ಜನವರಿ ೨೬ರ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಶಾಲೆ ಹಾಗೂ ವಾಸವಿ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಶಾಲಾ ಮೈದಾನದಲ್ಲಿ ತಾಲೀಮು ನಡೆಸಿದರು.
ಹುಳಿಯಾರಿನ ವಾಸವಿ ಶಾಲಾ ಮಕ್ಕಳು ಗಣರಾಜ್ಯೋತ್ಸವದ ಅಂಗವಾಗಿ ದೈಹಿಕ ಶಿಕ್ಷಕರಾದ ಮಂಜುನಾಥ್ ಹಾಗೂ ರಾಮಸ್ವಾಮಿ ಮಾರ್ಗದರ್ಶನದಲ್ಲಿ ತಾಲೀಮು ನಡೆಸುತ್ತಿರುವುದು. |
ದೈಹಿಕ ಶಿಕ್ಷಕರಾದ ಮಂಜುನಾಥ್ ಹಾಗೂ ರಾಮಸ್ವಾಮಿ ಅವರು ಮಕ್ಕಳ ತಂಡಗಳನ್ನು ರಚಿಸಿ , ಯಾವರೀತಿ ಪಥ ಸಂಚಲನದಲ್ಲಿ ಹೆಜ್ಜೆ ಹಾಖಬೇಕು ಹಾಗೂ ಧ್ವಜ ವಂದನೆಯನ್ನು ಸಲ್ಲಿಸುವುದರ ಬಗ್ಗೆ ತಿಳಿಸುತ್ತಿದ್ದರು. ಮಕ್ಕಳು ಬ್ಯಾಂಡ್ ಸೆಟ್ ನ ಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ ತಾಲೀಮಿನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಜನವರಿ ೨೬ರಂದು ರಾಷ್ಟ್ರವ್ಯಾಪಿ ಗಣರಾಜ್ಯೋತ್ಸವದ ಆಚರಣೆ ನಡೆಯಲಿದ್ದು ಅದಕ್ಕೆ ಗೌರವ ಸೂಚಿಸುವುದು ನಮ್ಮೆಲರ ಕರ್ತವ್ಯವಾಗಿದೆ. ಅಂದು ಶಿಸ್ತು ಬದ್ದವಾಗಿ ಪಥ ಸಂಚಲನ ನಡೆಸುವ ನಿಟ್ಟಿನಲ್ಲಿ ಈ ತಾಲೀಮು ನಡೆಸುತ್ತಿರುವುದಾಗಿ ಮುಖ್ಯಶಿಕ್ಷಕ ರಮೇಶ್ ಪ್ರತಿಕ್ರಿಯಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ