ಹುಳಿಯಾರು ಪಟ್ಟಣಪ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಂಕ್ರಾತಿಹಬ್ಬದ ದಿನವಾದ ಬುಧವಾರ ಮಧ್ಯಾಹ್ನ ಜ್ಯೋತಿಯ ಮುನ್ನಾದಿನ ಪೂಜೆಯ ವೇಳೆಗೆ ಸರಿಯಾಗಿ ವಾಡಿಕೆಯಂತೆ ಗರುಡಪಕ್ಷಿಯು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ನೆರೆದಿದ್ದವರಲ್ಲಿ ಭಕ್ತಿಭಾವವನ್ನುಂಟು ಮಾಡಿತು.
ಹುಳಿಯಾರಿನ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಬುಧವಾರ ಗರುಡದರ್ಶನದ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಯಿತು. |
ಕಳೆದ ಮೂರ್ನಾಲ್ಕು ವರ್ಷದಿಂದಲೂ ಸಹ ಇದೇ ಸಮಯಕ್ಕೆ ಸರಿಯಾಗಿ ಗರುಡವೊಂದು ಬಂದು ಅಯ್ಯಪ್ಪನ ಸನ್ನಿಧಿಯನ್ನು ಪ್ರದಕ್ಷಿಣೆ ಹಾಕಿ ಹೋಗುತ್ತಿದೆ. ಶಬರಿಮಲೆಯಲ್ಲಿ ಅಯ್ಯಪ್ಪನ ಒಡವೆಗಳನ್ನು ಕೊಂಡೊಯ್ಯುವಾಗ ಯಾವರೀತಿ ಗರುಡ ಕಾವಲು ಕಾಯುತ್ತದೆ ಅಂತೆಯೇ ಇಲ್ಲಿಯೂ ಸಹ ಅಯ್ಯಪ್ಪನ ಮಹಾಮಂಗಳಾರತಿ ಸಮಯಕ್ಕೆ ಬಂದು ಹೋಗುತ್ತದೆ ಎಂದು ಗುರುಸ್ವಾಮಿಗಳಾದ ಗೋಪಾಲ್ ಸ್ವಾಮಿ ತಿಳಿಸುತ್ತಾರೆ. ಗರುಡವನ್ನು ನೋಡಿದ ಹಲವಾರು ಭಕ್ತರು ಅಶ್ಚರ್ಯ ಪುಳುಕಿತರಾಗಿದ್ದರು. ಗರುಡ ಪ್ರದಕ್ಷಣೆಯ ನಂತರ ಸ್ವಾಮಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ನಂತರ ಮಾಲಾಧಿಸ್ವಾಮಿಗಳಿಗೆ ಹಾಗೂ ಭಕ್ತಾಧಿಗಳಿಗೆ ಪ್ರಸಾದ ಹಾಗೂ ಹಾಲನ್ನು ವಿತರಿಸಲಾಯಿತು. ಈವೇಳೆ ಗುರುಸ್ವಾಮಿಗಳಾದ ಭವಾನಿರಮೇಶ್ ಸ್ವಾಮಿ, ಅಯ್ಯಪ್ಪಸ್ವಾಮಿ ದೇವಾಲ ಸಮಿತಿಯ ಸದಸ್ಯರು ಹಾಗೂ ಮಾಲಾಧಾರಿಸ್ವಾಮಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ