ಸಮೀಪದ ಕಂದಿಕೆರೆಯ ಜಡೇಸಿದ್ದೇಶ್ವರಸ್ವಾಮಿ ಮತ್ತು ಕಣ್ವಕುಪ್ಪೆ ಗವಿ ಮಠಾಧೀಶರಾದ ಗವಿಶಾಂತವೀರಸ್ವಾಮಿಗಳ ೨೫ ನೇ ವರ್ಷದ ಜಾತ್ರಾ ಮಹೋತ್ಸವ ಗುರುವಾರದಿಂದ ಚಾಲನೆಗೊಂಡಿದ್ದು ಫೆ.೬ರ ಶುಕ್ರವಾರದ ವರೆಗೆ ನಡೆಯಲಿದೆ.
ಗುರುವಾರ ವಿಘ್ನೇಶ್ವರಸ್ವಾಮಿಗೆ ಅಭಿಷೇಕ,ಧ್ವಜಾರೋಹಣ,ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿಯೊಂದಿಗೆ ಜಾತ್ರೆ ಪ್ರಾರಂಭಗೊಂದಿದ್ದು, ತಾ.೩೦ರ ಶುಕ್ರವಾರ ಅಖಂಡ ಭಜನಾ ಸಪ್ತಾಹ,ತಾ.೩೧ರ ಶನಿವಾರ ನವಗ್ರಹಗಳಿಗೆ ಅಭಿಷೇಕ,ತಾ.೧ರ ಭಾನುವಾರ ಸುಭ್ರಮಣ್ಯಸ್ವಾಮಿಗೆ ಅಭಿಷೇಕ,ತಾ.೨ರ ಸೋಮವಾರ ಅಂಭಾದೇವಿಗೆ ಅಭಿಷೇಕ,ಕುಂಕುಮಾರ್ಚನೆ ಹಾಗೂ ಮಹಾಮಂಗಲಾರತಿ ನಡೆಯಲಿದೆ. ತಾ.೩ರ ಮಂಗಳವಾರ ಶ್ರೀಜಡೇಸಿದ್ದೇಶ್ವರಸ್ವಾಮಿಗೆ ರುದ್ರಾಭಿಷೇಕ,ಸಹಸ್ರನಾಮಾಮ ಪೂಜೆ, ತಾ.೪ರ ಬುಧವಾರದಂದು ಶ್ರೀ ಅವಧೂತ ಶಾಂತವೀರಸ್ವಾಮಿಗಳಿಗೆ ಗಂಗಾಸ್ನಾನ, ರುದ್ರಾಭಿಷೇಕ, ಸಹಸ್ರನಾಮ ಪೂಜೆ,೧೦೧ ಪೂಜಾಧಿಗಳು , ಮಹಾಮಂಗಳಾರತಿ ನಡೆದು, ಇದೇ ದಿನ ಸಂಜೆ ಕಂದಿಕೆರೆಯ ರಾಜಬೀದಿಗಳಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ.ತಾ.೫ರ ಗುರುವಾರ ಸ್ವಾಮಿಯ ಮಹಾರಥೋತ್ಸವ ಹಾಗೂ ದಾಸೋಹ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ