ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆವತಿಯಿಂದ (ತಾ.೧೯) ಸೋಮವಾರ ಬೆಳಿಗ್ಗೆ ಚಿಕ್ಕನಾಯಕನಹಳ್ಳಿ ಯಲ್ಲಿ ಧರಣಿ ಸತ್ಯಾಗ್ರಹ ಹಾಗೂ ಮೆರವಣಿಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹಸಿರು ಸೇನೆಯ ಕೆಂಕೆರೆ ಸತೀಶ್ ಮನವಿ ಮಾಡಿದ್ದಾರೆ.
ರೈತರ ಬೇಡಿಕೆಗಳಾದ ರೈತರ ಎಲ್ಲಾ ವಿಧವಾದ ಕೃಷಿಸಾಲಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನ್ನಾ ಮಾಡಬೇಕು, ಹೇಮಾವತಿ ನಾಲೆಯಿಂದ ತಾಲ್ಲೂಕಿನ ೨೬ ಕೆರೆಗಳಿಗೆ ತ್ವರಿತವಾಗಿ ಕುಡಿಯುವ ನೀರಿನ ಯೋಜನೆಯನ್ನು ಮುಗಿಸುವಂತೆ, ತಾಲ್ಲೂಕಿನ ಹೊನ್ನೆಬಾಗಿ ಮತ್ತು ಗೊಲ್ಲರಹಟ್ಟಿ,ಹೊಸಹಳ್ಳಿ ಸುತ್ತಮುತ್ತಲ ರೈತರ ಜಮೀನನ್ನು ಆರಣ್ಯ ಇಲಾಖೆಗೆ ಸೇರಿಸಿರುವ ಅದೇಶವನ್ನು ರದ್ದುಪಡಿಸುವಂತೆ, ಬಗರ್ ಹುಕುಂ ಸಾಗುವಳಿದಾರನ್ನು ಒಕ್ಕಲೆಬ್ಬಿಸದೆ ಅವರವರ ಜಮೀನು ಮಂಜೂರು ಮಾಡಿ ಸಾಗುವಳಿ ಪತ್ರ ನೀಡುವಂತೆ. ಕೃಷಿ ಪಂಪ್ ಸೆಟ್ ಗಳಿಗೆ ಹಗಲು ಸಮಯದಲ್ಲಿ ೧೨ ಗಂಟೆ ನಿರಂತರ ವಿದ್ಯುತ್ ಕೊಡುವಂತೆ ಒತ್ತಾಯಿಸಿ ಹಾಗೂ ಹೊಸಕೆರೆ,ದುರ್ಗದಕೆರೆಗೂ ಸಹ ಹೇಮಾವತಿ ನೀರು ಹರಿಸಿ ಹೊನ್ನೆಬಾಗಿ,ಬುಳ್ಳೇನಹಳ್ಳಿ,ದಿಬ್ಬದಹಳ್ಳಿ ಜನರಿಗೆ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ , ರಾಜ್ಯಕಾರ್ಯಾಧ್ಯಕ್ಷ ಬಸವರಾಜಪ್ಪ ನೇತೃತ್ವವಹಿಸಲಿದ್ದು, ಈಚಘಟ್ಟದ ಸಿದ್ದವೀರಪ್ಪ ಚಿ.ನಾ.ಹಳ್ಳಿ ತಾಲ್ಲೂಕು ಅಧ್ಯಕ್ಷ ಕೆ.ಪಿ.ಮಲ್ಲೇಶ್, ತಮ್ಮಡಿಹಳ್ಳಿ ಮಲ್ಲಿಕಣ್ಣ, ತಿಮ್ಮನಹಳ್ಳಿ ಲೋಕೇಶ್ ಮುಂತಾದವರು ಭಾಗವಹಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ