ಹುಳಿಯಾರು : ಪಟ್ಟಣಲ್ಲಿ ನಡೆದ ಆಟೋ ಸಿಲಿಂಡ್ ಸ್ಪೋಟದಿಂದ ಅಂಗನವಾಡಿ ಮಕ್ಕಳು ಗಾಯಗೊಂಡು ಓರ್ವ ವ್ಯಕ್ತಿ ಬಲಿಯಾಗಿದ್ದು ಈ ಘಟನೆಗೆ ಸಿಲಿಂಡರ್ ಡಂಪಿಂಗ್ ಕಾರಣವಾಗಿದ್ದು, ಈ ಡಂಪಿಂಗ್ ಕಾರ್ಯ ಪಟ್ಟಣದಲ್ಲಿ ಎಲ್ಲೆಡೆ ನಡೆಯುತ್ತಿದ್ದು ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಆಕ್ರಮ ಸಿಲಿಂಡರ್ ರೀಫಿಲಿಂಗ್ ಮಾಡುವುದನ್ನು ತಡೆಯುವಂತೆ ಒತ್ತಾಯಿಸಿ ಪಟ್ಟಣದ ವಿವಿಧ ಸಂಘಸಂಸ್ಥೆಯವರು ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ತಹಸೀಲ್ದಾರ್ ಕಾಮಾಕ್ಷಮ್ಮ ಅವರಿಗೆ ಮನವಿ ಸಲ್ಲಿಸಿದರು.
ಹುಳಿಯಾರಿನಲ್ಲಿ ನಡೆಯುತ್ತಿರುವ ಸಿಲಿಂಡರ್ ಡಂಪಿಂಗ್ ಕಾರ್ಯವನ್ನು ತಡೆಗಟ್ಟುವಂತೆ ಒತ್ತಾಯಿಸಿ ವಿವಿಧ ಸಂಘಸಂಸ್ಥೆಯವರು ಶಾಸಕರು ಹಾಗೂ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು. |
ಪಟ್ಟಣದಲ್ಲಿನ ಸುಮಾರು ಆಟೋದವರು ಇಂದಿಗೂ ಗ್ಯಾಸ್ ಕಿಟ್ ಬಳಸಿ ಆಟೋ ಚಲಾಯಿಸುತ್ತಿದ್ದಾರೆ ಇದರಲ್ಲಿ ಹಲವರು ಪರವಾನಿಗೆ ಪಡೆಯದೆಯೇ ಸಿಲಿಂಡರ್ ಹಾಕಿಕೊಂಡು ಆಟೋ ಚಲಾಯಿಸುತ್ತಿದ್ದಾರೆ. ಅಲ್ಲದೆ ಈ ಆಟೋದವರು ಸಿಲಿಂಡರ್ ರೀಫಿಲ್ಲಿಂಗ್ ಮಾಡಿಸಲು ಯಾವುದೇ ಗ್ಯಾಸ್ ಬಂಕ್ ಗಳಿಗೆ ಹೋಗದೆ ತಾವುಗಳೇ ಸ್ವತ: ಡಂಪಿಂಗ್ ಕಾರ್ಯ ಮಾಡುತ್ತಾರೆ.ಇದಕ್ಕಾಗಿ ಗೃಹ ಬಳಕೆಯ ಸಿಲಿಂಡರ್ ನಿಂದ ಆಟೋದ ಸಿಲಿಂಡರ್ ಗೆ ಡಂಪಿಂಗ್ ಮಾಡಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಅವಘಡಗಳು ಸಂಭವಿಸುವ ಅವಕಾಶ ಹೆಚ್ಚಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ತನಿಖೆ ನಡೆಸಿ ಆಕ್ರಮವಾಗಿ ನಡೆಯುತ್ತಿರುವ ರೀಫಿಲ್ಲಿಂಗ್ ದಂಧೆಯನ್ನು ತಡೆಗಟ್ಟಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಹುಳಿಯಾರು ಪಟ್ಟಣದಲ್ಲಿ ಹಲವಾರು ಆಟೋ ಸೇರಿದಂತೆ ಮಾರುತಿ ವ್ಯಾನ್ ಗಳು ಗ್ಯಾಸ್ ಕಿಟ್ ಹೊಂದಿ ಸಂಚರಿಸುತ್ತಿವೆ. ಇದರಲ್ಲಿ ಶಾಲೆಗೆ ಮಕ್ಕಳನ್ನು ಕರೆತರುವ ಆಟೋಗಳು ಹಾಗೂ ಮಾರುತಿ ಓಮಿನಿಗಳು ಹೆಚ್ಚಾಗಿವೆ. ಇದಕ್ಕು ಮಿಗಿಲಾಗಿ ಈ ಭಾಗದಲ್ಲಿ ಸಿಲಿಂಡರ್ ರೀಫಿಲ್ಲಿಂಗ್ ಮಾಡಲು ಗ್ಯಾಸ್ ಬಂಕ್ ಗಳು ಇಲ್ಲದಿದ್ದು ರೀಫಿಲ್ಲಿಂಗಿಗೆ ಅಡುಗೆ ಅನಿಲವನ್ನೇ ಬಳಸುವ ಅವಕಾಶ ಹೆಚ್ಚಿವೆ. ಅಲ್ಲದೆ ಆಟೋ ಹಾಗೂ ಕಾರಿನವರು ತಾವೇ ರೀಪಿಲ್ಲಿಂಗ್ ಕಾರ್ಯ ಮಾಡಿಕೊಳ್ಳುತ್ತಾರೆ ಆ ವೇಳೆ ಆಕಸ್ಮಿಕವಾಗಿ ಸ್ಪೋಟ ಸಂಭವಿಸಿದರೆ ಆಗುವ ಅನಾಹುತಕ್ಕೆ ಯಾರು ಹೊಣೆ ಎಂದು ದಲಿತ ಸಹಾಯ ವಾಣಿಯ ಹನುಮಂತಪ್ಪ ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ