ಇಲ್ಲಿನ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್ ಸ್ವಯಂಸೇವಕರು ಸೇರಿ ಮಂಗಳವಾರ ಕಾಲೇಜು ಆವರಣದಲ್ಲಿ ಸ್ವಚ್ಚ ಭಾರತ ಆಂದೋಲನದಡಿ ಸ್ವಚ್ಚತಾ ಕಾರ್ಯ ನಡೆಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎನ್ನೆಸ್ಸಸ್ ಸ್ವಯಂಸೇವಕರು ಪ್ರಾಚಾರ್ಯ ನಟರಾಜ್ ಅವರ ಮಾರ್ಗದರ್ಶನದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವುದು. |
ಪ್ರಾಚಾರ್ಯ ನಟರಾಜ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕವಾಗಿಟ್ಟು ಕೊಳ್ಳುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ನಮ್ಮ ಗ್ರಾಮವೂ ಸಹ ಚನ್ನಾಗಿರುತ್ತದೆ. ಪ್ರತಿ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಸ್ವಚ್ಚತಾ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಸ್ವಚ್ಚತಾಕಾರ್ಯ ಮಾಡುವುದರ ಜೊತೆಗೆ ತಮ್ಮತಮ್ಮ ಗ್ರಾಮಗಳ ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಎನ್ನೆಸ್ಸಸ್ ಘಟಕದಿಂದ ಸ್ವಚ್ಚತಾ ಕಾರ್ಯ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಮಾಡುತ್ತಿದ್ದು ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಈ ಘಟಕಕ್ಕೆ ಸೇರಿಕೊಳ್ಳುವ ಮೂಲಕ ಸ್ವಯಂಸೇವೆಗೆ ಮುಂದಾಗಬೇಕು ಎಂದು ಶಿಬಿರಾಧಿಕಾರಿ ಆರ್.ಯೋಗೀಶ್ ತಿಳಿಸಿದರು. ಈ ವೇಳೆ ಉಪನ್ಯಾಸಕರಾದ ರೇವಣ್ಣ,ರಮೇಶ್,ಶಶಿಭೂಷಣ್,ಅನಂತಯ್ಯ,ಗಿರೀಶ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ