ಹುಳಿಯಾರು ಪಟ್ಟಣದ ಇಂದಿರಾನಗರದ ಅಂಗನವಾಡಿ ಕೇಂದ್ರದ ಮುಂದೆ ನಿಂತಿದ್ದ ಪ್ಯಾಸೆಂಜರ್ ಆಟೋದ ಗ್ರ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಂಗನವಾಡಿಯ ಮಕ್ಕಳಿಗೆ ಗಾಯಗಳಾಗಿರುವ ಘಟನೆ ಗುರುವಾರ ಮಧ್ಯಾಹ್ನ ಘಟಿಸಿದೆ.
|
ಹುಳಿಯಾರಿನ ಇಂದಿರಾನಗರದಲ್ಲಿ ಆಟೋಸಿಲಿಂಡರ್ ಸ್ಪೋಟದಿಂದ ಆಗಿರುವ ಅನಾಹುತವನ್ನು ವೀಕ್ಷಿಸುತ್ತಿರುವ ಸಾರ್ವಜನಿಕರು. |
|
ಸಿಲಿಂಡರ್ ಸ್ಫೋಟದಿಂದ ಸುಟ್ಟಿರುವ ಆಟೋ. |
ಇಂದಿರಾನಗರದ ಪುಟ್ಟಸ್ವಾಮಿ ಎಂಬುವರ ಮನೆಯಲ್ಲಿ ಬಾಡಿಗೆಯಿದ್ದ ಶಬ್ಬಿರ್ ಎಂಬಾತ ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಆಟೋದ ಸಿಲಿಂಡರ್ ಸ್ಪೋಟಗೊಂಡಿದ್ದು ಆಟೋಗೆ ಬೆಂಕಿಹತ್ತಿಕೊಂಡಿದ್ದಲ್ಲದೆ, ಶಬ್ಬಿರ್ ಮನೆಗೂ ಬೆಂಕಿ ತಗುಲಿದೆ. ಮನೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ ಬೆಂಕಿ ಹೆಚ್ಚಾಗಿದ್ದು, ಎದುರುಗಡೆಯಿದ್ದ ಅಂಗನವಾಡಿ ಕೇಂದ್ರದತ್ತ ಬೆಂಕಿಯ ಜ್ವಾಲೆ ಎರಗಿದೆ. ಸಿಲಿಂಡರ್ ಸ್ಫೋಟದ ಶಬ್ದದಿಂದಾಗಿ ಮಕ್ಕಳು ಅಂಗನವಾಡಿಯಿಂದ ಹೊರ ಓಡಿ ಬಂದಿದ್ದಾರೆ ಆಗ ಮಕ್ಕಳಿಗೆ ಬೆಂಕಿಯ ಕಾವು ತಗುಲಿದೆ. ಅಂಗನವಾಡಿಯಲ್ಲಿದ್ದ ಒಟ್ಟು ೨೦ ಮಕ್ಕಳಲ್ಲಿ ೭ ಮಂದಿ ಮಕ್ಕಳಿಗೆ ಹೆಚ್ಚು ಸುಟ್ಟಗಾಯಗಳಿವೆ ಹಾಗೂ ಅಂಗನವಾಡಿ ಶಿಕ್ಷಕಿ ಶಬಾನಾ ಅವರ ಕೈಯ ಭಾಗ ಸುಟ್ಟಿದೆ. ಗಾಯಗೊಂಡಿದ್ದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಫೋಟದಿಂದ ಶಬ್ಬಿರ್ ಮನೆಯ ತೀರು, ಹೆಂಚು ಸುಟ್ಟು ಹೋಗಿರುವುದಲ್ಲದೆ , ಗೃಹೋಪಕಯೋಗಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ವಿಷಯ ತಿಳಿದು ಚಿ.ನಾ.ಹಳ್ಳಿ ಅಗ್ನಿಶಾಮಕದಳ ಸಿಬ್ಬಂದಿಯವರು ಘಟನಾ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಕಂದಾಯ ಇಲಾಖೆಯ ಸತ್ಯನಾರಾಯಣ, ಶ್ರೀನಿವಾಸ್, ಸಿಡಿಪಿಓ ಅನಿಸ್ ಕೈಸರ್ ಹಾಗೂ ಪಿಎಸೈ ಬಿ.ಪ್ರವೀಣ್ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ