ಹುಳಿಯಾರು ಹೋಬಳಿ ಬೋರನಕಣಿವೆಯ ಸೇವಾಚೇತನದಲ್ಲಿ ಶ್ರೀಶಿರಡಿ ಸಾಯಿಬಾಬ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ವತಿಯಿಂದ ಫೆ.೧ರ ಭಾನುವಾರದಂದು ನೂತನ ಸಾಯಿಮಂದಿರ ಹಾಗೂ ಶಿರಡಿಸಾಯಿಬಾಬ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.
ತಾ.೩೦ರ ಶುಕ್ರವಾರದಿಂದ ತಾ.೧ರ ಭಾನುವಾರದವರೆಗೆ ಮೂರು ದಿನಗಳ ಕಾಲ ನೂತನ ದೇವಾಲಯದ ಪ್ರಾರಂಭೋತ್ಸವದ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ. ತಾ.೧ರ ಭಾನುವಾರ ಸಾಯಿಮಂದಿರದ ಉದ್ಘಾಟನೆಯನ್ನು ಸಚಿವ ಟಿ.ಬಿ.ಜಯಚಂದ್ರ ನೆರವೇರಿಸಲಿದ್ದಾರೆ. ದ್ವಾರಕಮಾಯಿಯ ಉದ್ಘಾಟನೆಯನ್ನು ಟ್ರಸ್ಟ್ ನ ಸಂಸ್ಥಾಪಕರಾದ ಕೆ.ವಿ.ರಮಣಿ ನೆರವೇರಿಸುವರು. ನೊಣವಿನಕೆರೆ ಶ್ರೀಕಾಡಸಿದ್ದೇಶ್ವರಮಠದ ಕರಿವೃಷಭ ಶಿವಯೋಗೀಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದು, ಕವಿ ಹಾಗೂ ಬೋರನಕಣಿವೆ ಸೇವಾಚೇತನದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆವಹಿಸುವರು. ನ್ಯಾಯಮೂರ್ತಿ ಪವನ್ ಕುಮಾರ್ ಭಜಂತ್ರಿ, ಸಂಸಸ ಮುದ್ದಹನುಮೇಗೌಡರು,ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರಾದ ಕಿರಣ್ ಕುಮಾರ್, ಮಾಧುಸ್ವಾಮಿ, ಟ್ರಸ್ಟ್ ನ ಶಾಂತಮ್ಮ ಮಾತಾಜಿ, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ, ನಟ ಡಾ||ರಾಜೇಶ್,ಬೆಂಗಳೂರಿನ ಬಿ.ಕೃಷ್ಣಪ್ಪ ಟ್ರಸ್ಟ್ ನ ಅಧ್ಯಕ್ಷ ರುದ್ರಪ್ಪ ಹನಗವಾಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ