ಹುಳಿಯಾರು ಹೋಬಳಿ ಕೋರಗೆರೆಯಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದ ವತಿಯಿಂದ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ೨೦೧೪-೧೫ ನೇ ಸಾಲಿನ ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭ (ತಾ.೨೬) ಸೋಮವಾರ ಮಧ್ಯಾಹ್ನ ನಡೆಯಲಿದೆ.
ಸಾಹಿತಿ ಹಾಗೂ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಬಿಳಿಗೆರೆ ಅವರು ಅಧ್ಯಕ್ಷತೆವಹಿಸಲಿದ್ದು, ಮುಖಂಡರಾದ ನಂದಿಹಳ್ಳಿ ಶಿವಣ್ಣ ಸಮಾರೋಪ ಭಾಷಣ ಮಾಡುವರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ, ಸಿಡಿಸಿ ಸದಸ್ಯರಾದ ಶ್ರೀನಿವಾಸ ಶ್ರೇಷ್ಠಿ,ಮರುಳಸಿದ್ದಪ್ಪ, ಪ್ರಾಧ್ಯಾಪಕರಾದ ಚಂದ್ರಶೇಖರಯ್ಯ,ಜಿ.ಪಂ.ಸದಸ್ಯೆ ನಿಂಗಮ್ಮರಾಮಯ್ಯ,ಎಪಿಎಂಸಿ ಅಧ್ಯಕ್ಷ ಸಣ್ಣಯ್ಯ, ಕೋರಗೆರೆ ಗ್ರಾ.ಪಂ.ನ ಉಪಾಧ್ಯಕ್ಷ ಕಾಂತರಾಜು ಸೇರಿದಂತೆ ಇತರರು ಆಗಮಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ