ಹುಳಿಯಾರು ಪಟ್ಟಣದ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶನಿವಾರ ಮಾಲಾಧಾರಿ ಸ್ವಾಮಿಗಳಿಗೆ ಇರುಮುಡಿಕಟ್ಟಲಾಯಿತು. ಈ ನಿಮಿತ್ತ ಅಯ್ಯಪ್ಪಸ್ವಾಮಿಯ ವಿಗ್ರಹವನ್ನು ಆನೆಯಮೇಲೆ ಕುಳ್ಳಿರಿಸಿ ಇರುಮುಡಿ ಹೊತ್ತ ಮಾಲಾಧಾರಿಸ್ವಾಮಿಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಹುಳಿಯಾರಿನಿಂದ ಶಬರಿಮಲೆಗೆ ಯಾತ್ರೆ ಹೊರಟ ಮಾಲಾಧಾರಿ ಸ್ವಾಮಿಗಳು ಇರುಮುಡಿ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. |
ಗುರುಸ್ವಾಮಿಗಳಾದ ಗೋಪಾಲರಾವ್ ಸ್ವಾಮಿ,ದಾನಿಸ್ವಾಮಿ, ರಮೇಶ್ ಸ್ವಾಮಿ ಅವರುಗಳು ಅಯ್ಯಪ್ಪನ ಸನ್ನಿಧಾನದಲ್ಲಿ ಸುಮಾರು ೧೮೦ಕ್ಕೂ ಅಧಿಕ ಮಾಲಾಧಾರಿ ಸ್ವಾಮಿಗಳಿಗೆ ಇರುಮುಡಿಕಟ್ಟಿದರು. ಈ ವೇಳೆ ಮಾಲಾಧಾರಿ ಸ್ವಾಮಿಗಳ ಮನೆಯವರು ಸಂಬಂಧಿಕರು ಪಾಲ್ಗೊಂಡಿದ್ದು ಇರುಮುಡಿ ಚೀಲಕ್ಕೆ ತುಪ್ಪ ತುಂಬಿದ ಕಾಯಿ, ಅಕ್ಕಿ ಹಾಕಿದರು. ಸಂಜೆ ವೇಳೆಗೆ ಎಲ್ಲಾ ಮಾಲಾಧಾರಿಸ್ವಾಮಿಗಳು ಸೇರಿದಂತೆ ಆನೆಯ ಮೇಲೆ ಸ್ವಾಮಿಯ ವಿಗ್ರಹವನಿಟ್ಟು ಅಯ್ಯಪ್ಪನ ಸನ್ನಿದಿಯಿಂದ ಉತ್ಸವ ಪ್ರಾರಂಭಿಸಿ ಪಟ್ಟಣದ ಹುಳಿಯಾರಮ್ಮ ದೇವಾಲಯದ ಮೂಲಕ ಕೆಂಚಮ್ಮನ ದೇವಾಲಯ, ದುರ್ಗಾಪರಮೇಶ್ವರಿ ದೇವಾಲಯದಲ್ಲಿಗೆ ತೆರಳಿ ಹೀಡುಗಾಯಿ ಹೊಡೆದು ಪೂಜೆಸಲ್ಲಿಸಿ ಬಿಎಚ್ ರಸ್ತೆ ಮೂಲಕ ಆಂಜನನೇಯಸ್ವಾಮಿ ದೇವಾಲಯದಲ್ಲಿಗೆ ತೆರಳಿದ ಮಾಲಾಧಾರಿ ಸ್ವಾಮಿಗಳು ಆಂಜನೇಯಸ್ವಾಮಿಗೆ ಪೂಜೆಸಲ್ಲಿಸಿದರು. ನಂತರ ತಾವು ಯಾತ್ರೆಗೆ ಹೊರಡಲು ಸಿದ್ದ ಮಾಡಿದ್ದ ವಾಹನಗಳಿಗೆ ಗುರುಸ್ವಾಮಿಗಳಿಂದ ಪೂಜೆ ಮಾಡಿಸಿ ಅಯ್ಯಪ್ಪನ ಶರಣು ಘೋಷ ಕೂಗುತ್ತಾ ಶಬರಿಮಲೆಯತ್ತ ತಮ್ಮ ಪಯಣ ಬೆಳೆಸಿದರು.
ಯಾತ್ರೆಗೆ ಹೊರಟ ಮಾಲಾಧಾರಿ ಸ್ವಾಮಿಗಳಿಗೆ ಆಂಜನೇಯಸ್ವಾಮಿ ದೇವಾಲಯದ ಹತ್ತಿರ ಮುಸ್ಲಿಂ ಸಮುದಾಯದವರು ಹಾಲು,ಟೀ ಹಾಗೂ ಕಾಫಿ ವಿತರಿಸಿ ಯಾತ್ರೆಗೆ ಶುಭಹಾರೈಸಿದರು.
ಅಯ್ಯಪ್ಪ ಮಾಲಾಧಾರಿಗಳನ್ನು ನೋಡಲು ಪಟ್ಟಣ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಆಗಮಿಸಿದ್ದು, ಮಾಲಾಧಾರಿ ಸ್ವಾಮಿಗಳಿಗೆ ನಮಸ್ಕರಿಸಿ ಕಾಣಿಕೆ ನೀಡಿ ಅಶೀರ್ವಾದ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ