂದಿಹಳ್ಳಿ ಶಿವಣ್ಣ ಉದ್ಘಾಟಿಸಿದರು. ಉಪಪ್ರಾಂಶುಪಾಲರಾದ ಇಂದಿರಾ ಹಾಗೂ ಇತರರಿದ್ದಾರೆ.

ಹುಳಿಯಾರಮ್ಮ ಜಾತ್ರಾಮಹೋತ್ಸವ

ಇಲ್ಲಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮದೇವಿಯ ಎರಡನೇ ವರ್ಷದ ಜಾತ್ರಾಮಹೋತ್ಸವ ತಾ.೩೧ರ ಶನಿವಾರದಿಂದ ತಾ.೭ರ ಶನಿವಾರದವರೆಗೆ ಒಂದುವಾರದ ಕಾಲ ನಡೆಯಲಿದೆ. ತಾ.೩೧ರ ಶನಿವಾರ ಕೋಡಿಪಾಳ್ಯ,ಲಿಂಗಪ್ಪನಪಾಳ್ಯದ ಭಕ್ತಾಧಿಗಳಿಂದ ಮಡಲಕ್ಕಿಸೇವೆ,ತಾ.೧ರ ಭಾನುವಾರ ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯದ ಭಕ್ತರಿಂದ ಮಡಲಕ್ಕಿ ಸೇವೆ,ತಾ.೨ರ ಸೋಮವಾರ ಅಮ್ಮನವರ ಮಧುವಣಗಿತ್ತಿ ಕಾರ್ಯ,ಧ್ವಜಾರೋಹಣ ಮತ್ತು ಅಂಕುರಾರ್ಪಣೆಕಾರ್ಯ ನಡೆಯಲಿದೆ. ತಾ.೩ರ ಮಂಗಳವಾರ ಆರತಿಬಾನ ಹಾಗೂ ಎಡೆಸೇವೆ,ತಾ.೪ರ ಬುಧವಾರ ರಾತ್ರಿ ಗ್ರಾಮದೇವತೆಗಳಾದ ದುರ್ಗಮ್ಮ, ಕೆಂಚಮ್ಮ,ದೊಡ್ಡಬಿದರೆಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡುಭೇಟಿ ಕಾರ್ಯ ನಡೆಯಲಿದೆ.ತಾ.೫ರ ಗುರುವಾರ ಬೆಳಿಗ್ಗೆ ಅಮ್ಮನವರಪಟ್ಟದ ಕಳಸ ಮಹೋತ್ಸವ ಹಾಗೂ ಸಂಜೆ ಅಮ್ಮನವರ ವೈಭವಯುತ ಉಯ್ಯಾಲೋತ್ಸವ ನಡೆಯಲಿದೆ ಹಾಗೂ ತಾ.೬ರ ಶುಕ್ರವಾರ ರಾತ್ರಿ ಅಮ್ಮನವರನ್ನು ಪುಷ್ಪವಾಹನದಲ್ಲಿ ಕುಳ್ಳಿರಿಸಿ ರಾಜಬೀದಿ ಉತ್ಸವ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಭಜನಾಕಾರ್ಯ,ತಾ.೭ರ ಶನಿವಾರ ಕಂಕಣ ವಿಸರ್ಜನೆ,ಓಕಳಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಕಂದಿಕೆರೆ ಗವಿಶಾಂತವೀರಸ್ವಾಮಿಯ ಜಾತ್ರಾಮಹೋತ್ಸಕ್ಕೆ ಚಾಲನೆ

ಸಮೀಪದ ಕಂದಿಕೆರೆಯ ಜಡೇಸಿದ್ದೇಶ್ವರಸ್ವಾಮಿ ಮತ್ತು ಕಣ್ವಕುಪ್ಪೆ ಗವಿ ಮಠಾಧೀಶರಾದ ಗವಿಶಾಂತವೀರಸ್ವಾಮಿಗಳ ೨೫ ನೇ ವರ್ಷದ ಜಾತ್ರಾ ಮಹೋತ್ಸವ ಗುರುವಾರದಿಂದ ಚಾಲನೆಗೊಂಡಿದ್ದು ಫೆ.೬ರ ಶುಕ್ರವಾರದ ವರೆಗೆ ನಡೆಯಲಿದೆ. ಗುರುವಾರ ವಿಘ್ನೇಶ್ವರಸ್ವಾಮಿಗೆ ಅಭಿಷೇಕ,ಧ್ವಜಾರೋಹಣ,ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿಯೊಂದಿಗೆ ಜಾತ್ರೆ ಪ್ರಾರಂಭಗೊಂದಿದ್ದು, ತಾ.೩೦ರ ಶುಕ್ರವಾರ ಅಖಂಡ ಭಜನಾ ಸಪ್ತಾಹ,ತಾ.೩೧ರ ಶನಿವಾರ ನವಗ್ರಹಗಳಿಗೆ ಅಭಿಷೇಕ,ತಾ.೧ರ ಭಾನುವಾರ ಸುಭ್ರಮಣ್ಯಸ್ವಾಮಿಗೆ ಅಭಿಷೇಕ,ತಾ.೨ರ ಸೋಮವಾರ ಅಂಭಾದೇವಿಗೆ ಅಭಿಷೇಕ,ಕುಂಕುಮಾರ್ಚನೆ ಹಾಗೂ ಮಹಾಮಂಗಲಾರತಿ ನಡೆಯಲಿದೆ. ತಾ.೩ರ ಮಂಗಳವಾರ ಶ್ರೀಜಡೇಸಿದ್ದೇಶ್ವರಸ್ವಾಮಿಗೆ ರುದ್ರಾಭಿಷೇಕ,ಸಹಸ್ರನಾಮಾಮ ಪೂಜೆ, ತಾ.೪ರ ಬುಧವಾರದಂದು ಶ್ರೀ ಅವಧೂತ ಶಾಂತವೀರಸ್ವಾಮಿಗಳಿಗೆ ಗಂಗಾಸ್ನಾನ, ರುದ್ರಾಭಿಷೇಕ, ಸಹಸ್ರನಾಮ ಪೂಜೆ,೧೦೧ ಪೂಜಾಧಿಗಳು , ಮಹಾಮಂಗಳಾರತಿ ನಡೆದು, ಇದೇ ದಿನ ಸಂಜೆ ಕಂದಿಕೆರೆಯ ರಾಜಬೀದಿಗಳಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ.ತಾ.೫ರ ಗುರುವಾರ ಸ್ವಾಮಿಯ ಮಹಾರಥೋತ್ಸವ ಹಾಗೂ ದಾಸೋಹ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.

ಹುಳಿಯಾರಿಗೆ ಹೆಚ್ಚುವರಿ ನ್ಯಾಯಾಲಯ ಕಲ್ಪಿಸಿಕೊಡಿ

ಹುಳಿಯಾರು  ಹೋಬಳಿಯ ಗಡಿಭಾಗದಲ್ಲಿನ ಅನೇಕ ಹಳ್ಳಿಯ ಕಕ್ಷಿದಾರರು ತಾಲ್ಲೂಕು ಕೇಂದ್ರವಾದ ಚಿ.ನಾ.ಹಳ್ಳಿಯ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯುವುದು ತ್ರಾಸದಾಯಕವಾಗಿದ್ದು ಹೋಬಳಿ ಕೇಂದ್ರವಾಗಿರುವ ಹುಳಿಯಾರಿನಲ್ಲಿ ಹೆಚ್ಚುವರಿ ನ್ಯಾಯಾಲಯವನ್ನು ಪ್ರಾರಂಭಿಸುವಂತೆ ಹುಳಿಯಾರು ಹೋಬಳಿ ವ್ಯಾಪ್ತಿಯ ವಕೀಲರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. ಹುಳಿಯಾರಿನಲ್ಲಿ ಹೆಚ್ಚುವರಿ ನ್ಯಾಯಾಲಯ ಪ್ರಾರಂಭಿಸುವಂತೆ ಹೋಬಳಿಯ ವಕೀಲರೆಲ್ಲಾ ಸೇರಿ ಪತ್ರಿಕಾಗೋಷ್ಠಿ ನಡೆಸಿದರು. ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆಗುಹೋಗುಗಳು ಹಾಗೂ ರೂಪುರೇಷೆ ಬಗ್ಗೆ ಹೋಬಳಿಯ ವಕೀಲರೆಲ್ಲಾ ಸೇರಿ ಚರ್ಚೆ ನಡೆಸಿದರು. ಹುಳಿಯಾರು ಹೋಬಳಿ ೬೦ ರಿಂದ ೭೦ ಸಾವಿರ ಜನಸಂಖ್ಯೆಯಿಂದ ಕೂಡಿದ್ದು ನಿತ್ಯ ಹತ್ತುಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರುವವರ ಸಂಖ್ಯೆ ಸಾಕಷ್ಟಿದೆ. ಸದ್ಯ ಚಿ.ನಾ.ಹಳ್ಳಿಗೆ ಪ್ರಧಾನ (ಕಿರಿಯ) ಸಿವಿಲ್ ನ್ಯಾಯಾಲಯಕ್ಕೆ ಈ ಭಾಗದಿಂದ ನ್ಯಾಯ ಕೋರಿ ಹೋಗುವವರ ಪ್ರಕರಣ ಹೆಚ್ಚಿವೆ. ಹುಳಿಯಾರು ಹೋಬಳಿಯ ಗಡಿಭಾಗದ ದಸೂಡಿ,ದಬ್ಬಗುಂಟೆ,ಮರೆನಡುಪಾಳ್ಯ ಮುಂತಾದ ಗ್ರಾಮಗಳಿಂದ ಜನ ಚಿ.ನಾ.ಹಳ್ಳಿಯ ಕೊರ್ಟ್ ಗೆ ಬರಬೇಕೆಂದರೆ ಸುಮಾರು ೪೦ ರಿಂದ ೫೦ ಕಿಮೀ ದೂರವಿದ್ದು ಬೆಳಿಗ್ಗೆ ಬಂದರೆ ವಾಪಸ್ಸ್ ಹೋಗುವುದಕ್ಕೆ ಸಂಜೆಯಾಗುತ್ತದೆ.ಅಲ್ಲದೆ ಗಡಿಭಾಗದ ಅನೇಕ ಹಳ್ಳಿಗಳಿಗೆ ಸಂಜೆಯ ನಂತರ ಬಸ್ ಸೌ

ಹುಲ್ಕಲ್ ದುರ್ಗಮ್ಮನ ನೂತನ ದೇವಾಲಯ ಪ್ರಾರಂಭೋತ್ಸವ

ಹುಳಿಯಾರು ಸಮೀಪದ ನಿರುವಗಲ್ ಹತ್ತಿರದ ಶ್ರೀಕ್ಷೇತ್ರ ಹುಲ್ಕಲ್ ಬೆಟ್ಟದ ಶ್ರೀ ದುರ್ಗಮ್ಮ ದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ತಾ.೨೯ರ ಗುರುವಾರ ಮತ್ತು ತಾ.೩೦ರ ಶುಕ್ರವಾರ ನಡೆಯಲಿದೆ. ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ದುರ್ಗಮ್ಮದೇವಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಸುವುದಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ಆಗಮಿಸುವ ಭಕ್ತರಿಗಾಗಿ ಅನ್ನಸಂತರ್ಪಣೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುವಂತೆ ಸಮಿತಿಯವರು ಕೋರಿದ್ದಾರೆ.

ಮೃತಪಟ್ಟ ಬೀರದೇವರ ಪಟ್ಟದ ಬಸವನ ಉತ್ಸವ

ಹುಳಿಯಾರು  ಪಟ್ಟಣದ ಶ್ರೀ ಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವ ಮಂಗಳವಾರ ಮೃತಪಟ್ಟಿದ್ದು, ಬುಧವಾರದಂದು ಮೃತ ಬಸವನ ಪಾರ್ಥಿವ ಶರೀರವನ್ನು ಗ್ರಾಮದ ಮುಖ್ಯಸ್ಥರೆಲ್ಲಾ ಸೇರಿ ಉತ್ಸವ ನಡೆಸಿ ಬೀರದೇವರ ಮೂಲಸ್ಥಾನ ಬೀರದೇವರಕಟ್ಟೆ ಹತ್ತಿರ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನಡೆಸಿದರು. ಹುಳಿಯಾರಿನ ಶ್ರೀಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವ ಮೃತಪಟ್ಟ ಹಿನ್ನಲೆಯಲ್ಲಿ ಅದರ ಪಾರ್ಥಿವ ಶರೀರವನ್ನು ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು. ಕಳೆದ ಹತ್ತದಿನೈದು ವರ್ಷಗಳ ಹಿಂದೆ ಈ ಬಸವನನ್ನು ಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವವಾಗಿ ಬಿಟ್ಟಿದ್ದು ಜಾತ್ರೆ, ಕಾರ್ತೀಕ ಸಮಯದಲ್ಲಿ ಈ ಬಸವನಿಗೆ ನಗಾರಿ ಹಾಕಲಾಗುತ್ತಿತ್ತು. ಅಲ್ಲದೆ ಈ ಬಸವವನ್ನು ಬೀರಲಿಂಗೇಶ್ವರಸ್ವಾಮಿಯ ಪ್ರತಿರೂಪವೆಂದು ಜನ ಆರಾಧಿಸುತ್ತಿದ್ದರು. ಬಸವನಿಗೆ ವಯಸ್ಸಾಗಿದ್ದ ಕಾರಣ ಮೃತಪಟ್ಟಿದ್ದು, ಬಸವನನ್ನು ಕೆ.ಸಿ.ಪಾಳ್ಯ,ಲಿಂಗಪ್ಪನಪಾಳ್ಯ ಹಾಗೂ ಹುಳಿಯಾರಿನಲ್ಲಿ ಮೆರವಣಿಗೆ ಮಾಡಿದರು ಈ ವೇಳೆ ಬೀರಲಿಂಗೇಶ್ವರಸ್ವಾಮಿ ದೇವಾಲಯ ಸಮಿತಿಯವರು,ಗುಡಿಗೌಡರು,ಭಂಡಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಮಂಡ್ಯ ಟು ಮಂತ್ರಾಲಯಕ್ಕೆ ಪಾದಯಾತ್ರೆ

ಮಂಡ್ಯದ ಏಳು ಯುವಕರು ತಂಡ ಮಂತ್ರಾಯದ ಶ್ರೀಗುರು ರಾಘವೇಂದ್ರಸ್ವಾಮಿಯ ದರ್ಶನಕ್ಕಾಗಿ ಪಾದಯಾತ್ರೆ ಸಂಕಲ್ಪ ಮಾಡಿ ತಮ್ಮ ಯಾತ್ರೆ ಪ್ರಾರಂಭಿಸಿದ್ದು ಮಾರ್ಗ ಮಧ್ಯೆ ಬುಧವಾರದಂದು ಹುಳಿಯಾರಿಗೆ ಆಗಮಿಸಿದ್ದರು. ಮಂಡ್ಯದಿಂದ ಮಂತ್ರಾಲಯಕ್ಕೆ ಕಾಲ್ನಡಿಗೆಯಲ್ಲಿ ಯಾತ್ರೆ ಹೊರಟ ಏಳು ಮಂದಿ ಯಾತ್ರಿಗಳು ಹುಳಿಯಾರಿನ ಮೂಲಕ ಸಾಗಿದರು. ಮಂಡ್ಯದ ಮನುಪ್ರಕಾಶ್ , ಶಂಕರ್, ಜಗದೀಶ್, ಶ್ರೀನಿವಾಸ್,ಸೋಮು,ಕುಮಾರ್ ಹಾಗೂ ರಮೇಶ್ ಎಂಬುವರು ಈ ಪಾದಯಾತ್ರೆಯಲ್ಲಿದ್ದು ಕಳೆದ ಮೂರು ವರ್ಷದಿಂದ ಮಂತ್ರಾಲಯಕ್ಕೆ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದಾರೆ. ಇವರು ನಿತ್ಯ ೫೦ ರಿಂದ ೬೦ ಕಿಮೀ ಕ್ರಮಿಸಿ ಮಾರ್ಗ ಮಧ್ಯೆ ಸಿಗುವ ಮಠ, ದೇವಾಲಯಗಳಲ್ಲಿ ತಂಗಿ ನಂತರ ಬೆಳಿಗ್ಗೆ ತಮ್ಮ ಯಾತ್ರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಳೆದ ಸೋಮವಾರ ಮಂಡ್ಯದಿಂದ ಪಾದಯಾತ್ರೆ ಪ್ರಾರಂಭಿಸಿರುವ ಇವರುಗಳು ಮೂರನೇ ದಿನವಾದ ಬುಧವಾರ ಪಟ್ಟಣಕ್ಕೆ ಆಗಮಿಸಿದ್ದು ಇನ್ನೂ ಮೂರ್ನಾಲ್ಕು ದಿನದಲ್ಲಿ ಮಂತ್ರಾಲಯ ತಲುಪುವುದಾಗಿ ತಿಳಿಸಿದರು. ಕೇವಲ ಹವ್ಯಾಸವಾಗಿ ಈ ಯಾತ್ರೆ ಪ್ರಾರಂಭಿಸಿದ ನಾವು ಅಂದಿನಿಂದ ಇದುವರೆಗೂ ಪಾದಯಾತ್ರೆ ಮೂಲಕವೇ ಮಂತ್ರಾಲಯದ ರಾಘವೇಂದ್ರಸ್ವಾಮಿಯನ್ನು ದರ್ಶನ ಪಡೆಯುತ್ತಿದ್ದು ಸ್ವಯಂ ಪ್ರೇರಣೆಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಯಾತ್ರಿಕರಲ್ಲಿ ಒಬ್ಬರಾದ ಮನುಪ್ರಕಾಶ್ ತಿಳಿಸಿದರು.ಪಟ್ಟಣದ ಸ್ಟುಡಿಯೋ ಸುದರ್ಶನ್ ಅವರ ನಿವಾಸದಲ್ಲಿ ಉಪಹ

ಸವಿತಾ ಸಮಾಜದವರು ತಮ್ಮ ವೃತ್ತಿಯನ್ನು ಗೌರವಿಸಿ

ಸವಿತಾ ಸಮಾಜದ ಹಲವರು ಸಮಾಜದ ಇತರೆ ವರ್ಗದ ಜನಗಳ ಮಾತುಗಳಿಂದಾಗಿ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದ ಕ್ಷೌರಿಕ ವೃತ್ತಿಯನ್ನು ಗೌರವಿಸದೆ ಆ ವೃತ್ತಿ ಮಾಡುವಲ್ಲಿ ಹಿಂದೇಟಾಕುತ್ತಿದ್ದಾರೆ ಎಂದು ಚಿ.ನಾ.ಹಳ್ಳಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಭ್ರಮಣ್ಯ ವಿಷಾದಿಸಿದರು. ಹುಳಿಯಾರಿನ ಸವಿತಾ ಸಮಾಜದವತಿಯಿಂದ ನಡೆದ ತ್ಯಾಗರಾಜರ ಆರಾಧನಾ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಸುಭ್ರಮಣ್ಯ ಮಾತನಾಡಿದರು. ಹುಳಿಯಾರಿನ ಸವಿತಾ ಸಮಾಜ ಸೇವಾ ಟ್ರಸ್ಟ್ ದವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ಹಡಪದ ಅಪ್ಪಣ್ಣ ಹಾಗೂ ಶ್ರೀತ್ಯಾಗರಾಜರ ಆರಾಧನೆ ಮತ್ತು ಸವಿತಾ ಸಮಾಜದ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜದ ಇತರ ಎಲ್ಲಾ ವರ್ಗಗಗಳಿಗಿಂತ ಸವಿತಾ ಸಮಾಜದವರು ಮಾಡುವ ಕಾರ್ಯ ಮಹತ್ವದಾಗಿದ್ದು, ಸಮಾಜ ಬೆಳೆದಂತೆ ನಾವು ಸಹ ಬದಲಾಗಬೇಕಾಗಿದೆ ಎಂದರು. ನಗರ ಪ್ರದೇಶಗಳಲ್ಲಿ ನಮ್ಮ ವೃತ್ತಿಗೆ ಒಂದು ಸ್ಥಾನವಿದೆ ಆದರೆ ಹಳ್ಳಿಗಳಲ್ಲಿ ಇಂದಿಗೂ ನಮ್ಮ ಕ್ಷೌರಿಕ ವೃತ್ತಿಯನ್ನು ಕಾಣುವ ಪರಿಯೇ ಬೇರೆ ಎಂದು ವಿಷಾಧಿಸಿದರು. ಸಮಾಜದ ಇತರ ವರ್ಗಗಳಿಗೆ ಹೋಲಿಸಿದರೆ ಸವಿತಾ ಸಮಾಜದವರು ಆರ್ಥಿಕವಾಗಿ,ಸಾಮಾಜಿಕವಾಗಿ ಹಿಂದುಳಿದಿದ್ದು ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ ಎಂದರು. ಸವಿತಾ ಸಮಾಜದವರಿಗೆ ಸಂಗೀತವೆನ್ನುವುದು ರಕ್ತಗತವಾಗಿದ್ದು ಇಂದು ನಮ್ಮಲ್ಲಿ ಹಲವರು ಸಂಗೀತದಲ್ಲಿ ಸಾಧನೆ ಮಾ

ಗೋಪುರ ನಿರ್ಮಾಣಕ್ಕೆ ಚೆಕ್ ವಿತರಣೆ

ಹುಳಿಯಾರು ಪಟ್ಟಣದ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಗೋಪುರ ನಿರ್ಮಾಣ ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಭರದಿಂದ ಸಾಗಿದ್ದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯಡಿಯಲ್ಲಿ ಇಪ್ಪತ್ತೈದು ಸಾವಿರರೂಪಾಯಿಯ ಚೆಕನ್ನು ದೇಣಿಗೆಯಾಗಿ ದೇವಾಲಯ ಸಮಿತಿಯವರಿಗೆ ಸೋಮವಾರ ವಿತರಿಸಲಾಯಿತು. ಹುಳಿಯಾರಿನ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಗೋಪುರ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ವತಿಯಿಂದ ಇಪ್ಪತ್ತೈದು ಸಾವಿರರೂನ ಚೆಕನ್ನು ಸಂಘದ ಮೇಲ್ವಿಚಾರಕ ಕಮಲಾಕರ್ ದೇವಾಲಯ ಸಮಿತಿಯವರಿಗೆ ವಿತರಿಸಿದರು. ಚೆಕ್ ವಿತರಿಸಿದ ಧರ್ಮಸ್ಥಳ ಯೋಜನೆಯ ಹುಳಿಯಾರು ವಲಯದ ಮೇಲ್ವಿಚಾರಕ ಕಮಲಾಕರ್ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ದೇವಾಲಯಗಳ ಅಭಿವೃದ್ದಿಯ ದೃಷ್ಠಿಯಿಂದ ಈ ಹಣ ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಈ ವೇಳೆ ಶನೇಶ್ವರಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ಮಲ್ಲೇಶಣ್ಣ, ಹು.ಕೃ.ವಿಶ್ವನಾಥ್, ಬಡಗಿರಾಮಣ್ಣ, ಕಾತುರಣ್ಣ, ಚಂದ್ರಣ್ಣ, ಅರ್ಚಕ ಗಣೇಶ್ ಹಾಗೂ ಇತರರಿದ್ದರು.

ರಥಸಪ್ತಮಿಯ ನಂತರ ಹೆಚ್ಚಾದ ಬಿಸಿಲ ಝಳ

ಚಳಿಯಿಂದ ತರಗುಟ್ಟುತ್ತಿದ್ದ ಜನ ಎರಡು ದಿನದಿಂದ ಬಿಸಿಲ ತಾಪಕ್ಕೆ ಬೆವರುತ್ತಿದ್ದಾರೆ. ಇದುವರೆಗೂ ತೀವ್ರ ಚಳಿಯಿಂದ ನಲುಗಿದ್ದ ಜನಕ್ಕೆ ಇದೀಗ ಬಿಸಿಲು ಹೆಚ್ಚಾಗಿ ಬೆಸಿಗೆಯನ್ನು ನೆನಪು ಮಾಡುತ್ತಿದೆ.ಕಳೆದ ಕೆಲ ದಿನದ ಹಿಂದೆ ಕನಿಷ್ಠ ೧೬ ಡಿಗ್ರಿಯಿಂದ ೨೩ ಡಿಗ್ರಿಯಿದ್ದ ತಾಪಮಾನ ಇದೀಗ ದಿನೇ ದಿನೆ ಹೆಚ್ಚುತ್ತಿದ್ದು ೩೦ ಡಿಗ್ರಿಗೆ ತಲುಪಿದೆ. ಋತುಗಳ ಬದಲಾವಣೆಯಂತೆ ಸೋಮವಾರದಿಂದ ರಥಸಪ್ತಮಿಯ ನಂತರ ಸೂರ್ಯ ಪ್ರಖರತೆ ಹೆಚ್ಚಿ ಬಿಸಿಲಿನ ತಾಪ ಏರುತ್ತಿದೆ. ಜನವರಿ ೨೬ ಮಾಘ ಮಾಸದ ಶುದ್ಧ ಸಪ್ತಮಿಯಾಗಿದ್ದು ಈ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತಿದ್ದು, ಇದನ್ನು ಅಚಲ ಸಪ್ತಮಿ ಎಂದು ಕೂಡ ಕರೆಯುತ್ತಾರೆ. ಇಂದಿನಿಂದ ಸೂರ್ಯನು ತನ್ನ ರಥಕ್ಕೆ ಅರುಣನನ್ನು ಸಾರಥಿಯನ್ನಾಗಿಸಿ ಏಳುಕುದುರೆಯ ರಥವನ್ನೇರಿ ಸಂಚಾರಕ್ಕೆ ಹೊರಡುವುದರಿಂದ ಮುಂದೆ ಬಿಸಿಲಿನ ಏರಿಕೆ ಜಾಸ್ತಿ ಎನ್ನುವ ಪ್ರತೀತಿ ಇದೆ. ಇಂದಿನಿಂದ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುವುದು ಸರ್ವೆ ಸಾಮಾನ್ಯವಾಗಿದ್ದು, ಸದ್ಯ ಬಿಸಿಲು ಹೆಚ್ಚಾಗುತ್ತಿರುವುದು ಕಣಗೆಲಕ್ಕೆ ಅನುಕೂಲವಾಗಿದ್ದು ರೈತರು ಒಕ್ಕಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹುಳಿಯಾರಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಹುಳಿಯಾರು ಪಟ್ಟಣದ ನಾಡಕಚೇರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪತಹಸೀಲ್ದಾರ್‌ ಸತ್ಯನಾರಾಯಣ್‌ ಮಾತನಾಡಿ ಮತದಾನ ನಮಗೆ ಸಂವಿಧಾನನೀಡಿರುವ ಅತ್ಯಮೂಲ್ಯವಾದ ಹಕ್ಕಾಗಿದ್ದು 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಮಾಡಬಹುದಾಗಿದ್ದು ಈ ಹಕ್ಕನ್ನು ಎಲ್ಲರೂ ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದರು. ಚುನಾವಣೆಯಲ್ಲಿಭಾಗವಹಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದ ಅವರು ಹಿಂದೆ 21ವರ್ಷಕ್ಕಿದ್ದ ಮತದಾನದಹಕ್ಕನ್ನು 18 ವರ್ಷಕ್ಕೆ ಇಳಿಸಿ ಯುವಜನರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗಿದ್ದು ಯುವಜನರು ಅತ್ಯಂತ ಜವಾಬ್ದಾರಿಯುತವಾಗಿ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಸಂವಿಧಾನನೀಡಿರುವ ಅತ್ಯಮೂಲ್ಯವಾದಹಕ್ಕು ಚಲಾಯಿಸಬೇಕೆಂದರು. ಕಂದಾಯ ತನಿಕಾಧಿಕಾರಿ ಹನುಮಂತನಾಯ್ಕ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾದ ಬಗ್ಗೆ ಹಾಗೂ ಹೊಸದಾಗಿ ನೊಂದಾಯಿಸುವ ಕುರಿತು ಮಾಹಿತಿಯನ್ನು ನೀಡಲಾಯಿತು. ಗ್ರಾಮ ಲೆಕ್ಕಿಗ ಶ್ರೀನಿವಾಸ್‌, ಬಿಎಲ್‌ಒಗಳಾದ ಚಂದ್ರಶೇಖರ್‌, ಪೂರ್ಣಮ್ಮ, ರಮ್ಯ, ಸಿ.ಎಲ್‌.ಪೂರ್ಣಿಮಾ, ನಾಗರತ್ನ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರುಗಳಾದ ಪುಟ್ಟಿಬಾಯಿ, ಅಬೀದಾಬೀ ಮತ್ತಿತರರು ಉಪಸ್ಥಿತರಿದ್ದರು.

ರಾತ್ರಿಯಲ್ಲಾ ಶವ ಠಾಣೆಮುಂದಿಟ್ಟು ಪ್ರತಿಭಟನೆ - ಸಿಎಂ ನಿಧಿಯಿಂದ ಹೆಚ್ಚಿನ ಪರಿಹಾರ :ಶಾಸಕರ ಭರವಸೆಯೊಂದಿಗೆ ಅಂತ್ಯ

ಹುಳಿಯಾರು  ಪಟ್ಟಣ ಇಂದಿರಾನಗರದಲ್ಲಿ ಆಟೋಸಿಲಿಂಡರ್ ಸ್ಫೋಟದಿಂದ ತೀವ್ರಗಾಯಗೊಂಡು ಸಾವನಪ್ಪಿದ ಪುಟ್ಟಶಾಮಾಚಾರ್ ಸಾವಿನಿಂದಾಗಿ ಆತನ ಕುಟುಂಬ ಸಂಕಷ್ಟದಲ್ಲಿ ಸಿಲುಕಿದ್ದು ಆ ಕುಟುಂಬಕ್ಕೆ ಸೂಕ್ತಪರಿಹಾರ ನೀಡುವಂತೆ ಹಾಗೂ ಈ ಸ್ಫೋಟಕ್ಕೆ ಆಟೋ ಚಾಲಕನೇ ಕಾರಣವಾಗಿದ್ದು ತನಿಖೆಯಾಗಬೇಕೆಂದು ಒತ್ತಾಯಿಸಿ ಸೋಮವಾರ ರಾಟ್ರಿಯಿಂದ ಪ್ರಾರಂಭವಾಗಿದ್ದ ಪ್ರತಿಭಟನೆ ಮಂಗಳವಾರ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಮಧ್ಯಸ್ತಿಕೆಯಲ್ಲಿ ಕೊನೆಗೊಂಡಿತ್ತು.  ಸೋಮವಾರ ರಾತ್ರಿ ಠಾಣೆ ಮುಂದೆ ಮೃತ ಪುಟ್ಟಶಾಮಾಚಾರ್ ಶವ ಇಟ್ಟು ಪ್ರತಿಭಟನೆಗೆ ಮುಂದಾದ ಸಾರ್ವಜನಿಕರು. ಕಳೆದ ಗುರುವಾರದಂದು ಆಟೋ ಸಿಲಿಂಡರ್ ಸ್ಪೋಟಗೊಂಡು ಅಂಗನವಾಡಿ ಮಕ್ಕಳು ಸೇರಿದಂತೆ ಪುಟ್ಟಸ್ವಾಮಾಚಾರ ಹಾಗೂ ಆತನ ಪತ್ನಿ ಸುಲೋಚನ ಅವರಿಗೂ ತೀವ್ರ ಸುಟ್ಟಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚು ಗಾಯಗೊಂಡಿದ್ದ ಪುಟ್ಟಶಾಮಾಚಾರ್ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಅಸುನೀಗಿ ಇವರ ಕುಟುಂಬ ಬೀದಿಗೆ ಬಿದ್ದಿದೆ. ಮೃತ ಕುಟುಂಬದವರ ಸಮಸ್ಯೆ ಆಳಿಸಿ ಪರಿಹಾರ ಘೋಷಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು. ಇದುವರೆಗೂ ಸಿಲಿಂಡರ್ ಸ್ಪೋಟ ಆಕಸ್ಮಿಕವಾಗಿ ಆಗಿರಬಹುದೆಂದು ಜನ ನಂಬಿದ್ದರು.ಆದರೆ ಆಸ್ಪತ್ರೆಯಿಂದ ಚೇತರಿಸಿಕೊಂಡೂ ಬಂದ ಸುಲೋಚನ ಘಟನೆ ನಡೆದ ಸಂಪೂರ್ಣವಿವರವನ್ನು ತಿಳಿಸಿದ್ದು, ಆಟೋ ಸಿಲಿಂಡರ್ ಗೆ ಅಡುಗೆ ಅನಿಲದ ಸಿಲಿಂಡರ್ ನಿಂದ ಡಂಪಿಂಗ್ ಮಾಡುವ ವೇಳ

ಹುಳಿಯಾರು: ವಿವಿಧೆ ಗಣರಾಜ್ಯೋತ್ಸವ ಆಚರಣೆ

ಹುಳಿಯಾರು  ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳಲ್ಲಿ ಸೋಮವಾರ ೬೬ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಶಿಸ್ತುಬದ್ದವಾಗಿ ಆಚರಿಸಲಾಯಿತು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜವಂದನೆ ಸಲ್ಲಿಸುತ್ತಿರುವುದು ಪಟ್ಟಣದ ವಾಸವಿ ಶಾಲೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮಿರಾಜ್ ಧ್ವಜಾರೋಹಣ ನೆರವೇರಿಸಿದರೆ, ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನ್ಯಾಯಾಧೀಶರಾದ ರೇಖಾ ನೆರವೇರಿಸಿ ಗಣರಾಜ್ಯೋತ್ಸವ ಮಹತ್ವವನ್ನು ತಿಳಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ , ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಚಾರ್ಯ ನಟರಾಜ್ ಧ್ವಜಾರೋಹಣ ನೆರವೇರಿಸಿದರು. ಕನಕದಾಸ ಶಾಲೆ, ಉರ್ದುಶಾಲೆ, ಜ್ಞಾನಜ್ಯೋತಿ ಸ್ಕೂಲ್, ಶಾರದಾ ಕಾನ್ವೆಂಟ್, ಎಂ.ಪಿ.ಎಸ್ ಶಾಲೆ,ಮಾರುತಿ ಶಾಲೆ,ಕೇಶವ ಶಾಲೆಗಳಲ್ಲಿ ಧ್ವಜಾರೋಹಣ ನಡೆಸಿ ಮಕ್ಕಳಿಗೆ ಸಿಹಿ ಹಂಚಿದರು. ಎಲ್ಲಾ ಶಾಲೆಗಳಲ್ಲೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕಕಾರ್ಯಕ್ರಮ ನಡೆಯಿತು. ಸರ್ಕಾರಿ ಕಛೇರಿಗಳಾದ ನಾಢಕಛೇರಿ, ಪೊಲೀಸ್ ಠಾಣೆ , ಬೆಸ್ಕಾಂ ಕಛೇರಿ, ಸರ್ಕಾರಿ ಆಸ್ಪತ್ರೆ, ಬಿಎಸ್.ಎನ್.ಎಲ್ ಕಛೇರಿ, ಅಂಚೇ ಕಛೇರಿ, ಗ್ರಾಮ ಪಂಚಾಯ್ತಿಯಲ್ಲೂ ಧ್ವಜಾರೋಹಣ ನೆಡೆಸಿ ಸಿಹಿ ವಿತರಿಸಿದರು.

ಸಾಂಸ್ಕೃತಿಕ ನೃತ್ಯ

ಹುಳಿಯಾರು ಹೋಬಳಿ ಕೆಂಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಾಲಾಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಆಕರ್ಷಕವಾಗಿತ್ತು. ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಶಾಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಧ್ವಜ ಹಿಡಿದು ನೃತ್ಯಪ್ರದರ್ಶಿಸಿದರು.

ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಬಾರದು : ಬಿಳಿಗಿರಿ ಕೃಷ್ಣಮೂರ್ತಿ

ಸ್ವಾತಂತ್ರ್ಯದಿನಾಚರಣೆ,ಗಣರಾಜ್ಯೋತ್ಸವ ಸೇರಿದಂತೆ ಇತರ ರಾಷ್ಟ್ರೀಯ ಹಬ್ಬಗಳನ್ನು ನಾವು ರಜೆಯ ಹಬ್ಬಗಳಾಗಿ ಆಚರಿಸುವ ಬದಲು ಅಂದು ರಾಷ್ಟ್ರೀಯ ಹಬ್ಬಗಳ ಮಹತ್ವ ಹಾಗೂ ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದು ಆ ನಿಟ್ಟಿನಲ್ಲಿ ದೇಶಸೇವೆಗೆ ಮುಂದಾಗಬೇಕೆಂದು ಸಾಹಿತಿ ಹಾಗೂ ಪ್ರಾಂಶುಪಾಲರಾದ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಮಾತನಾಡಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರಸುತದಲ್ಲಿ ಅನೇಕ ಶಾಲಾ-ಕಾಲೇಜು,ಸರ್ಕಾರಿ ಕಛೇರಿಗಳಲ್ಲಿ ರಾಷ್ಟ್ರೀಯ ಹಬ್ಬಗಳ ದಿನದಂದು ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ, ಮನೆಗಳಿಗೆ ತೆರಳುತ್ತಾರೆ ಹೊರತು ಆ ದಿನದ ಮಹತ್ವವನ್ನು ತಿಳಿಯುವುದಾಗಲಿ ಅಥವಾ ಹೊಸಹೊಸ ವಿಚಾರಗಳನ್ನು ತಿಳಿಯುವ ಯಾವುದೇ ಕಾರ್ಯವನ್ನು ಮಾಡುವಲ್ಲಿ ಮುಂದಾಗುತ್ತಿಲ್ಲ ಎಂದರು. ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಪಾಳ್ಗೊಳ್ಳುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು. ಈ ಬಾರಿ ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವಿಭಾಗಕ್ಕೆ ಸಂಬಂಧಿಸಿದ ಸೆಮಿನಾರ್ ಗಳನ್ನು ಅಯೋಜಿಸಿದ್ದು ಗಣರಾಜ್ಯೋತ್ಸವದ ಮಹತ್ವವನ್ನು ತ

ದೇವಾಲಯಗಳು ಧ್ಯಾನ ಹಾಗೂ ಜ್ಞಾನಕ್ಕೆ ವೇದಿಕೆಯಿದ್ದಂತೆ

ಮಾನವನ ತನ್ನ ಜೀವನದಲ್ಲಿ ಸಕಲ ಸಂಪತ್ತಿದ್ದದರೂ ಸಹ ಸುಖಸಂತೋಷವಿಲ್ಲದೆ ಬದುಕಿನ ಬಂಡಿ ಸಾಗಿಸುತ್ತಾ ಶಾಂತಿ,ನೆಮ್ಮದಿಯ ಹುಡಕಾಟದಲ್ಲಿದ್ದಾನೆ. ಇಂತಹವರಿಗೆ ನಮ್ಮ ಹಿಂದೂ ದೇವಾಲಯಗಳು ಧ್ಯಾನ ಹಾಗೂ ಜ್ಞಾನದ ಮೂಲಕ ಸುಖ ಶಾಂತಿಯನ್ನು ನೀಡುವ ವೇದಿಕೆಯಾಗಿವೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವಮಹಾಸ್ವಾಮಿಗಳು ತಿಳಿಸಿದರು. ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದಲ್ಲಿ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದ ಲಿಂಗಪ್ರತಿಷ್ಠಾಪನಾ ಕಾರ್ಯದ ಧಾರ್ಮಿಕ ಸಭೆಯಲ್ಲಿ ಗುರುಬಸವಮಹಾಸ್ವಾಮಿಗಳು ಅಶೀರ್ವಚನ ನೀಡಿದರು. ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದಲ್ಲಿ ನಿರ್ಮಿಸಿರುವ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದ ಲಿಂಗಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಅಶೀರ್ವಚನ ನೀಡಿದರು. ನಮ್ಮ ಪೂರ್ವಿಕರು ದೇವಾಲಯಗಳನ್ನು ಕಟ್ಟುವ ಮೂಲಕ ಸಮುದಾಯದ ಜನರು ಒಂದೆಡೆ ಸೇರಿಸಿ ಪುರಾಣ ಕಥೆಗಳ ಪಠಣ ಹಾಗೂ ಸಭೆಗಳನ್ನು ನಡೆಸಿ ಶಾಂತಿಯುತ ಜೀವನದ ಬಗ್ಗೆ ಮಾಹಿತಿ ನೀಡುವ ಸದುದ್ದೇಶದ ಹೊಂದಿದ್ದರು ಎಂದರು. ಹಳ್ಳಿಗಳಲ್ಲಿ ನಿರ್ಮಿಸುವ ದೇವಾಲಯಗಳಲ್ಲಿ ಇಂದಿಗೂ ಆಚಾರವಿಚಾರಗಳ ಪಾಲನೆಯಾಗುತ್ತಿದ್ದು, ಜನರು ಭಯಭಕ್ತಿಯಿಂದ ನಡೆಯುತ್ತಿದ್ದಾರೆ ಎಂದರು. ದೇವರಿಲ್ಲ ಎಂದು ಕೆಲವರು ಹೇಳಿದರೂ ಮಾನವರ ಮನಸಾಕ್ಷಿಯೇ ಒಂದು ದೇವರಿದ್ದಂತೆ ಅದಕ್ಕೆ ವಿದೇಯರಾಗಿ ನಡೆಯುವುದು ನಮ್ಮೆಲ್ಲರ

ಅಪಘಾತ : ಲಾರಿ ಬೆನ್ನಟ್ಟಿದ ಯುವಕನ ಕೊಲೆ ಶಂಕೆ

ವೃದ್ದೆಯೊಬ್ಬಳಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿಯನ್ನು ಹಿಡಿಯಲೆಂದು ಬೆನ್ನಟ್ಟಿ ಹೋದ ವ್ಯಕ್ತಿಯು ಸಾವಿಗೀಡಾಗಿದ್ದು,ಆತನನ್ನು ಲಾರಿಯವರೇ ಕೊಂದು ಬಿಸಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆ ಶನಿವಾರ ರಾತ್ರಿ ಬೈಲಪ್ಪನ ಮಠ ಹಾಗೂ ದೊಡ್ಡಬಿದರೆಯಲ್ಲಿ ಘಟಿಸಿದೆ. ಸಾವಿಗೀಡಾದ ವ್ಯಕ್ತಿಯನ್ನು ಹೊಸಕೆರೆಯ ರವಿರಾಜ್ (೨೩) ಎನ್ನಲಾಗಿದ್ದು, ಈತ ಚಿ.ನಾ.ಹಳ್ಳಿ ಎಪಿಎಂಸಿಯಲ್ಲಿ ದಿನಸಿ ವ್ಯವಹಾರ ನಡೆಸುತ್ತಿದ್ದ.ರಾತ್ರಿ ೯.೩೦ರ ಸಮಯದಲ್ಲಿ ಚಿಕ್ಕನಾಯಕನಹಳ್ಳಿಯಿಂದ ವಾಪಸ್ಸ್ ಊರಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಈತನ ಮುಖ,ತಲೆಭಾಗಕ್ಕೆ ಬಲವಾಗಿ ಹೊಡೆದು ಸಾಯಿಸಿ ರಸ್ತೆ ಬದಿಗೆ ಎಸೆದು ಲಾರಿಯವರು ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಮೃತನ ಕಡೆ ಸಂಬಂಧಿಕರು ಎಂದು ದೂರು ನೀಡಿದ್ದಾರೆ. ಘಟನೆ ವಿವರ:ಚಿ.ನಾ.ಹಳ್ಳಿ-ಹುಳಿಯಾರು ಮಾರ್ಗವಾಗಿ ಮುಂಬೈಗೆ ತೆರಳುತ್ತಿದ್ದ ಲಾರಿಯೊಂದು(ಸಿಬಿ೪೬ ಕೆ ೭೭೯) ಬೈಲಪ್ಪಮಠದ ಬಳಿ ವೃದ್ದೆ ಸಣ್ಣಜ್ಜಿ ಎಂಬಾಕೆಗೆ ಗುದ್ದಿ , ಲಾರಿಯನ್ನು ನಿಲ್ಲಿಸದೆ ಚಾಲಕ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅದೇ ಸಮಯದಲ್ಲಿ ಸ್ಥಳದಲ್ಲಿದ್ದ ರವಿರಾಜ್ ಹಾಗೂ ಮಂಜು ಎಂಬಿಬ್ಬರು ದ್ವಿಚಕ್ರವಾಹನದಲ್ಲಿ ಲಾರಿಯನ್ನು ಬೆನ್ನಟಿದ್ದಾರೆ.ಹಂಪ್ಸ್ ಬಳಿ ನಿಧಾನವಾದ ಲಾರಿಯನ್ನು ಚಾಲಕನ ಬದಿಯಿಂದ ಏರಿದ ರವಿರಾಜ್ ಚಾಲಕನೊಂದಿಗೆ ತಗಾದೆ ತೆಗೆದಿದ್ದಾನೆ. ಲಾರಿಯನ್ನು ನಿಲ್ಲಿಸದ ಚ

ಗಣರಾಜ್ಯೋತ್ಸವ ಆಚರಣೆ

ಹುಳಿಯಾರು  ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ೬೫ನೇ ಗಣರಾಜ್ಯೋತ್ಸವದ ಆಚರಣೆ ಹಾಗೂ ಪಥ ಸಂಚಲನ ಕಾರ್ಯ (ತಾ.೨೬) ಸೋಮವಾರ ಬೆಳಿಗ್ಗೆ ನಡೆಯಲಿದೆ. ಪಟ್ಟಣದ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಡಶಾಲೆ, ವಾಸವಿ ಶಾಲೆ,ಟಿ.ಆರ್.ಎಸ್.ಆರ್.ಶಾಲೆ, ಎಂ.ಪಿಎಸ್ ಶಾಲೆ, ಕನದಾಸ ಶಾಲೆ, ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ , ಶಾರದ ಸ್ಕೂಲ್, ಜ್ಞಾನಜ್ಯೋತಿ ಶಾಲೆ, ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬಾಲಕಿಯರ ಪದವಿಪೂರ್ವಕಾಲೇಜಿನಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಹಾಗೂ ಧ್ವಜವಂದನಾ ಕಾರ್ಯ ನಡೆಯಲಿದೆ.

ಎನ್ನೆಸ್ಸಸ್ಸ್ ಸಮಾರೋಪ ಸಮಾರಂಭ

ಹುಳಿಯಾರು  ಹೋಬಳಿ ಕೋರಗೆರೆಯಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದ ವತಿಯಿಂದ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ೨೦೧೪-೧೫ ನೇ ಸಾಲಿನ ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭ (ತಾ.೨೬) ಸೋಮವಾರ ಮಧ್ಯಾಹ್ನ ನಡೆಯಲಿದೆ. ಸಾಹಿತಿ ಹಾಗೂ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಬಿಳಿಗೆರೆ ಅವರು ಅಧ್ಯಕ್ಷತೆವಹಿಸಲಿದ್ದು, ಮುಖಂಡರಾದ ನಂದಿಹಳ್ಳಿ ಶಿವಣ್ಣ ಸಮಾರೋಪ ಭಾಷಣ ಮಾಡುವರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ, ಸಿಡಿಸಿ ಸದಸ್ಯರಾದ ಶ್ರೀನಿವಾಸ ಶ್ರೇಷ್ಠಿ,ಮರುಳಸಿದ್ದಪ್ಪ, ಪ್ರಾಧ್ಯಾಪಕರಾದ ಚಂದ್ರಶೇಖರಯ್ಯ,ಜಿ.ಪಂ.ಸದಸ್ಯೆ ನಿಂಗಮ್ಮರಾಮಯ್ಯ,ಎಪಿಎಂಸಿ ಅಧ್ಯಕ್ಷ ಸಣ್ಣಯ್ಯ, ಕೋರಗೆರೆ ಗ್ರಾ.ಪಂ.ನ ಉಪಾಧ್ಯಕ್ಷ ಕಾಂತರಾಜು ಸೇರಿದಂತೆ ಇತರರು ಆಗಮಿಸಲಿದ್ದಾರೆ.

ನೂತನ ಶಿವಲಿಂಗಪ್ರತಿಷ್ಠಾಪನೆ

ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದಲ್ಲಿ ಮಾಡಾಳಿನ ಶ್ರೀ ರುದ್ರಮುನಿಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಿವಲಿಂಗದ ಪ್ರತಿಷ್ಠಾಪನಾ ಕಾರ್ಯ ಭಾನುವಾರ ಮುಂಜಾನೆ ಶ್ರದ್ದಾಭಕ್ತಿಯಿಂದ ನಡೆಯಿತು. ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶಿವಲಿಂಗ. ಲಿಂಗಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಶನಿವಾರ ಸಂಜೆ ಗ್ರಾಮದೇವತೆ ಶ್ರೀಕಾಳಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ದೇವರನ್ನು ಬರಮಾಡಿಕೊಳ್ಳಲಾಗಿತ್ತು. ಅರ್ಚಕರಾದ ಚನ್ನಬಸವಯ್ಯ,ಈಶ್ವರಯ್ಯ,ಚಂದ್ರಯ್ಯ,ಯತೀಶ್ ಅವರುಗಳ ಪೌರೋಹಿತ್ಯದಲ್ಲಿ ಗಂಗಾಪ್ರವೇಶ ಗಣಪತಿ ಪುಣ್ಯಾಹ, ನಾಂದಿ, ಅಂಕುರಾರ್ಪಣೆ,ಪಂಚಕಳಸ,ನವಗ್ರಹ ಸ್ಥಾಪನೆ,ಲಕ್ಷ್ಮಿಕಳಶ ಸ್ಥಾಪನೆ,ನೂತನ ಲಿಂಗ ಪ್ರತಿಷ್ಠೆ,ನೇತ್ರೋನಿಮಲನ,ಅಭಿಷೇಕ, ಅಷ್ಟೋತ್ತರ ,ಮಹಾಮಂಗಳಾರತಿ ನಡೆಯಿತು. ಭಾನುವಾರ ಮುಂಜಾನೆ ಶ್ರೀ ರುದ್ರಮುನಿಮಹಾಸ್ವಾಮಿಜೀ ಹಾಗೂ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವಮಹಾಸ್ವಾಮಿಗಳ ಸಾನಿಧ್ಯದಲ್ಲಿ ಲಿಂಗಪ್ರತಿಷ್ಠಾಪನೆ ಮಾಡಿ ನಂತರ ಅಭಿಷೇಕ,ಅರ್ಚನೆನಡೆಸಿ ಮಹಾಮಂಗಳಾರತಿ ನಡೆಸಿ ಪ್ರಸಾದ ವಿತರಿಸಲಾಯಿತು.ನಂತರ ಧಾರ್ಮಿಕ ಸಭೆ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಕೆ.ವ

ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಣೆ

ಹುಳಿಯಾರು  ಹೋಬಳಿ ಕಾಮನಬಿಲ್ಲು ಫೌಂಢೇಶನ್ ನ ವತಿಯಿಂದ ರಾಷ್ಟ್ರೀಯ ಯುವನಾಯಕರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು , ಬ್ರೆಡ್ ವಿತರಿಸಲಾಯಿತು. ಹುಳಿಯಾರಿನ ಕಾಮನಬಿಲ್ಲು ಫೌಂಢೇಶನ್ ನ ವತಿಯಿಂದ ರಾಷ್ಟ್ರೀಯ ಯುವನಾಯಕರ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಿಸಲಾಯಿತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಾನ್ ನಾಯಕರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸಹ ಒಬ್ಬರಾಗಿದ್ದು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬ್ರಿಟ್ರಿಷರ ವಿರುದ್ದ ಸಿಡಿದೆದ್ದ ಧೀರ ನಾಯಕರಾಗಿದ್ದ ನೇತಾಜಿಯವರ ಜನ್ಮ ದಿನದ ಅಂಗವಾಗಿ ಈ ಕಾರ್ಯ ಮಾಡುತ್ತಿರುವುದಾಗಿ ಫೌಂಢೇಶನ್ ನ ಅಧ್ಯಕ್ಷ ಚೆನ್ನಕೇಶವ ತಿಳಿಸಿದರು. ಈ ವೇಳೆ ಗೌರವಾಧ್ಯಕ್ಷ ಈಶ್ವರಯ್ಯ,ಕಾರ್ಯದರ್ಶಿ ವಿಜಯ್ ಕುಮಾರ್,ಮಂಜುನಾಥ್,ಸ್ಟುಡಿಯೋ ರವಿ,ಚೇತನ್ ಆಚಾರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರೈತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ : ನೂರುಲ್ಲಾ ವಿಷಾದ

ದೇಶದ ಬೆನ್ನೆಲುಬು ಎಂದು ಹೇಳುವ ರೈತರ ಸಂಖ್ಯೆ ಪ್ರಸ್ತುತದಲ್ಲಿ ಗಣನೀಯವಾಗಿ ಕ್ಷೀಣಿಸುತ್ತಿದ್ದು ಕೃಷಿ ಕ್ಷೇತ್ರದತ್ತ ಜನರ ಒಲವು ಕಡಿಮೆಯಾಗಿದೆ ಎಂದು ಕೃಷಿ ಅಧಿಕಾರಿ ನೂರುಲ್ಲಾ ತಿಳಿಸಿದರು. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವೃತ್ತಿಪರ ಶಿಕ್ಷಣ ಕುರಿತು ಅಧಿಕಾರಿಗಳಿಂದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವೃತ್ತಿಪರ ಶಿಕ್ಷಣ ಕುರಿತು ಅಧಿಕಾರಿಗಳಿಂದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ನೂರುಲ್ಲಾ ಅವರನ್ನು ಸನ್ಮಾನಿಸಲಾಯಿತು. ಇಂದಿನ ಜಗತ್ತಿನಲ್ಲಿ ಬಗೆಬಗೆಯ ಆವಿಷ್ಕಾರಗಳಾಗುತ್ತಿದ್ದು ಕೃಷಿ ಕ್ಷೇತ್ರದಲ್ಲೂ ಸಹ ಅನೇಕ ಬದಲಾವಣೆಗಳಾಗಿದ್ದರೂ ಇಂದಿನ ಯುವಪೀಳಿಗೆಯವರು ಕೃಷಿ ಮಾಡುವಲ್ಲಿ ಮುಂದಾಗದೆ ಕೃಷಿ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು. ಇಂದಿನ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಆಗುವತ್ತ ಒಲವು ತೋರುತ್ತಾರೆ ಹೊರತು ರೈತನಾಗುವುದಕ್ಕೆ ಮುಂದಾಗುವುದಿಲ್ಲ . ಕೃಷಿಯನ್ನೇ ನಂಬಿದ್ದ ಅನೇಕ ಹಳ್ಳಿಗಳಲ್ಲಿನ ಜನ ಕೆಲಸಕ್ಕಾಗಿ ನಗರ ಪ್ರದೇಶಗತ್ತ ಗುಳೆ ಹೋಗುತ್ತಿದ್ದು ಕೃಷಿಯನ್ನು ಕೈಬಿಟ್ಟಿದ್ದಾರೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಅನ್ನದಾತರ ಸಂಖ್ಯೆ ಬೆರಳೆಣಿಕೆಯಷ್ಟಾಗುತ್ತದೆ ಎಂದರು. ನಾವು ಬಳಸುವ ಅನೇಕ ಆಹಾರ ಪದಾರ್ಥಗಳನ್ನು ಯಾವರೀತಿ ಬೆಳೆಯುತ್ತಾರೆ ಎಂಬುದ

ಸಚಿವರೇ , ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಕೊಡಿಸಿ : ಪೋಷಕರ ಅಳಲು - ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಆಟೋ ಸಿಲಿಂಡರ್ ಸ್ಪೋಟದಿಂದ ಗಂಭೀರ ಗಾಯಗೊಂಡಿದ್ದ ಮಕ್ಕಳ ಚಿಕಿತ್ಸೆಗೆ ಹಣ, ಸೂಕ್ತ ಚಿಕಿತ್ಸೆಗೆ ಸೂಚನೆ,ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅನುದಾನ ಹೀಗೆ ಹತ್ತುಹಲವಾರು ಸೂಚನೆಗಳನ್ನು ನೀಡಿ ಹೋಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಉಮಾಶ್ರೀ ಮಾತಿಗೆ ಕಿಂಚಿತ್ತು ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಕೇಳಿಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂದು ವಾಪಸ್ ಹುಳಿಯಾರಿಗೆ ಬಂದ ಪೋಷಕರು ತಮ್ಮ ಮಕ್ಕಳೊಂದಿಗೆ ಅಂಗನವಾಡಿ ಮುಂದೆ ಪ್ರತಿಭಟನೆ ನಡೆಸಿದರು. ಗುರುವಾರದಂದು ಹುಳಿಯಾರಿನ ಇಂದಿರಾನಗರದ ಅಂಗನವಾಡಿ ಮುಂದೆ ಆಟೋ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಂಗನವಾಡಿಯ ಸಹಾಯಕಿ ಸೇರಿದಂತೆ ೧೨ಮಕ್ಕಳಿಗೆ ತೀವ್ರಗಾಯಗಳಾಗಿ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು ಘಟನಾ ವಿವರ ತಿಳಿದ ಸಚಿವೆ ಉಮಾಶ್ರೀ ಗಾಯಗೊಂಡ ಮಕ್ಕಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಲ್ಲದೆ , ಮಕ್ಕಳ ಆಕ್ರಂದನಕ್ಕೆ ಕಣ್ಣೀರಿಟ್ಟು ಸಾಧ್ಯವಾದಷ್ಟು ಬೇಗಗುಣಮುಖವಾಗುವಂತೆ ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಾಕೀತು ಮಾಡಿದ್ದರು. ಅರ್ಧಂಬರ್ಧ ಗುಣಮುಖವಾಗಿ ವಾಪಸ್ಸ್ ಹುಳಿಯಾರಿಗೆ ಬಂದಿರುವ ಮಗು. ಸಚಿವರು , ಜಿಲ್ಲಾಧಿಕಾರಿಗಳು ಭೇಟಿ ನೀಡಿದಾಗ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರು ಇದೀಗ ಕಣ್ಣೆತ್ತಿಯೂ ನೋಡದಿದ್ದರಿಂದ ಸುಟ್ಟಗಾಯಗಳಿಂದ ಬೊಬ

ಸ್ವಚ್ಚತಾಕಾರ್ಯ

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದವತಿಯಿಂದ ಕೋರಗೆರೆಯಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಶಿಬಿರಾರ್ಥಿಗಳು ಸ್ವಚ್ಚತಾಕಾರ್ಯದಲ್ಲಿ ತೊಡಗಿರುವುದು.

ರೈತರೇ ರಾಜಕಾರಣಿಗಳ ಮಾತಿಗೆ ಮರುಳಾಗದಿರಿ : ಕೋಡಿಹಳ್ಳಿ

ಮತದಾನದ ವೇಳೆ ಮನೆ ಬಾಗಿಲಿಗೆ ಬರುವ ರಾಜಕಾರಣಿಗಳು ಗೆದ್ದ ಬಳಿಕ ಇತ್ತ ಸುಳಿಯುವುದಿಲ್ಲ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿಗಳ ಮಾತಿಗೆ ಎಂದಿಗೂ ಮರುಳಾಗಬೇಡಿ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರೈತರಿಗೆ ಕರೆ ನೀಡಿದರು. ಹುಳಿಯಾರು ಹೋಬಳಿ ದಸೂಡಿಯಲ್ಲಿ ನೂತನ ರೈತ ಸಂಘದ ಘಟಕವನ್ನು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು. ಹುಳಿಯಾರು ಹೋಬಳಿ ದಸೂಡಿಯಲ್ಲಿ ನೂತನ ರೈತ ಸಂಘದ ಉದ್ಘಾಟನೆ ನೆರವೇರಿಸಿದ ಅವರು ಮಾತನಡಿದರು. ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಯಾವುದೇ ಪಕ್ಷಗಳು ರೈತರ ಹಿತ ಕಾಯುವುದಾಗಿ ತಿಳಿಸುತ್ತವೇ ಹೊರತು, ರೈತರಿಗೆ ನೆರವಾಗುವಂತೆ ಉತ್ತಮ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ವಿಫಲವಾಗಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವು ಹಗರಣಗಳನ್ನು ಮಾಡಿಕೊಂಡು ಅದರಲ್ಲೇ ಅಡಳಿತ ನಡೆಸುತ್ತಿದ್ದಾರೆ. ಅಲ್ಲದೆ ಇದೀಗ ಪಂಪ್ ಸೆಟ್ ಗಳಿಗೆ ಮೀಟರ್ ಹಾಕುವ ಮೂಲಕ ರೈತರ ಮೇಲೆ ಹೊರೆಹಾಕುತ್ತಿದ್ದಾರೆ. ಅಲ್ಲದೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು. ದೇಶದಲ್ಲಿ ಶೇ.65 ರಷ್ಟು ರೈತರಿದ್ದು ಶೇ.70 ರಷ್ಟು ಕಂದಾಯ ಕಟ್ಟುತ್ತಿದ್ದಾರೆ. ಆದರೆ ಬಜೆಟ್‌ನಲ್ಲಿ ಮಾತ್ರ ರೈತರ ಉದ್ಧಾರಕ್ಕಾಗಿ ಶೇ.5 ರಷ್ಟು ಹಣ ಮೀಸಲಿಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ವೇತ

ನಂದಿಹಳ್ಳಿಯಲ್ಲಿ ದೋಣಿ ಸೇವೆ

ಹುಳಿಯಾರು  ಹೋಬಳಿ ನಂದಿಹಳ್ಳಿಯ ಬಸವೇಶ್ವರ ಸ್ವಾಮಿ ದೇವಾಲಯದ ಮುಂದೆ ಗುರುವಾರದಂದು ಗೊರಪ್ಪಗಳ ದೋಣಿ ತುಂಬುವ ಸೇವೆ ಅಪಾರ ಸಂಖ್ಯೆ ಭಕ್ತಾಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಹುಳಿಯಾರು ಹೋಬಳಿ ನಂದಿಹಳ್ಳಿಯ ಬಸವೇಶ್ವರಸ್ವಾಮಿ ದೇವಾಲಯದ ಮುಂದೆ ನಡೆದ ಗೊರಪ್ಪಗಳ ದೋಣಿ ಸೇವೆ ಮುಖಂಡ ಮಲ್ಲೇಶ್ ಹಾಗೂ ಗ್ರಾಮಸ್ಥರ ಸೇವಾರ್ಥದಲ್ಲಿ ಈ ಕಾರ್ಯ ಹಮ್ಮಿಕೊಂಡಿದ್ದು, ಗ್ರಾಮದ ಬಸವೇಶ್ವರಸ್ವಾಮಿ, ಆಂಜನೇಯಸ್ವಾಮಿ ಹಾಗೂ ಮೈಲಾರಪುರದ ಚೌಡಮ್ಮದೇವಿಯನ್ನು ಕರೆದೊಯಲಾಗಿತ್ತು. ದೇವರುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮೈಲಾರ ದೇವರ ಪ್ರತಿರೂಪವಾಗಿರುವ ಗೊರಪ್ಪಗಳಿಗೆ ಅರಿಶಿನದ ತಿಲಕವಿಟ್ಟು ಪೂಜಿಸಿದರು. ನಂತರ ದೇವಾಲಯದ ಮುಂದೆ ಮಡಿ ಕಂಬಳಿ ಹಾಸಿ ಅದರ ಮೇಲೆ ಬಾಳೆ ಎಲೆ ಹಾಕಿ ಬಾಳೆಹಣ್ಣಿನ ಎಡೆ ಹಾಕಲಾಯಿತು. ಗೋರಪ್ಪಗಳ ದೋಣಿಗಳಿಗೂ ಸಹ ಬಾಳೆಹಣ್ಣಿನ ಎಡೆಯನ್ನು ತುಂಬಿ ಪೂಜಿಸಲಾಯಿತು. ಪೂಜೆಯ ಬಳಿಕ ಮೈಲಾರದೇವರ ಆವಾಹನೆಯಾದ ಗೊರಪ್ಪಗಳು ಎಡೆಹಾಕಿದ್ದ ಸ್ಥಳ ಹಾಗೂ ದೇವಾಲಯದ ಸುತ್ತ ಆರ್ಭಟಿಸುತ್ತಾ ಪ್ರದಕ್ಷಿಣೆ ಹಾಕಿ ಬಂದು ದೋಣಿಗೆ ತುಂಬಿದ್ದ ಎಡೆಯನ್ನು ಅರ್ಪಿಸಿಕೊಂಡರು. ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಅಲ್ಲಿ ಹಾಕಿದ್ದ ಎಡೆಯನ್ನು ಪ್ರಸಾದವಾಗಿ ನೀಡಲಾಯಿತು. ನೆರದಿದ್ದ ಜನರು ಗೊರಪ್ಪಗಳ ಅರ್ಭಟವನ್ನು ಕಂಡು ಆಶ್ಚರ್ಯ ಪುಳಕಿತರಾಗಿ ಕುತೂಹಲದಿಂದ ದೋಣಿ ಸೇವೆ ವೀಕ್ಷಿಸಿದರು. ಚೌಡಮ್ಮನಿಗೆ ಹಣ್ಣುಕಾಯಿ ಮಾಡಿಸಿ

ಹಣ್ಣು ಬ್ರೆಡ್ ವಿತರಣೆ

ರಾಷ್ಟ್ರೀಯ ಯುವನಾಯಕರ ಜನ್ಮದಿನಾಚರಣೆ ಅಂಗವಾಗಿ ಹುಳಿಯಾರಿನ ಕಾಮನಬಿಲ್ಲು ಫೌಂಢೇಶನ್ ನ ವತಿಯಿಂದ ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಿಸಲಾಯಿತು.ಅಧ್ಯಕ್ಷ ಚನ್ನಕೇಶವ,ಈಶ್ವರಯ್ಯ,ರವಿ,ಚೇತನ್,ಚಂಬಣ್ಣ,ವಿಜಯ್ ಇತರರಿದ್ದಾರೆ.

ಜಾನುವಾರುಗಳ ತಪಾಸಣೆ

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕೋರಗೆರೆಯಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್ ಶಿಬಿರದಲ್ಲಿ ಗುರುವಾರ ಜಾನುವಾರುಗಳ ತಪಾಸಣಾ ಶಿಬಿರ ನಡೆಯಿತು. ವೈದ್ಯರಾದ ಸುಜಯ್,ಕಂಬಯ್ಯ ಹಾಗೂ ಶಿಬಿರಾರ್ಥಿಗಳಿದ್ದರು.

ಎಂಟಿಎಸ್ ನಿಂದ ಶಿಬಿರಾರ್ಥಿಗಳಿಗೆ ಆಟೋಟ ಸ್ಪರ್ಥೆ

ಹುಳಿಯಾರು ಹೋಬಳಿ ಕೋರಗೆರೆಯಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆಯುತ್ತಿರುವ ಎನ್.ಎಸ್.ಎಸ್ ಶಿಬಿರದಲ್ಲಿ (ತಾ.೨೪) ಶನಿವಾರ ಸಂಜೆ ಪಟ್ಟಣದ ಎಂಟಿಎಸ್ ಟೆಲಿಕಾಮ್ ವತಿಯಿಂದ ಶಿಬಿರಾರ್ಥಿಗಳಿಗೆ ವಿವಿಧ ಆಟೋಟಗಳನ್ನು ಆಡಿಸಲಾಗುತ್ತದೆ. ಆಟೋಟದಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ಬಗೆಬಗೆ ಬಹುಮಾನಗಳಿದ್ದು ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಎಂಟಿಎಸ್ ಟೆಲಿಕಾಮ್ ನ ಕಿರಣ್ ಕುಮಾರ್ ತಿಳಿಸಿದ್ದಾರೆ. ಇದೇ ದಿನ ಮಧ್ಯಾಹ್ನ ಲೇಖಕ ಹಗೂ ಸಾವಯವ ಕೃಷಿ ತಜ್ಞ ಶಿವನಂಜಯ್ಯ ಬಾಳೇಕಾಯಿ ಅವರಿಂದ "ತೋಟದತ್ತ ನೂರಾರು ಹೊಸ ಹಾದಿಗಳು" ವಿಷಯ ಕುರಿತ ಸಂವಾದ ನಡೆಯಲಿದೆ. ಸಂಜೆ ಪಂಡಿತ್ ಬಸವರಾಜು ಅವರಿಂದ "ಹಿತ್ತಲಗಿಡವೇ ಮದ್ದು ಹಾಗೂ ಸ್ಥಳೀಯ ಔಷಧಿ ಸಸ್ಯಗಳ ಪ್ರಾತ್ಯಕ್ಷಿ ಬಗ್ಗೆ ಉಪನ್ಯಾಸ ನಡೆಯಲಿದೆ.

ಪೋಲೀಸ್ ಅಧಿಕಾರಿಗಳಿಂದ ಆಟೋ ತಪಾಸಣೆಗೆ

 ಆಟೋ ಅನಿಲ ಸಿಲಿಂಡರ್ ಸ್ಫೋಟಗೊಂಡು ಉಂಟಾದ ಅನಾಹುತದಿಂದ ಅಂಗನವಾಡಿ ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇಅದರ ಬೆನ್ನಲ್ಲೇ ಪಟ್ಟಣದಲ್ಲಿ ಆಟೋಗಳಿಗೆ ಅನಿಲ ಕಿಟ್ ಅಳವಡಿಸಿರುವ ಬಗ್ಗೆ ಸಿಪಿಐ ಜಯಕುಮಾರ್ ನೇತೃವದಲ್ಲಿ ಪೋಲೀಸರು ಶುಕ್ರವಾರ ತಪಾಸಣೆ ನಡೆಸಿದರು. ಹುಳಿಯಾರು ಪಟ್ಟಣದಲ್ಲಿ ಅನಿಲಕಿಟ್ ಅಳವಡಿಸಿ ಓಡಿಸುತ್ತಿದ್ದ ಆಟೋಗಳನ್ನು ಠಾಣೆಯಲ್ಲಿಗೆ ತರಿಸಿ ಸಿಪಿಐ ಜಿ.ಎಸ್.ಜಯಕುಮಾರ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಿಪಿಐ ಜಯಕುಮಾರ್, ಪಟ್ಟಣದ ಆಟೋಗೆ ಅನಿಲ ಕಿಟ್ ಅಳವಡಿಸಿ ಓಡಿಸುವ ಆಟೋಗಳನ್ನು ತಪಾಸಣೆಗೊಳಪಡಿಸಲಾಯಿತು. ಅವುಗಳಲ್ಲಿ ೧೬ ಆಟೋಗಳು ಅನಿಲ ಕಿಟ್ ಹೊಂದಿದ್ದು,ಅವುಗಳನ್ನು ಠಾಣೆಗೆ ತಂದಿದ್ದು ಸಾರಿಗೆ ಅಧಿಕಾರಿಗಳಿಂದ ಐಎಂಇ ಪರೀಕ್ಷೆ ಮಾಡಿಸಿದ ನಂತರ ಅನಿಲ ಕಿಟ್ ಪರವಾನಿಗೆ ಹೊಂದಿದ್ದ ಆಟೋಗಳನ್ನು ಬಿಡುಗಡೆ ಮಾಡಲಾಗುವುದು. ಉಳಿದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳುವುದಾಗಿ ತಿಳಿಸಿದರು. ಯಾರದರೂ ಪೋಲೀಸ ನವರ ಕಣ್ ತಪ್ಪಿಸಿ ಆಟೋದಲ್ಲಿ ಗ್ಯಾಸ್ ಕಿಟ್ ಬಳಸಿ ಓಡಿಸುತ್ತಿದ್ದರೆ ಠಾಣೆಯಲ್ಲಿಗೆ ತರುವಂತೆ ತಿಳಿಸಿದರಲ್ಲದೆ ಆಟೋಚಾಲಕರೇ ಸ್ವಯಂ ಗ್ಯಾಸ್ ತುಂಬುವ ಬಗ್ಗೆ ತಿಳಿದರೆ ಕಠಿಣ ಕ್ರಮ ಕೈಗೊಳ್ಳುವುದಾಘಿ ಎಚ್ಚರಿಸಿದ್ದಾರೆ. ಈಗಾಗಲೇ ಸ್ಫೋಟಕ್ಕೆ ಕಾರಣವಾದ ಆಟೋದವನ ಮೇಲೆ ಪ್ರಕರಣ ದಾಖಲು ಮಾಡಿದ್ದು, ಸ್ಫೋಟ ನಡೆದ ಸ್ಥಳದಲ್ಲ

ಆಟೋ ಸಿಲಿಂಡರ್ ಸ್ಫೋಟ : ಮಕ್ಕಳಿಗೆ ಗಾಯ

ಹುಳಿಯಾರು  ಪಟ್ಟಣದ ಇಂದಿರಾನಗರದ ಅಂಗನವಾಡಿ ಕೇಂದ್ರದ ಮುಂದೆ ನಿಂತಿದ್ದ ಪ್ಯಾಸೆಂಜರ್ ಆಟೋದ ಗ್ರ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಂಗನವಾಡಿಯ ಮಕ್ಕಳಿಗೆ ಗಾಯಗಳಾಗಿರುವ ಘಟನೆ ಗುರುವಾರ ಮಧ್ಯಾಹ್ನ ಘಟಿಸಿದೆ. ಹುಳಿಯಾರಿನ ಇಂದಿರಾನಗರದಲ್ಲಿ ಆಟೋಸಿಲಿಂಡರ್ ಸ್ಪೋಟದಿಂದ ಆಗಿರುವ ಅನಾಹುತವನ್ನು ವೀಕ್ಷಿಸುತ್ತಿರುವ ಸಾರ್ವಜನಿಕರು. ಸಿಲಿಂಡರ್ ಸ್ಫೋಟದಿಂದ ಸುಟ್ಟಿರುವ ಆಟೋ. ಇಂದಿರಾನಗರದ ಪುಟ್ಟಸ್ವಾಮಿ ಎಂಬುವರ ಮನೆಯಲ್ಲಿ ಬಾಡಿಗೆಯಿದ್ದ ಶಬ್ಬಿರ್ ಎಂಬಾತ ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಆಟೋದ ಸಿಲಿಂಡರ್ ಸ್ಪೋಟಗೊಂಡಿದ್ದು ಆಟೋಗೆ ಬೆಂಕಿಹತ್ತಿಕೊಂಡಿದ್ದಲ್ಲದೆ, ಶಬ್ಬಿರ್ ಮನೆಗೂ ಬೆಂಕಿ ತಗುಲಿದೆ. ಮನೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ ಬೆಂಕಿ ಹೆಚ್ಚಾಗಿದ್ದು, ಎದುರುಗಡೆಯಿದ್ದ ಅಂಗನವಾಡಿ ಕೇಂದ್ರದತ್ತ ಬೆಂಕಿಯ ಜ್ವಾಲೆ ಎರಗಿದೆ. ಸಿಲಿಂಡರ್ ಸ್ಫೋಟದ ಶಬ್ದದಿಂದಾಗಿ ಮಕ್ಕಳು ಅಂಗನವಾಡಿಯಿಂದ ಹೊರ ಓಡಿ ಬಂದಿದ್ದಾರೆ ಆಗ ಮಕ್ಕಳಿಗೆ ಬೆಂಕಿಯ ಕಾವು ತಗುಲಿದೆ. ಅಂಗನವಾಡಿಯಲ್ಲಿದ್ದ ಒಟ್ಟು ೨೦ ಮಕ್ಕಳಲ್ಲಿ ೭ ಮಂದಿ ಮಕ್ಕಳಿಗೆ ಹೆಚ್ಚು ಸುಟ್ಟಗಾಯಗಳಿವೆ ಹಾಗೂ ಅಂಗನವಾಡಿ ಶಿಕ್ಷಕಿ ಶಬಾನಾ ಅವರ ಕೈಯ ಭಾಗ ಸುಟ್ಟಿದೆ. ಗಾಯಗೊಂಡಿದ್ದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಫೋಟದಿಂದ ಶಬ್ಬಿರ್ ಮನೆಯ ತೀರು, ಹೆಂಚು ಸುಟ್ಟು ಹೋಗಿರುವುದಲ್ಲದೆ , ಗೃಹೋಪಕಯೋಗಿ ವಸ್ತುಗಳು ಚ

ರಾಗಿ ಖರೀದಿ ಕೇಂದ್ರ ಭಣಭಣ : ರೈತರಿಗಾಗಿ ಕಾಯುತ್ತಿರುವ ಅಧಿಕಾರಿಗಳು

ವರದಿ:ಡಿ.ಆರ್.ನರೇಂದ್ರಬಾಬು ಹುಳಿಯಾರು : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉತ್ತಮ ಗುಣಮಟ್ಟದ ರಾಗಿ ಖರೀದಿಸಲು ಜನವರಿ ೮ ರಿಂದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಿದ್ದರೂ ಸಹ ರೈತರು ಖರೀದಿ ಕೇಂದ್ರದತ್ತ ಮುಖಮಾಡದಿರುವುದು ರೈತರ ಹಿತಕಾಯುವ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆ ಉದ್ಘವವಾಗಿದೆ.ಪಟ್ಟಣದ ಎಪಿಎಂಸಿ ಯಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರ ರೈತರಿಲ್ಲದೆ ಬಣಗುಡುತ್ತಿದ್ದು, ಇಲ್ಲಿನ ಅಧಿಕಾರಿಗಳು ರಾಗಿ ಮಾರಲು ಬರುವ ರೈತರನ್ನು ಎದುರು ನೋಡುತ್ತಾ ಕುಳಿತಿದ್ದಾರೆ. ಹುಳಿಯಾರು ಎಪಿಎಂಸಿಯಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರದ ಮುಂದೆ ಕಾಣದಿರುವ ರೈತರು. ರಾಗಿ ಖರೀದಿ ಕೇಂದ್ರವನ್ನು ಹುಳಿಯಾರು ಮತ್ತು ಚಿ.ನಾ.ಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿದ್ದು, ಖರೀದಿಗೆ ಗೋದಾಮು ಸೇರಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಸದ್ಯ ರಾಗಿಗೆ ಮಾರುಕಟ್ಟೆ ದರ ಕ್ವಿಂಟಾಲ್ ೧೨೦೦ ರಿಂದ ೧೪೦೦ರೂ ಇದ್ದು ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್ ಗೆ ಬೆಂಬಲ ಬೆಲೆ ಸೇರಿ ೨೦೦೦ರೂ ನೀಡಲಾಗುವುದಿದ್ದು, ಕ್ವಿಂಟಾಲ್ ಗೆ ೫೦೦ರಿಂದ ೬೦೦ರೂ ವ್ಯತ್ಯಾಸವಿದ್ದರೂ ಸಹ ಅದೇಕೋ ರೈತರು ಮಾತ್ರ ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಕೇಂದ್ರ ಪ್ರಾರಂಭಿಸಲು ಪ್ರತಿಭಟನೆ ಹಾದಿ ಹಿಡಿದಿದ್ದ ರೈತಸಂಘದವರು ಕೇಂದ್ರ ಪ್ರಾರಂಭದ ನಂತರ ಇತ್ತ ಅಡ್ಡ ಸುಳಿದಿಲ್ಲ , ಆಹಾರ ನಿಗಮ

ರಂಗನಾಥಸ್ವಾಮಿಗೆ ಬೆಣ್ಣೆ ಅಲಂಕಾರ

ಹುಳಿಯಾರು  ಪಟ್ಟಣದ ಪುರಾಣಪ್ರಸಿದ್ದ ಅನಂತಶಯನ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಿದ್ದು ಭಕ್ತಾಧಿಗಳ ಮನಸೂರೆಗೊಂಡಿತು. ಹುಳಿಯಾರಿನ ಅನಂತಶಯನ ಶ್ರೀರಂಗನಾಥಸ್ವಾಮಿಗೆ ಮಂಗಳವಾರ ಅಮವಾಸ್ಯೆ ಅಂಗವಾಗಿ ಮಾಡಿದ್ದ ಬೆಣ್ಣೆ ಅಲಂಕಾರ. ಹುಳಿಯಾರಿನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ಸಂಜೆ ಅಮವಾಸ್ಯೆ ಅಂಗವಾಗಿ ವೃಷಭಾದ್ರಿ ಭಜನಾ ಮಂಡಳಿಯವರು ಭಜನೆ ನಡೆಸಿಕೊಟ್ಟರು. ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ಅಭಿಷೇಕ ,ಅರ್ಚನೆ ನಡೆಸಿದ್ದಲ್ಲದೆ ಟಿ.ಆರ್.ರಂಗನಾಥ ಶೆಟ್ರು , ಜಗನಾಥರಾವ್,ರಮೇಶಣ್ಣ ಅವರುಗಳ ಸೇವಾರ್ಥದಲ್ಲಿ ಸ್ವಾಮಿಯನ್ನು ಬೆಣ್ಣೆಯಿಂದ ಅಲಂಕರಿಸಿ ಪೂಜಾ ಕೈಂಕರ್ಯ ನಡೆಸಲಾಯಿತು. ಸಂಜೆ ವೃಷಭಾದ್ರಿ ಭಜನಾ ಮಂಡಳಿಯವರಿಂದ ಭಜನಾಕಾರ್ಯಕ್ರಮ ನಡೆಯಿತು. ವೈಕುಂಠ ಏಕಾದಶಿ ಸಮಿತಿಯ ಅಧ್ಯಕ್ಷ ಧನುಷ್ ರಂಗನಾಥ್, ವಿಶ್ವನಾಥ್,ವೆಂಕಟೇಶ್,ದೇವಾಲಯ ಅಭಿವೃದ್ದಿ ಸಮಿತಿಯ ರಂಗನಾಥ ಶೆಟ್ರು ,ಅಶೋಕ್,ಗ್ರಾಪಂ ಸದಸ್ಯ ಹೇಮಂತ್,ಬಡಗಿ ರಾಜು ಮುಂತಾದವರು ಉಪಸ್ಥಿತರಿದ್ದರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಕಾನೂನು ಅರಿವು ಕಾರ್ಯಕ್ರಮ

ಹುಳಿಯಾರು  ಹೋಬಳಿ ಕೋರಗೆರೆಯಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಘಟಕದವತಿಯಿಂದ ನಡೆಯುತ್ತಿರುವ ಸ್ವಯಂಸೇವಾ ಶಿಬಿರದಲ್ಲಿ (ತಾ.೨೧) ಬುಧವಾರ ಮಧ್ಯಾಹ್ನ "ಪೋಸ್ಕೋ ಅಕ್ಟ್ " ಕುರಿತ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘದ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ವೀಣಾ ಉದ್ಘಾಟಿಸುವರು. ಕೋರಗೆರೆ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಗುರುವರದಯ್ಯ ಅಧ್ಯಕ್ಷತೆವಹಿಸಲಿದ್ದು, ವಕೀಲ ವೈ.ಜೆ.ಲೋಕೇಶ್ವರ್ ಫೋಸ್ಕೋ ಕಾಯಿದೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸಕ ಅಶೋಕ್, ಸಿವಿಲ್ ನ್ಯಾಯಾಧೀಶ ಸೋಮನಾಥ್, ಸಹಾಯಕ ಅಭಿಯೋಜಕರಾದ ರವೀಂದ್ರ,ಸಂತೋಷ್, ವಕೀಲ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ,ಕಾರ್ಯದರ್ಶಿ ಹೆಚ್.ಟಿ.ಹನುಮಂತಪ್ಪ ಸೇರಿದಂತೆ ಇತರರು ಆಗಮಿಸಲಿದ್ದಾರೆ. 

ಗಣರಾಜ್ಯೋತ್ಸವಕ್ಕೆ ತಾಲೀಮು

ಜನವರಿ ೨೬ರ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಶಾಲೆ ಹಾಗೂ ವಾಸವಿ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಶಾಲಾ ಮೈದಾನದಲ್ಲಿ ತಾಲೀಮು ನಡೆಸಿದರು. ಹುಳಿಯಾರಿನ ವಾಸವಿ ಶಾಲಾ ಮಕ್ಕಳು ಗಣರಾಜ್ಯೋತ್ಸವದ ಅಂಗವಾಗಿ ದೈಹಿಕ ಶಿಕ್ಷಕರಾದ ಮಂಜುನಾಥ್ ಹಾಗೂ ರಾಮಸ್ವಾಮಿ ಮಾರ್ಗದರ್ಶನದಲ್ಲಿ ತಾಲೀಮು ನಡೆಸುತ್ತಿರುವುದು. ದೈಹಿಕ ಶಿಕ್ಷಕರಾದ ಮಂಜುನಾಥ್ ಹಾಗೂ ರಾಮಸ್ವಾಮಿ ಅವರು ಮಕ್ಕಳ ತಂಡಗಳನ್ನು ರಚಿಸಿ , ಯಾವರೀತಿ ಪಥ ಸಂಚಲನದಲ್ಲಿ ಹೆಜ್ಜೆ ಹಾಖಬೇಕು ಹಾಗೂ ಧ್ವಜ ವಂದನೆಯನ್ನು ಸಲ್ಲಿಸುವುದರ ಬಗ್ಗೆ ತಿಳಿಸುತ್ತಿದ್ದರು. ಮಕ್ಕಳು ಬ್ಯಾಂಡ್ ಸೆಟ್ ನ ಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ ತಾಲೀಮಿನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಜನವರಿ ೨೬ರಂದು ರಾಷ್ಟ್ರವ್ಯಾಪಿ ಗಣರಾಜ್ಯೋತ್ಸವದ ಆಚರಣೆ ನಡೆಯಲಿದ್ದು ಅದಕ್ಕೆ ಗೌರವ ಸೂಚಿಸುವುದು ನಮ್ಮೆಲರ ಕರ್ತವ್ಯವಾಗಿದೆ. ಅಂದು ಶಿಸ್ತು ಬದ್ದವಾಗಿ ಪಥ ಸಂಚಲನ ನಡೆಸುವ ನಿಟ್ಟಿನಲ್ಲಿ ಈ ತಾಲೀಮು ನಡೆಸುತ್ತಿರುವುದಾಗಿ ಮುಖ್ಯಶಿಕ್ಷಕ ರಮೇಶ್ ಪ್ರತಿಕ್ರಿಯಿಸಿದರು.

ಸೋತ್ತಿದ್ದರೂ ಕ್ಷೇತ್ರ ಹಾಗೂ ಪಕ್ಷದ ಏಳ್ಗೆಗೆ ಬದ್ಧ : ಸಾಸಲು ಸತೀಶ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾನು ಸೋತಿದ್ದರೂ ಸಹ ಕ್ಷೇತ್ರದ ಕಾರ್ಯಕರ್ತರ ಬೆಂಬಲ ತನ್ನೊಂದಿಗಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಬಲವರ್ಧನೆಗೆ ಶ್ರಮಿಸುವೆ. ಅದರ ಫಲ ಮುಂದಿನ ಚುನಾವಣೆಯಲ್ಲಿ ವ್ಯಕ್ತವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ತಿಳಿಸಿದರು. ಹುಳಿಯಾರಿನ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಂದಿಗನಡುವಿನ ಸಣ್ಣಕರಿಯಪ್ಪ ಹಾಗೂ ರುದ್ರೇಶ್ ಅವರನ್ನು ಮುಖಂಡ ಸಾಸಲು ಸತೀಶ್ ಕಾಂಗ್ರೆಸ್ ನ ಶಾಲು ಹಾಕಿ ಸೇರ್ಪಡೆ ಮಾಡಿಕೊಂಡರು. ಹುಳಿಯಾರಿನ ಕಾಂಗ್ರೆಸ್ ಮುಖಂಡ ವೈ.ಸಿ.ಸಿದ್ರಾಮಣ್ಣ ಅವರ ಮನೆಯ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಸೋತ ಕೆಲನಾಯಕರು ತಮಗೂ ಕ್ಷೇತ್ರಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ತಮ್ಮಪಾಡಿಗಿರುತ್ತಾರೆ.ಆದರೆ ನಾನು ಪಕ್ಷದ ಜೊತೆಗೆ ಕ್ಷೇತ್ರದ ಅಭಿವೃದ್ಧಿಯನ್ನೂ ಮುಖ್ಯವಾಗಿಟ್ಟುಕೊಂಡು ರಾಜಕೀಯಕ್ಕೆ ಬಂದಿರುವುದಾಗಿ ತಿಳಿಸಿದರು. ಸಂಸದರ ಕಾರ್ಯವೈಖರಿಯಿಂದಾಗಿ ಈ ಕ್ಷೇತ್ರದ ಹೆಚ್ಚಿನ ಮಂದಿ ಕಾಂಗ್ರೆಸ್ ನತ್ತ ಮುಖಮಾಡಿದ್ದಾರಲ್ಲದೆ ಬೇರೆ ಪಕ್ಷದ ಮುಖಂಡರು ಸಹ ತಮ್ಮ ಪಕ್ಷಕ್ಕೆ ಬರುವ ತವಕದಲ್ಲಿದ್ದಾರೆ ಎಂದರು. ತಾವು ಈ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಬೇಕಾದ ಸವಲತ್ತುಗಳನ್ನು ಮಂಜೂರು ಮಾಡಿಸುವ ನಿಟ್ಟಿನಲ್ಲಿ ಈಗಾಗಲೇ ಸಂಸದರಿಗೆ ಹಾಗೂ ಹಾಲಿ ಸಚಿವರಿಗೂ

ಜಯಂತಿ ಆಚರಣೆ : ವಿವೇಕಾನಂದ ವೇಷತೊಟ್ಟ ಮಕ್ಕಳು

ಹುಳಿಯಾರು  ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಶಾಲಾ ಮಕ್ಕಳು ವಿವೇಕಾನಂದ ವೇಷ ತೊಟ್ಟು ವಿವೇಕಾನಂದ ಜಯತ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಕ್ಕಳಿಗೆ ವಿವೇಕಾನಂದರ ವೇಷ ಹಾಕಿಸಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಮಾತನಾಡಿ, ವಿವೇಕಾನಂದರ ಹೇಳಿಕೆಗಳು ಎಂದೆಂದಿಗೂ ಯುವಪೀಳಿಗೆಗೆ ಆದರ್ಶಯುತವಾಗಿರುತ್ತದೆ ಎಂದರು. ವಿವೇಕಾನಂದರು ತಮ್ಮ ಜೀವನವನ್ನು ಯಾವರೀತಿ ನಡೆಸಿದರು ಹಾಗೂ ಯಾವ ರೀತಿ ಸರಳ ಜೀವನ ನಡೆಸುತ್ತಿದ್ದರು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಶಾಲೆಯ ಕೆಲ ಮಕ್ಕಳಿಗೆ ವಿವೇಕಾನಂದ ಉಡುಗೆಗಳನ್ನು ಹಾಕಿಸಿ ಅವರ ಹೇಳಿಕೆಗಳನ್ನು ಹೇಳಿಸುವ ಕಾರ್ಯ ಮಾಡಿರುವುದಾಗಿ ತಿಳಿಸಿದರು. ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಶಶಿಭೂಷಣ್ ಮಾತನಾಡಿ ವಿವೇಕಾನಂದರು ಓದಿನಲ್ಲಿ ಹೊಂದಿದ್ದ ಶ್ರದ್ದೆ ಹಾಗೂ ತಾಳ್ಮೆಯ ಮನೋಭಾವದ ಬಗ್ಗೆ ತಿಳಿಸಿದರು. ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದವರು ಸಂಸ್ಕಾರ ಹಾಗೂ ಸಾಧನೆ ಮೂಲಕ ವಿವೇಕಾನಂದರಾದರು ಎಂದರು. ಶಾಲೆಯ ಪ್ರಾಂಶುಪಾಲ ರವಿ ಹಾಗೂ ಶಿಕ್ಷಕರು,ಸಿಬ್ಬಂದಿಯವರು ಉಪಸ್ಥಿತರಿದ್ದರು.

ವಿವೇಕಾನಂದರ ಕುರಿತು ಪ್ರಬಂಧಸ್ಪರ್ಧೆ ವಿಜೇತರಿಗೆ ಪುಸ್ತಕ ಬಹುಮಾನ

ಇಲ್ಲಿನ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ಅಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ವಿವೇಕಾನಂದ ಜೀವನಚರಿತ್ರೆಯುಳ್ಳ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ಅಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಹೋಬಳಿಯ ಛಾಯಾಗ್ರಾಹಕ ಸಂಘದ ಸುದರ್ಶನಾಚಾರ್ ಅವರು ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು. ಈ ವೇಳೆ ಉಪಪ್ರಾಂಶುಪಾಲರಾದ ಇಂದಿರಾ, ಎಸ್ಡಿಎಂಸಿ ಉಪಾಧ್ಯಕ್ಷ ಆರ್.ಸಿ.ಮಹೇಶ್,ಮುಖಂಡ ಜಲಾಲ್ ಸಾಬ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಹುಳಿಯಾರು : ವಿವಿಧೆಡೆ ಪಲ್ಸ್ ಪೋಲೀಯೋ ಲಸಿಕೆ

ಹುಳಿಯಾರು  ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ರೋಟರಿ ಸಂಸ್ಥೆಯ ಸಹಯೋಗದಲ್ಲಿ ನಡೆದ ೨೦೧೫ನೇ ಸಾಲಿನ ಮೊದಲ ಹಂತದ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮ ಭಾನುವಾರದಂದು ಯಶಸ್ವಿಯಾಗಿ ನಡೆಯಿತು. ಹುಳಿಯಾರು ಬಸ್ ನಿಲ್ದಾಣದ ಪೋಲೀಯೋ ಬೂತ್ ನಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ.ಎಸ್.ನಟರಾಜ್ ಮಗುವಿಗೆ ಲಸಿಕೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಟ್ಟಣದಲ್ಲಿ ಬಸ್ ನಿಲ್ದಾಣ,ಸರ್ಕಾರಿ ಆಸ್ಪತ್ರೆ, ಮಾರುತಿನಗರದ ಕೇಶವ ಶಾಲೆ, ಇಂದಿರಾನಗರ,ಅಜಾದ್ ನಗರ, ಯಾಕೂಬ್ ಸಾಬ್ ಪಾಳ್ಯ, ಸೋಮಜ್ಜನಪಾಳ್ಯದ ಅಂಗನವಾಡಿ ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗಿನಿಂದ ಸಂಜೆವರೆಗೆ ಲಸಿಕೆ ಹಾಕಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸದಾಶಿವು ಪೋಲಿಯೋಗೆ ಚಾಲನೆ ನೀಡಿ, ೫ ವರ್ಷದ ಒಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ಇಂದು ಮತ್ತೊಮ್ಮೆ ತಪ್ಪದೆ ಲಸಿಕೆ ಹಾಕಿಸುವಂತೆ ಮನವಿಮಾಡಿದರು. ಬಸ್ ನಿಲ್ದಾಣದಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಂ.ಎಸ್.ನಟರಾಜ್ ಮಗುವಿಗೆ ಲಸಿಕೆ ಹಾಕುವ ಮೂಲಕ ಪೋಲಿಯೋ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಿದರು. ರೋಟರಿ ಕಾರ್ಯಕರ್ತರು ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲು ಹಾಜರಿದ್ದು ವ್ಯವಸ್ಥಿತವಾಗಿ ನಿರ್ವಹಿಸಿದ್ದಲ್ಲದೆ, ಸಿಬ್ಬಂದಿಗಳಿಗೆ ಊಟ,ತಿಂಡಿ ಪೂರೈಸಿದ್ದರು. ವೈದ್ಯೆ ಶೋಭಾ, ರೋಟರಿ ಸಂಸ್ಥೆಯ ಅಧ್ಯಕ್ಷ ಈ.ರವೀಶ್, ಪದಾಧಿಕಾರಿಗಳಾದ ಗಂಗಾಧರ್ ರಾವ್, ನಂದಿಹಳ