ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯಡಿ ಪ್ರಗತಿಬಂಧು ಸ್ವಸಹಾಯ ಗುಂಪುಗಳ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಹಯೋಗದಲ್ಲಿ ಹೋಬಳಿಯ ಗಾಣದಾಳು ವಲಯದ ಕಾರೇಹಳ್ಳಿ ಶ್ರೀಲಕ್ಷ್ಮಿರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾ.೧೫- ತಾ.೨೨ ರವರೆಗೆ ಒಂದುವಾರದ ಕಾಲ ಮದ್ಯವರ್ಜನ ಶಿಬಿರ ನಡೆಯಲಿದೆ.
ಧರ್ಮಸ್ಥಳ ಯೋಜನೆಯ ೭೭೮ನೇ ಮದ್ಯವರ್ಜನ ಶಿಬಿರವಾಗಿದ್ದು, ಸಂಸದ ಮುದ್ದಹನುಮೇಗೌಡರು ಶಿಬಿರ ಉದ್ಘಾಟಿಸಲಿದ್ದು, ಮದ್ಯವರ್ಜನಶಿಬಿರದ ಅಧ್ಯಕ್ಷ ಜಿ.ಎಸ್.ಸಿದ್ದರಾಮಯ್ಯ ಅಧ್ಯಕ್ಷತೆವಹಿಸುವರು
ಯೋಜನೆಯ ಜಿಲ್ಲಾ ನಿರ್ದೇಶಕರಾದ ಪಿ.ಕೆ.ಪುರುಷೋತ್ತಮ, ಮಾಜಿಶಾಸಕ ಕಿರಣ್ ಕುಮಾರ್, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ತಾ.ಪಂ.ಉಪಾಧ್ಯಕ್ಷ ವಸಂತಯ್ಯ,ಜಿಪಂಸದಸ್ಯೆ ನಿಂಗಮ್ಮ, ಗಾಣದಾಳು ಗ್ರಾ.ಪಂ.ಅಧ್ಯಕ್ಷ ಶಿವಕುಮಾರ್,ಜಿ.ಪಂ.ಮಾಜಿಸದಸ್ಯ ವೀರಣ್ಣ, ಪಿಎಸೈ ಘೋರ್ಪಡೆ, ರಂಗನಾಥಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ರಂಗಸ್ವಾಮಿ, ಕೃಷಿಕ ಮುದ್ದರಂಗಯ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಯೋಜನಾಧಿಕಾರಿ ರೋಹಿತಾಕ್ಷ(೯೪೪೮೮೬೯೦೩೦), ಗಾಣಧಾಳು ವಲಯದ ಮೇಲ್ವಿಚಾರಕ ಕೆ.ಎಸ್.ಸುರೇಶ್(೯೪೮೧೬೧೯೬೧೮) ಅವರನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ