ಹುಳಿಯಾರು ಪಟ್ಟಣದ ಶ್ರೀ ಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವ ಮಂಗಳವಾರ ಮೃತಪಟ್ಟಿದ್ದು, ಬುಧವಾರದಂದು ಮೃತ ಬಸವನ ಪಾರ್ಥಿವ ಶರೀರವನ್ನು ಗ್ರಾಮದ ಮುಖ್ಯಸ್ಥರೆಲ್ಲಾ ಸೇರಿ ಉತ್ಸವ ನಡೆಸಿ ಬೀರದೇವರ ಮೂಲಸ್ಥಾನ ಬೀರದೇವರಕಟ್ಟೆ ಹತ್ತಿರ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನಡೆಸಿದರು.
ಹುಳಿಯಾರಿನ ಶ್ರೀಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವ ಮೃತಪಟ್ಟ ಹಿನ್ನಲೆಯಲ್ಲಿ ಅದರ ಪಾರ್ಥಿವ ಶರೀರವನ್ನು ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು. |
ಕಳೆದ ಹತ್ತದಿನೈದು ವರ್ಷಗಳ ಹಿಂದೆ ಈ ಬಸವನನ್ನು ಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವವಾಗಿ ಬಿಟ್ಟಿದ್ದು ಜಾತ್ರೆ, ಕಾರ್ತೀಕ ಸಮಯದಲ್ಲಿ ಈ ಬಸವನಿಗೆ ನಗಾರಿ ಹಾಕಲಾಗುತ್ತಿತ್ತು. ಅಲ್ಲದೆ ಈ ಬಸವವನ್ನು ಬೀರಲಿಂಗೇಶ್ವರಸ್ವಾಮಿಯ ಪ್ರತಿರೂಪವೆಂದು ಜನ ಆರಾಧಿಸುತ್ತಿದ್ದರು. ಬಸವನಿಗೆ ವಯಸ್ಸಾಗಿದ್ದ ಕಾರಣ ಮೃತಪಟ್ಟಿದ್ದು, ಬಸವನನ್ನು ಕೆ.ಸಿ.ಪಾಳ್ಯ,ಲಿಂಗಪ್ಪನಪಾಳ್ಯ ಹಾಗೂ ಹುಳಿಯಾರಿನಲ್ಲಿ ಮೆರವಣಿಗೆ ಮಾಡಿದರು ಈ ವೇಳೆ ಬೀರಲಿಂಗೇಶ್ವರಸ್ವಾಮಿ ದೇವಾಲಯ ಸಮಿತಿಯವರು,ಗುಡಿಗೌಡರು,ಭಂಡಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ