ಮಾನವನ ತನ್ನ ಜೀವನದಲ್ಲಿ ಸಕಲ ಸಂಪತ್ತಿದ್ದದರೂ ಸಹ ಸುಖಸಂತೋಷವಿಲ್ಲದೆ ಬದುಕಿನ ಬಂಡಿ ಸಾಗಿಸುತ್ತಾ ಶಾಂತಿ,ನೆಮ್ಮದಿಯ ಹುಡಕಾಟದಲ್ಲಿದ್ದಾನೆ. ಇಂತಹವರಿಗೆ ನಮ್ಮ ಹಿಂದೂ ದೇವಾಲಯಗಳು ಧ್ಯಾನ ಹಾಗೂ ಜ್ಞಾನದ ಮೂಲಕ ಸುಖ ಶಾಂತಿಯನ್ನು ನೀಡುವ ವೇದಿಕೆಯಾಗಿವೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವಮಹಾಸ್ವಾಮಿಗಳು ತಿಳಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದಲ್ಲಿ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದ ಲಿಂಗಪ್ರತಿಷ್ಠಾಪನಾ ಕಾರ್ಯದ ಧಾರ್ಮಿಕ ಸಭೆಯಲ್ಲಿ ಗುರುಬಸವಮಹಾಸ್ವಾಮಿಗಳು ಅಶೀರ್ವಚನ ನೀಡಿದರು. |
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದಲ್ಲಿ ನಿರ್ಮಿಸಿರುವ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದ ಲಿಂಗಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಅಶೀರ್ವಚನ ನೀಡಿದರು.
ನಮ್ಮ ಪೂರ್ವಿಕರು ದೇವಾಲಯಗಳನ್ನು ಕಟ್ಟುವ ಮೂಲಕ ಸಮುದಾಯದ ಜನರು ಒಂದೆಡೆ ಸೇರಿಸಿ ಪುರಾಣ ಕಥೆಗಳ ಪಠಣ ಹಾಗೂ ಸಭೆಗಳನ್ನು ನಡೆಸಿ ಶಾಂತಿಯುತ ಜೀವನದ ಬಗ್ಗೆ ಮಾಹಿತಿ ನೀಡುವ ಸದುದ್ದೇಶದ ಹೊಂದಿದ್ದರು ಎಂದರು. ಹಳ್ಳಿಗಳಲ್ಲಿ ನಿರ್ಮಿಸುವ ದೇವಾಲಯಗಳಲ್ಲಿ ಇಂದಿಗೂ ಆಚಾರವಿಚಾರಗಳ ಪಾಲನೆಯಾಗುತ್ತಿದ್ದು, ಜನರು ಭಯಭಕ್ತಿಯಿಂದ ನಡೆಯುತ್ತಿದ್ದಾರೆ ಎಂದರು. ದೇವರಿಲ್ಲ ಎಂದು ಕೆಲವರು ಹೇಳಿದರೂ ಮಾನವರ ಮನಸಾಕ್ಷಿಯೇ ಒಂದು ದೇವರಿದ್ದಂತೆ ಅದಕ್ಕೆ ವಿದೇಯರಾಗಿ ನಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಶ್ಯಾಮಸುಂದರ್ ದಿಬ್ಬದಹಳ್ಳಿ ಮಾತನಾಡಿ, ೧೨ನೇ ಶತಮಾನದ ಶಿವಶರಣರು ಜನ ಸಾಮಾನ್ಯರಿಗೆ ತಿಳಿಯುವಂತೆ ಆಡುಮಾತಿನಲ್ಲಿ ಸಾಹಿತ್ಯವನ್ನು ರಚಿಸಿ ಸಮಾಜದ ಅಂಕುಡೊಂಕನ್ನು ತಿದ್ದುವ ಕಾಯಕ ಮಾಡಿದ್ದಾರೆ. ಆದರೆ ಇಂದು ಅವರ ವಚನಗಳನ್ನು ಸಭೆ ಸಮಾರಂಭದಲ್ಲಿ ಕೇಳಿ ಮರೆಯುತ್ತೇವೆ ಹೊರತು ಅವುಗಳ ಪಾಲನೆಯಾಗುತ್ತಿಲ್ಲ ಎಂದರು. ವಚನಕಾರರು ಹೇಳುವಂತೆ ಎಷ್ಟೇ ಐಶ್ವರ್ಯದ್ದರೂ ಜೀವನದಲ್ಲಿ ಸುಖ ಸಂತೋಷವಿಲ್ಲದಿದ್ದರೆ ಎಲ್ಲವೂ ನಿರರ್ತಕ, ಸಂಪತ್ತಿಗಿಂತ ಸಂತೋಷವೇ ಲೇಸು ಎಂದರು. ಮಾನವರಲ್ಲಿ ಸಂಕುಚಿತ ಮನೋಭಾವ ದೂರಾಗಿ ವಿಶಾಲ ಮನೋಭಾವ ಮೂಡಬೇಕಿದೆ ಎಂದರು.
ಬ್ರಹ್ಮಕುಮಾರಿ ಈಶ್ವರೀ ವಿವಿಯ ಗೀತಕ್ಕ , ನಿವೃತ್ತ ಕೃಷಿ ಅಧಿಕಾರಿ ಚಂದ್ರಶೇಖರ್ ಅವರು ಶಿವ ಸಂದೇಶ ಕುರಿತು ಉಪನ್ಯಾಸ ನೀಡಿದರು. ಈವೇಳೆ ಕೆ.ವಿ.ರಮೇಶ್, ಕೆ.ಪಿ.ಚನ್ನಬಸವಯ್ಯ, ಕೋಟ್ರೇಶ್,ಚನ್ನಬಸವಯ್ಯ, ಡಿ.ರಮೇಶ್, ಮಲ್ಲೇಶ್,ಮಧು,ಪ್ರಭು,ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ