ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯ್ತಿಯ ಮುಂದೆ ಕಳೆದ ಮೂರು ದಿನಗಳಿಂದ ಆಹೋರಾತ್ರಿ ಧರಣೆ ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ದಿನವೂ ಧರಣಿ ಮುಂದುವರೆದಿದ್ದು ಧರಣಿ ಸ್ಥಳದಲ್ಲೇ ಎಳ್ಳು-ಬೆಲ್ಲ ವಿತರಿಸುವ ಮೂಲಕ ಹಬ್ಬದ ಆಚರಣೆ ನಡೆಸಿದರು.
ಹುಳಿಯಾರು ಹೋಬಳಿ ದಸೂಡಿ ಗ್ರಾ.ಪಂ.ಮುಂದೆ ನಡೆಯುತ್ತಿರುವ ಧರಣೆ ಸ್ಥಳದಲ್ಲೇ ಸಂಕ್ರಾಂತಿ ಆಚರಿಸಿ ಎಳ್ಳು-ಬೆಲ್ಲ ವಿತರಿಸುತ್ತಿರುವುದು. |
ದಸೂಡಿ ಗ್ರಾ.ಪಂ ನಲ್ಲಿ ಕಾರ್ಯದರ್ಶಿಯಿಂದ ನಡೆದಿರುವ ಅವ್ಯವಹಾರ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಹಾಲಿ ಕಾರ್ಯದರ್ಶಿಯ ಬದಲಾಗಿ ಬೇರೆ ಪಿಡಿಓ ಹಾಗೂ ಸಿಬ್ಬಂದಿಯವರನ್ನು ಕೆಲಸಕ್ಕೆ ನೇಮಿಸಿದ್ದು, ಬಾಕಿ ಉಳಿದಿದ್ದ ಕೆಲಸಗಳನ್ನು ಮಾಡುತ್ತಿದ್ದರೂ ಸಹ ಅವರ ಕೆಲಸದಿಂದ ತೃಪ್ತರಾಗದ ಧರಣಿ ನಿರತರು ಧರಣಿ ಹಿಂಪಡೆಯದೆ ಮುಂದುವರಿಸಿದ್ದಾರೆ.
ಶೌಚಾಲಯದ ಬಿಲ್ ಹಾಗೂ ಕೆಲ ಮನೆಗಳ ಗ್ರಾಂಟ್ ನ ಬಾಕಿ ಹಣದ ಚೆಕ್ಕನ್ನು ನೀಡಿದ್ದು, ಕೆಲ ಹಂಗಾಮಿ ನೌಕರರನ್ನು ಕಾಯಂ ಮಾಡಿದ್ದಾರೆ.ಆದರೆ ತಾವು ನೀಡಿರುವ ಚೆಕ್ ಗಳು ಡ್ರಾ ಆಗಿ ನಮ್ಮ ಖಾತೆಗೆ ಬರುವ ತನಕ ತಮ್ಮ ಧರಣಿ ಸಾಗುತ್ತಿರುತ್ತದೆ ಎಂದು ಗ್ರಾ.ಪಂ.ಸದಸ್ಯ ರವಿಕುಮಾರ್ ತಿಳಿಸಿದ್ದಾರೆ. ರಾತ್ರಿಯ ಚಳಿಯಲ್ಲೂ ಭಜನೆ ಮಾಡೂವ ಮುಖಾಂತರ ಜನರನ್ನು ಒಗ್ಗೂಡಿಸಿದ್ದು ಅಲ್ಲದೆ ಗುರುವಾರದಂದು ಸಂಕ್ರಾಂತಿ ಹಬ್ಬದ ದಿನವಾಗಿದ್ದರೂ ಸಹ ಪ್ರತಿಭಟನಾಕಾರರು ಸ್ಥಳದಲ್ಲೇ ಎಳ್ಳು-ಬೆಲ್ಲ ಹಂಚುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.ಈ ವೇಳೆ ಗ್ರಾ.ಪಂ.ಯ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಹಾಗೂ ಸ್ವಸಹಾಯ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ