ವಿದ್ಯಾರ್ಥಿಗಳು ಪಾಠದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಪರಿಪೂರ್ಣ ಪ್ರಗತಿಗೆ ಪೂರಕವಾಗುತ್ತವೆ ಎಂದು ಚಿ.ನಾ.ಹಳ್ಳಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ನಾಗರಾಜ್ ತಿಳಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ೨೦೧೪-೧೫ ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಹಾಗೂ ಎನ್.ಎಸ್.ಎಸ್.ಘಟಕದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಹಾಗೂ ಎನ್.ಎಸ್.ಎಸ್.ಘಟಕದ ಸಮಾರೋಪ ಸಮಾರಂಭವನ್ನು ಪ್ರಾಂಶುಪಾಲ ಕೆ.ನಾಗರಾಜ್ ಉದ್ಘಾಟಿಸಿದರು.
|
ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಾಠವೂ ಎಷ್ಟು ಮುಖ್ಯವೋ ಅದರಂತೆ ಕ್ರೀಡೆ, ಸಾಂಸ್ಕೃತಿಕಕಾರ್ಯಕ್ರಮಗಳು, ಚರ್ಚಾಸ್ಪರ್ಧೆ,ಪ್ರವಾಸ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿರಬೇಕು ಇದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರಲು ಸಾಧ್ಯ ಎಂದರು. ಕಾಲೇಜಿನಲ್ಲಿ ಅಯೋಜಿಸುವಂತ ಅನೇಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಕಾಲೇಜಿನ ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಕನ್ನಡ ನಾಡು-ನುಡಿ ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ಯಾವರೀತಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.
ಪ್ರಾಂಶುಪಾಲ ನಟರಾಜ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು , ಹುಳಿಯಾರಿನ ಕಾಮನಬಿಲ್ಲು ಪೌಂಡೇಶನ್ನ ಅಧ್ಯಕ್ಷ ಎಂ.ಚನ್ನಕೇಶವ, ಸದಸ್ಯ ರವಿಕುಮಾರ್,ಮಂಜುನಾಥ್,ಚೇತನ್ ಆಚಾರ್,ಜಯಪ್ರಕಾಶ್, ಸುಪನ್ಯಾಸ್ಕರಾದ ಯೋಗೀಶ್, ಎಸ್.ಜಿ.ರಮೇಶ್,ಶಶಿಭೂಶಣ್,ವಿ.ಎಚ್.ರೇವಣ್ಣ, ಗಿರೀಶ್,ಮಂಜುನಾಥ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ