ಹುಳಿಯಾರು ಹೋಬಳಿ ಕಾಮಶೆಟ್ಟಿಪಾಳ್ಯದ ಶ್ರೀಬನಶಂಕರಿ ದೇವಾಲಯದಲ್ಲಿ ಸೋಮವಾರ ಸಂಜೆ ಶ್ರದ್ದಾಭಕ್ತಿಯಿಂದ ನಡೆದ ಬನದಹುಣ್ಣಿಮೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದವಾಗಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯದ ಬನಶಂಕರಿದೇವಿಗೆ ಬನದಹುಣ್ಣಿಮೆ ಅಂಗವಾಗಿ ಅಲಂಕರಿಸಿರುವುದು. |
ಬನದಹುಣ್ಣಿಮೆ ಅಂಗವಾಗಿ ಮುಂಜಾನೆಯೇ ಬಸವೇಶ್ವರಸ್ವಾಮಿ ಹಾಗೂ ಬನಶಂಕರಿ ದೇವಿಗೆ ಅಭಿಷೇಕ ಅರ್ಚನೆ ನಡೆಸಲಾಗಿತ್ತು. ಸಂಜೆ ಅಮ್ಮನವರನ್ನು ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನಡೆಸಲಾಯಿತು. ಹುಳಿಯರಿನ ಶೇಷಾಧ್ರಿ ಭಜನಾ ಮಂಡಳಿಯ ಮಹಿಳೆಯರಿಂದ ಭಜನಾಕಾರ್ಯ ನಡೆಯಿತು. ಹುಳಿಯಾರು,ಕೆಂಕೆರೆ,ಕಾಮಶೆಟ್ಟಿಪಾಳ್ಯದ ಸುತ್ತಮುತ್ತಲ ನೂರಾರು ಮಂದಿ ಭಕ್ತರು ಆಗಮಿಸಿದ್ದು ಬನಶಂಕರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯ ಸಮಿತಿಯವರು, ಗ್ರಾಮದ ಯುವಕ ಸಂಘದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ