ಹುಳಿಯಾರು ಹೋಬಳಿ ಕೋರಗೆರೆಯಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆಯುತ್ತಿರುವ ಎನ್.ಎಸ್.ಎಸ್ ಶಿಬಿರದಲ್ಲಿ (ತಾ.೨೪) ಶನಿವಾರ ಸಂಜೆ ಪಟ್ಟಣದ ಎಂಟಿಎಸ್ ಟೆಲಿಕಾಮ್ ವತಿಯಿಂದ ಶಿಬಿರಾರ್ಥಿಗಳಿಗೆ ವಿವಿಧ ಆಟೋಟಗಳನ್ನು ಆಡಿಸಲಾಗುತ್ತದೆ.
ಆಟೋಟದಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ಬಗೆಬಗೆ ಬಹುಮಾನಗಳಿದ್ದು ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಎಂಟಿಎಸ್ ಟೆಲಿಕಾಮ್ ನ ಕಿರಣ್ ಕುಮಾರ್ ತಿಳಿಸಿದ್ದಾರೆ.
ಇದೇ ದಿನ ಮಧ್ಯಾಹ್ನ ಲೇಖಕ ಹಗೂ ಸಾವಯವ ಕೃಷಿ ತಜ್ಞ ಶಿವನಂಜಯ್ಯ ಬಾಳೇಕಾಯಿ ಅವರಿಂದ "ತೋಟದತ್ತ ನೂರಾರು ಹೊಸ ಹಾದಿಗಳು" ವಿಷಯ ಕುರಿತ ಸಂವಾದ ನಡೆಯಲಿದೆ.
ಸಂಜೆ ಪಂಡಿತ್ ಬಸವರಾಜು ಅವರಿಂದ "ಹಿತ್ತಲಗಿಡವೇ ಮದ್ದು ಹಾಗೂ ಸ್ಥಳೀಯ ಔಷಧಿ ಸಸ್ಯಗಳ ಪ್ರಾತ್ಯಕ್ಷಿ ಬಗ್ಗೆ ಉಪನ್ಯಾಸ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ